ಸಾಮರಸ್ಯ ಜೀವನಕ್ಕೆ ಭಗವದ್ಗೀತೆ ಓದಿ: ಶಾಸಕ ಶರತ್‌

| Published : Aug 19 2025, 01:00 AM IST

ಸಾರಾಂಶ

ಹೊಸಕೋಟೆ: ಮುಂದಿನ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಈಗ ನಿರ್ಮಿಸುತ್ತಿರುವ ಯಾದವ ಸಮುದಾಯ ಭವನದ ಕಾಮಗಾರಿ ಪೂರ್ಣಗೊಳಿಸಿ ನೂತನ ಭವನದಲ್ಲೆ ಆಚರಿಸೋಣ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಹೊಸಕೋಟೆ: ಮುಂದಿನ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಈಗ ನಿರ್ಮಿಸುತ್ತಿರುವ ಯಾದವ ಸಮುದಾಯ ಭವನದ ಕಾಮಗಾರಿ ಪೂರ್ಣಗೊಳಿಸಿ ನೂತನ ಭವನದಲ್ಲೆ ಆಚರಿಸೋಣ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಯಾದವ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ಕೃಷ್ಣ ಕೇವಲ ಹಿಂದೂ ಧರ್ಮಕ್ಕೆ, ನಮ್ಮ ಭಾರತಕ್ಕೆ ಸೀಮಿತವಾಗದೆ ಬದುಕಲು ಕಲಿಸುವ ಮಹಾಗ್ರಂಥ ಭಗವದ್ಗೀತೆಯನ್ನು ನೀಡಿದ್ದಾನೆ. ಶಾಂತಿ, ನೆಮ್ಮದಿಯ ಜೀವನ ಸಾಗಿಸುವ ಸುಲಭ ಮಾರ್ಗ ತೋರಿದ್ದಾರೆ. ರಾಮಾಯಣ, ಮಹಾಭಾರತ ಎಲ್ಲಾ ನಿತ್ಯ ನಮ್ಮ ಜೀವನದಲ್ಲೆ ನಡೆಯುತ್ತಿದೆ. ಆದ್ದರಿಂದ ಕೋಪ, ದ್ವೇಷ, ಅಸೂಯೆಗಳನ್ನು ಬಿಟ್ಟು ಸಾಮರಸ್ಯದ ಜೀವನ ನಡೆಸಿದರೆ ಶ್ರೀಕೃಷ್ಣ ಪ್ರತಿಯೊಬ್ಬರಲ್ಲೂ ನೆಲೆಸಿರುತ್ತಾನೆ ಎಂದರು.

ಯಾದವ ಸಂಘದ ತಾಲೂಕು ಅಧ್ಯಕ್ಷ ವಿ.ಪ್ರಸಾದ್ ಮಾತನಾಡಿ, ಸಮಾಜದಲ್ಲಿ ಅಧರ್ಮ, ಕ್ರೌರ್ಯ ಅಶಾಂತಿ ಹೆಚ್ಚಾದಾಗ ಅದನ್ನು ದಮನಿಸಲು ಶ್ರೀ ಕೃಷ್ಣ ಅವತಾರ ಎತ್ತಿ ಬರುವುದು ನಾವೆಲ್ಲಾ ಮಹಾಭಾರತದಲ್ಲಿ ಕೇಳಿದ್ದೇವೆ, ಅದಕ್ಕನುಗುಣವಾಗಿ ಭಗವದ್ಗೀತ ಗ್ರಂಥವನ್ನು ಪ್ರಪಂಚದ ಉದ್ದಾರಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕೋಡಿಹಳ್ಳಿ ಸುರೇಶ್, ಮುತ್ಸಂದ್ರ ಬಾಬುರೆಡ್ಡಿ, ಬಮೂಲ್ ನಿರ್ದೇಶಕ ಬಿ.ವಿ.ಸತೀಶ್ ಗೌಡ, ಎಲ್‌ಎನ್‌ಟಿ ಮಂಜುನಾಥ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವಮೂರ್ತಿ, ನಿರ್ದೇಶಕ ಕೊರಳೂರು ಸುರೇಶ್, ಜಿಪಂ ಮಾಜಿ ಅಧ್ಯಕ್ಷ ಸಿ ಮುನಿಯಪ್ಪ, ಮುಖಂಡರಾದ ಮುತ್ಸಂದ್ರ ಆನಂದಪ್ಪ, ಭೀಮಕ್ಕನಹಳ್ಳಿ, ವೇಣುಗೋಪಾಲ್, ಬಿ.ವಿ ಬೈರೇಗೌಡ, ರಾಮೇಗೌಡ, ನಗರಸಭೆ ಆಯುಕ್ತ ನೀಲಲೋಚನ ಪ್ರಭು ಇತರರಿದ್ದರು.

ಫೋಟೋ: 18 ಹೆಚ್‌ಎಸ್‌ಕೆ 3

ಹೊಸಕೋಟೆಯ ತಾಲೂಕು ಕಚೇರಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.