ಸಾರಾಂಶ
ಪುಸ್ತಕಗಳನ್ನು ಓದುವುದರಿಂದ ಸಾಧಾರಣ ವ್ಯಕ್ತಿಯು ಅಸಾಧಾರಣ ವ್ಯಕ್ತಿಯಾಗಬಹುದು. ಮನದೊಳಗಿನ ಕತ್ತಲನ್ನು ಹೋಗಲಾಡಿಸಬೇಕಾದರೆ ಪುಸ್ತಕವನ್ನು ಹಿಡಿಯಬೇಕು ಎಂದು ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಒಂದು ಪ್ರಬುದ್ಧ ಮಸ್ತಕದಿಂದ ಅಮೂಲ್ಯವಾದ ಕೃತಿ ಹೊರಬರಲು ಸಾಧ್ಯ. ಪ್ರಬುದ್ಧ ಮಸ್ತಕಕ್ಕೆ ಧ್ಯಾನ, ಜ್ಞಾನ, ತಪಸ್ಸು, ಆಚಾರ್ಯ ಬಹಳ ಮುಖ್ಯ, ಪ್ರಬುದ್ಧ ಪುಸ್ತಕಗಳ ಅಧ್ಯಯನದಿಂದ ಅಬ್ದುಲ್ ಕಲಾಮ್ ಅವರು ಉನ್ನತ ಹಂತಕ್ಕೆ ಹೋದರು. ಪುಸ್ತಕಗಳನ್ನು ಓದುವುದರಿಂದ ಸಾಧಾರಣ ವ್ಯಕ್ತಿಯು ಅಸಾಧಾರಣ ವ್ಯಕ್ತಿಯಾಗಬಹುದು. ಮನದೊಳಗಿನ ಕತ್ತಲನ್ನು ಹೋಗಲಾಡಿಸಬೇಕಾದರೆ ಪುಸ್ತಕವನ್ನು ಹಿಡಿಯಬೇಕು ಎಂದು ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ ಹೇಳಿದರು.ನಗರದ ತೊರವಿ ರಸ್ತೆಯಲ್ಲಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಹಮ್ಮಿಕೊಂಡ ನನ್ನ ನೆಚ್ಚಿನ ಪುಸ್ತಕ ಓದು ಮತ್ತು ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪುಸ್ತಕದ ಓದು ನಿಮ್ಮನ್ನು ಚಿಂದಿ ಬಟ್ಟೆಯಿಂದ ಚಿನ್ನದ ಬಟ್ಟೆ ಹಾಕಿಕೊಳ್ಳುವಂತೆ ಮಾಡುತ್ತದೆ. ಜೀವನಕ್ಕೆ ಜೀವ ತುಂಬುವ ಶಕ್ತಿ ಸಾಹಿತ್ಯಕ್ಕೆ ಮಾತ್ರ ಇದೆ ಎಂದು ಅವರು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಡಾ.ಜೆ.ಎಸ್.ಪಾಟೀಲ್ ಮಾತನಾಡಿ, ಇಂದು ವರ್ತಮಾನದ ಕೆಲವು ಪುಸ್ತಕಗಳು ಹಾಗೂ ಮೊಬೈಲ್‌ಗಳು ಅರ್ಧ ಸತ್ಯವನ್ನು ಹೇಳುತ್ತವೆ. ಅದಕ್ಕಾಗಿ ಸತ್ಯ ಶೋಧಕ್ಕಾಗಿ ಸಂಶೋಧಕರ ಪುಸ್ತಕವನ್ನು ಹೆಚ್ಚೆಚ್ಚು ಓದಬೇಕೆಂದರು. ಪ್ರಾಧಿಕಾರದ ಸದಸ್ಯ ಡಾ.ಕುಶಾಲ ಬರಗೂರು ಪ್ರಾಸ್ತಾವಿಕ ಮಾತನಾಡಿ ವೈಚಾರಿಕ ನೆಲೆಗಟ್ಟಿನ ಹಿನ್ನೆಲೆಯಲ್ಲಿ ಸಾಹಿತ್ಯವನ್ನು ರಚಿಸಬೇಕಾದರೆ ನಿಸರ್ಗ ಪ್ರೀತಿಸುವ ಪುಸ್ತಕವನ್ನು ಓದಬೇಕೆಂದು ಹೇಳಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ರಫಿಕ್ ಭಂಡಾರಿ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಅಧ್ಯಯನ ಪ್ರವೃತ್ತಿಯನ್ನು ಹೊಂದಬೇಕೆಂದು ಹೇಳಿದರು. ಡಾ.ಚಂದ್ರಕಾಂತ ಕೋಳಿಗುಡ್ಡೆ, ಡಾ.ಎಸ್.ಎಂ. ಗಂಗಾಧರಯ್ಯ, ಡಾ.ಕೆ.ಮಂಜುನಾಥ, ಹಿರಿಯ ಸಾಹಿತಿ ಶಂಕರ ಬೈಚಬಾಳ, ಸಾಹಿತಿ ಅಡವಿಸ್ವಾಮಿ ಕೊಳಮಲಿ ಇದ್ದರು. 15ಕ್ಕು ಹೆಚ್ಚು ವಿದ್ಯಾರ್ಥಿಗಳು ತಾವು ಓದಿದ ಮೆಚ್ಚಿನ ಪುಸ್ತಕವನ್ನು ವಿಮರ್ಶಿಸಿದರು.
;Resize=(128,128))
;Resize=(128,128))