ಸಾರಾಂಶ
ವಿದ್ಯಾರ್ಥಿಗಳು ಬದುಕಿಗಾಗಿ ಹಾಗೂ ಜ್ಞಾನಾರ್ಜನೆಗಾಗಿ ಪುಸ್ತಕಗಳನ್ನು ಓದಬೇಕೆಂದು ಸಾಹಿತಿ, ಕವಿ ಪಣಸಮಾಕನಹಳ್ಳಿ ಆರ್.ಚೌಡರೆಡ್ಡಿ ಹೇಳಿದರು.
ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರವಿದ್ಯಾರ್ಥಿಗಳು ಬದುಕಿಗಾಗಿ ಹಾಗೂ ಜ್ಞಾನಾರ್ಜನೆಗಾಗಿ ಪುಸ್ತಕಗಳನ್ನು ಓದಬೇಕೆಂದು ಸಾಹಿತಿ, ಕವಿ ಪಣಸಮಾಕನಹಳ್ಳಿ ಆರ್.ಚೌಡರೆಡ್ಡಿ ಹೇಳಿದರು.ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಮನ್ವಂತರ ಪ್ರಕಾಶನ, ಕೋಲಾರ, ಶ್ರೀನಿವಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನಿಂದ ಜ್ಞಾನ ವಿಕಾಸ ಅಭಿಯಾನದಲ್ಲಿ ಅವರು ಮಾತನಾಡಿದರು.
ವಿವೇಚನೆಗೆ ಜ್ಞಾನ ಅಗತ್ಯವಿದ್ಯಾರ್ಥಿಗಳು ಕೇವಲ ಉದ್ಯೋಗಕ್ಕಾಗಿ, ಬದುಕಿಗಾಗಿ ಪುಸ್ತಕಗಳನ್ನು ಓದಿದರೆ ಸಾಲದು ಮೌಲ್ಯಯುತವಾದ ಜೀವನಕ್ಕಾಗಿ ಜ್ಞಾನ ಸಂಪಾದಿಸಲು ಒಳ್ಳೆಯ ಪುಸ್ತಕಗಳನ್ನು, ಪತ್ರಿಕೆಗಳನ್ನು ಓದಬೇಕು. ಪ್ರತಿಯೊಬ್ಬರಲ್ಲೂ ಜ್ಞಾನ ಎಂಬುದು ಇರುತ್ತದೆ, ಆದರೆ ಅದನ್ನು ಯಾವ ಸಂದರ್ಭದಲ್ಲಿ ಹೇಗೆ ಬಳಕೆ ಮಾಡಿಕೊಳ್ಳಬೇಕು, ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂಬುದನ್ನು ಅರಿತು ಜೀವಿಸಲು ಜ್ಞಾನದ ಅವಶ್ಯಕತೆ ಇದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶ್ರೀನಿವಾಸಪುರ ತಾಲೂಕು ಕಸಾಪ ಅಧ್ಯಕ್ಷೆ ಮಂಜುಳಾ ಮಾತನಾಡಿ, ಮನ್ವಂತರ ಪ್ರಕಾಶನದಿಂದ ಜ್ಞಾನ ವಿಕಾಸ ಅಭಿಯಾನದಿಂದ ಓದುವ ಸಂಸ್ಕೃತಿ ವೃದ್ಧಿಗೆ ಸಹಕಾರಿಯಾಗಿದೆ, ಶ್ರೀನಿವಾಸಪುರದಿಂದಲೇ ಕಳೆದ ಜುಲೈ ತಿಂಗಳಲ್ಲಿ ಆರಂಭವಾದ ಜ್ಞಾನ ವಿಕಾಸ ಅಭಿಯಾನದ ಮೊದಲ ಹಂತದ ಕಾರ್ಯಕ್ರಮ ನಮ್ಮ ತಾಲೂಕಿನಲ್ಲೇ ಸಂಪನ್ನಗೊಂಡಿದ್ದು ಎರಡನೇ ಹಂತದ ಅಭಿಯಾನವೂ ಯಶಸ್ವಿಗೊಳ್ಳಲಿ ಎಂದು ಆಶಿಸಿದರು.ಮನ್ವಂತರ ಪ್ರಕಾಶನದ ಅಧ್ಯಕ್ಷ ಪಾ.ಶ್ರೀ. ಅನಂತರಾಮ ಅಭಿಯಾನಕ್ಕೆ ಸಂಬಂಧಿಸಿದ ಮಾಹಿತಿ ನೀಡಿದರು. ಕಾಲೇಜಿನ ಉಪನ್ಯಾಸಕರಾದ ಜಿ.ಕೆ.ನಾರಾಯಣಸ್ವಾಮಿ, ಶ್ರೀನಾಥ್, ವೇಣುಗೋಪಾಲ್, ಬಿ.ಎನ್.ವೀಣಾ, ಗೋಪಿನಾಥ್, ಎನ್.ವಾಸು ಇದ್ದರು.