ಶಿವಯೋಗಿಗಳ ಸಮಾಜಸೇವೆ ಮನೋಭಾವನೆ, ಅವರ ಕೊಡುಗೆ ಮತ್ತು ಅವರ ಚಿಂತನೆಗಳನ್ನು ಎಲ್ಲರೂ ಓದಿ ತಿಳಿಯಬೇಕು. ತಮ್ಮ ವಚನಗಳಲ್ಲಿ ಎರಡು ಅಂಕಿತನಾಮಗಳ ಬಳಸಿದ್ದಾರೆ. ಸಮಾಜ ಸೇವೆ ಮೂಲಕ ಶಿವನನ್ನು ಕಾಣಬಹುದು ಎಂದು ಸಾರಿದ್ದಾರೆ.

ಮಂಡ್ಯ:

ಜಗತ್ತಿನಲ್ಲಿ ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮ ಇನ್ನೊಂದಿಲ್ಲ ಎಂದು ಪ್ರತಿಪಾದಿಸಿದ್ದ ಶಿವಯೋಗಿ ಸಿದ್ದರಾಮೇಶ್ವರರು ಜನ ಮನದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯಲ್ಲಿ ಮಾತನಾಡಿ, ಶಿವಯೋಗಿ ಸಿದ್ದರಾಮೇಶ್ವರರು ಒಬ್ಬ ಕಾಯಕ ಯೋಗಿ, ಜ್ಞಾನ ಯೋಗಿಯಾಗಿ ವಚನಗಳ ಮೂಲಕ ಸಮಾಜಕ್ಕೆ ಹಲವು ಕೊಡುಗೆ ಮತ್ತು ಸಂದೇಶ ನೀಡಿದ್ದಾರೆ ಎಂದರು.

ಶಿವಯೋಗಿಗಳ ಸಮಾಜಸೇವೆ ಮನೋಭಾವನೆ, ಅವರ ಕೊಡುಗೆ ಮತ್ತು ಅವರ ಚಿಂತನೆಗಳನ್ನು ಎಲ್ಲರೂ ಓದಿ ತಿಳಿಯಬೇಕು. ತಮ್ಮ ವಚನಗಳಲ್ಲಿ ಎರಡು ಅಂಕಿತನಾಮಗಳ ಬಳಸಿದ್ದಾರೆ. ಸಮಾಜ ಸೇವೆ ಮೂಲಕ ಶಿವನನ್ನು ಕಾಣಬಹುದು ಎಂದು ಸಾರಿದ್ದಾರೆ ಎಂದರು.

ಶಿವಯೋಗಿ ಸಿದ್ದರಾಮೇಶ್ವರ ರವರು ಮಾನವೀಯತೆ ಒಂದೇ ಜಾತಿ ಒಂದೇ ಧರ್ಮ ಎಂಬ ಸಂದೇಶವನ್ನು ಅವರ ವಚನಗಳ ಮೂಲಕ ನೀಡಿದ್ದಾರೆ. 12 ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಅವರ ವಿಚಾರಧಾರೆಯನ್ನು ನೀಡಿದ್ದಾರೆ. ಅನಕ್ಷರತೆ ಮೂಡನಂಬಿಕೆ ಇದ್ದಂತಹ ಸಂದರ್ಭದಲ್ಲಿ ಜಾತಿಯತೆ ವಿರುದ್ಧ ಹೋರಾಡಿದ್ದಾರೆ ಎಂದರು.

ನಿವೃತ್ತ ಶಿಕ್ಷಣಾಧಿಕಾರಿಗಳಾದ ಮಹಾದೇವಪ್ಪ ಮಾತನಾಡಿಸ ಬಾಲ್ಯದಿಂದಲೂ ಶಿವಯೋಗಿ ಸಿದ್ದರಾಮೇಶ್ವರರವರು ಯಾರ ಜೊತೆಯೂ ಬೆರೆಯುತ್ತಿರಲಿಲ್ಲ, ಹೆಚ್ಚು ಮಾತನ್ನು ಕೂಡ ಆಡುತ್ತಿರಲಿಲ್ಲ. ಅವರ ದಿನನಿತ್ಯದ ಕಾರ್ಯ ಹಸುಗಳನ್ನು ಮೇಯಿಸುವುದಾಗಿತ್ತು. ಬಿಜಾಪುರದಿಂದ 40 ಕಿಲೋಮೀಟರ್ ದೂರದಲ್ಲಿ ಈಗಲೂ ಕೂಡ ಶಿವಯೋಗಿ ಸಿದ್ದರಾಮೇಶ್ವರ ರವರ ಸಮಾಧಿ ಇದೆ. ಲೋಕ ಕಲ್ಯಾಣಕ್ಕಾಗಿ ಅವರು ಕಟ್ಟಿಸಿದ ಕೆರೆ ಈಗಲು ಸುಸ್ಥಿತಿಯಲ್ಲಿದೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂದೀಶ್, ಡಿ.ದೇವರಾಜ್ ಅರಸ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಸಂದೇಶ್ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.