ಸಾಧಿಸುವ ಛಲ ಆತ್ಮವಿಶ್ವಾಸ ಹಾಗೂ ನಿರಂತರ ಕಠಿಣ ಪರಿಶ್ರಮವಿದ್ದಾಗ ಜೀವನದಲ್ಲಿ ಅಂದುಕೊಂಡ ಗುರಿ ತಲುಪಲು ಸಾಧ್ಯ ಎಂದು ಯುಪಿಎಸ್ಸಿ ಸಾಧಕಿ ಡಾನಿವೇದಿತಾ ಸಿ ಭಾವಿಮನಿ ಹೇಳಿದರು. ತಾಲೂಕಿನ ಗೆದ್ದಲಮರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ನಾನು ನನ್ನ ಕನಸು ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕನ್ನಡಪ್ರಭ ವಾರ್ತೆ ಹುಣಸಗಿ
ಸಾಧಿಸುವ ಛಲ, ಆತ್ಮವಿಶ್ವಾಸ ಹಾಗೂ ನಿರಂತರ ಕಠಿಣ ಪರಿಶ್ರಮವಿದ್ದಾಗ ಜೀವನದಲ್ಲಿ ಅಂದುಕೊಂಡ ಗುರಿ ತಲುಪಲು ಸಾಧ್ಯ ಎಂದು ಯುಪಿಎಸ್ಸಿ ಸಾಧಕಿ ಡಾ.ನಿವೇದಿತಾ ಸಿ. ಭಾವಿಮನಿ ಹೇಳಿದರು. ತಾಲೂಕಿನ ಗೆದ್ದಲಮರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ನಾನು ನನ್ನ ಕನಸು’ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಜೀವನದಲ್ಲಿ ಕಾಲಹರಣ ಮಾಡದೆ ದೊಡ್ಡ ಕನಸು ಕಾಣಬೇಕು. ಆದರೆ ಕನಸನ್ನು ನನಸಾಗಿಸಲು ನಿರಂತರ ಪ್ರಯತ್ನಿಸಬೇಕು ಎಂದರು. ಮನೆಯಲ್ಲಿ ಪಾಲಕರ ಮಾರ್ಗದರ್ಶನ ಹಾಗೂ ಶಾಲೆಯಲ್ಲಿ ಶಿಕ್ಷಕರ ಸಲಹೆಗಳನ್ನು ಪಡೆದುಕೊಂಡು ಶೈಕ್ಷಣಿಕವಾಗಿ ಮುನ್ನಡೆಯಬೇಕು. ಸಾಧಿಸುವ ಛಲವಿದ್ದರೆ ಮನುಷ್ಯನಿಗೆ ಯಾವುದೂ ಅಡ್ಡಿಯಾಗುವುದಿಲ್ಲ. ಆತ್ಮವಿಶ್ವಾಸದಿಂದ ಸವಾಲುಗಳನ್ನು ಎದುರಿಸಬೇಕು ಎಂದು ಕಿವಿಮಾತು ಹೇಳಿದರು.ಮುಖ್ಯಶಿಕ್ಷಕ ವಿ.ಎಂ.ಬೆಳ್ಳುಬ್ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮಂತ್ರ ಫಾರ್ ಚೇಂಜ್ನ ಸಮರ್ಥ ಕಾರ್ಯಕ್ರಮದ ನೋಡಲ್ ಅಧಿಕಾರಿ ಮೌನೇಶ, ತಮ್ಮಣ್ಣಪ್ಪ ಹಾಗೂ ಬಲಶೆಟ್ಟಿಹಾಳದ ಸಿಆರ್ಪಿ ಬಸವಂತ್ರಾಯ ಮತ್ತು ಶಿಕ್ಷಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಉದಯ ಅಂಬಿಗೇರ ನಿರೂಪಿಸಿದರು. ತೀರ್ಥಪ್ಪ ಸ್ವಾಗತಿಸಿ, ವಂದಿಸಿದರು.