ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮಹರ್ಷಿ ವಾಲ್ಮೀಕಿ ಹಿಂದುಗಳ ಪವಿತ್ರ ಗ್ರಂಥ ರಾಮಾಯಣ ರಚಿಸಿದವರು. ಈ ಗ್ರಂಥದಲ್ಲಿ ಅವರ ವ್ಯಕ್ತಿತ್ವ , ಜ್ಞಾನ, ದಾರ್ಶನಿಕತೆ, ಸಮಾಜ ಸುಧಾರಣೆ ಕಾಣಬಹುದು. ಕುಟುಂಬ ಹೇಗಿರಬೇಕು ಎಂಬುದನ್ನು ತನ್ನ ಮಹಾಕಾವ್ಯ. ಮಹಾಕಾವ್ಯಗಳನ್ನು ಓದುವ ಮೂಲಕ ಮಹರ್ಷಿ ವಾಲ್ಮೀಕಿಯಾಗಲು ಪ್ರಯತ್ನಿಸಬೇಕು ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು. ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಮಹರ್ಷಿ ವಾಲ್ಮೀಕಿ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಮಕ್ಕಳಿಗೆ ಸಹ ಜೀವನ ಕಲಿಸಿ
ಜೀವನವನ್ನು ಬದಲಾವಣೆಯನ್ನು ಮಾಡಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿಕೊಟ್ಟವರು ವಾಲ್ಮೀಕಿ. ಅವರು ರಚಿಸಿರುವ ರಾಮಾಯಣದ ಪುರಾವೆಗೆ ಶ್ರೀಲಂಕಾದಿಂದ ಭಾರತಕ್ಕೆ ಅಂಟಿಕೊಂಡಿರುವ ರಾಮ ಸೇತು ವೈಜ್ಞಾನಿಕ ಸಾಕ್ಷಿಯ ಪುರವೆಯಾಗಿದೆ. ವಾಲ್ಮೀಕಿ ಅವರಿಗೆ ದೇಶಕ್ಕೆ ಮತ್ತು ರಾಜ್ಯಕ್ಕೆ ಕೊಟ್ಟಿರುವಂತಹ ಮಹಾಗ್ರಂಥವಾದ ರಾಮಾಯಣ ನೀಡಿದರೆ, ಪಿತೃ ದೇವೋಭವ ಗುರು ದೇವೋಭವ ರಾಮಾಯಣದಲ್ಲಿ ತಿಳಿಸಿರುವಂತೆ ಪೋಷಕರು ಮಕ್ಕಳಿಗೂ ಸಹ ಜೀವನದಲ್ಲಿ ಕಲಿಸಬೇಕು ಎಂದರು.₹4 ಕೋಟಿ ವೆಚ್ಚದಲ್ಲಿ ಭವನಈಗಾಗಲೇ ಚಿಂತಾಮಣಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಭವನದ ನಿರ್ಮಾಣಕ್ಕೆ 4 ಕೋಟಿ ವೆಚ್ಚದ ಅನುದಾನದಲ್ಲಿ ಭವನವನ್ನು ನಿರ್ಮಾಣ ಮಾಡಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣ ಸ್ಥಳ ಗುರುತಿಸಿದ್ದು, ಜಾಗದ ತಕರಾರನ್ನು ಜಿಲ್ಲಾಡಳಿತ ಬಗೆ ಹರಿಸಿದ ನಂತರ 4ಕೋಟಿ ಅನುದಾನವನ್ನು ಸರ್ಕಾರ ದಿಂದ ನೀಡುತ್ತದೆ. ಅದು ಸಾಲುವುದಿಲ್ಲ ಆದ್ದರಿಂದ ಇನ್ನೂ ಹೆಚ್ಚು ಅನುದಾನವನ್ನು ತರಲು ಪ್ರಯತ್ನಿಸುತ್ತೇವೆ. ಬರುವ ವಾಲ್ಮೀಕಿ ಜಯಂತಿಯನ್ನು ಕನ್ನಡ ಭವನದಲ್ಲಿ ಆಚರಿಸಲಾಗುತ್ತದೆ ಎಂದು ಭರವಸೆ ನೀಡಿದರು.
ರಾಮಾಯಣ ಎಲ್ಲರಿಗೂ ಆದರ್ಶಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಶ್ರೀ ಮಹರ್ಷಿ ವಾಲ್ಮೀಕಿ ರಾಮಾಯಣ ನಮ್ಮೆಲ್ಲರಿಗೂ ಆದರ್ಶ, ಸಮುದಾಯದ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉತ್ತಮರಾಗಬೇಕು. ಕಷ್ಟ ಪಟ್ಟು ಚೆನ್ನಾಗಿ ಓದಿ ತಂದೆ ತಾಯಿ ಒಳ್ಳೆಯ ಹೆಸರು ತರಬೇಕು. ವಾಲ್ಮೀಕಿ ಭವನದ ನಿರ್ಮಾಣ ನನ್ನ ಜವಾಬ್ದಾರಿ. ವಾಲ್ಮೀಕಿ ಭವನಕ್ಕೆ 4 ಕೋಟಿ ಅನುದಾನವನ್ನು ಸರ್ಕಾರ ತಂದು ಭವನವನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ಉಪನ್ಯಾಸಕ ಎನ್. ಚಂದ್ರ ಶೇಖರ್ ವಾಲ್ಮೀಕಿ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸಮುದಾಯದ 2024 ನೇ ಸಾಲಿನ ಎಸ್. ಎಸ್. ಎಲ್. ಸಿ ಹಾಗೂ ದ್ವಿತೀಯ ಪಿಯುಸಿ ಅತಿಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ 10 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.ಫಲಾನುಭವಿಗಳಿಗೆ ಸನ್ಮಾನ
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಯೋಜನೆಗಳಾದ ಹೈನುಗಾರಿಕೆ, ಹಸು, ಎಮ್ಮೆ, ಮೊಲ ಸಾಕಾಣಿಕೆ, ಪಾಲಿ ಮನೆ , ಸೌಲಭ್ಯಗಳ ಪಡೆದುಕೊಂಡ ಫಲಾನುಭವಿಗಳಿಗೆ ಸನ್ಮಾನಿಸಲಾಯಿತು. ನಂತರ ಜಿಲ್ಲೆಯ ಸಮುದಾಯದಲ್ಲಿ ಸಾಧನೆಗೈದ 9 ಜನ ಸಾಧಕರಿಗೆ ಸನ್ಮಾನಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ವಾಪಸಂದ್ರದ ರಂಗನಾಥಸ್ವಾಮಿ ದೇವಾಲಯದಿಂದ ಸಚಿವ ಡಾ.ಎಂ.ಸಿ. ಸುಧಾಕರ್ ಮತ್ತು ಶಾಸಕ ಪ್ರದೀಪ್ ಈಶ್ವರ್ ಪಲ್ಲಕ್ಕಿ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ,ಅಪರ ಜಿಲ್ಲಾಧಿಕಾರಿ ಡಾ.ಎನ್ ಭಾಸ್ಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಐ. ಖಾಸಿಂ, ಉಪವಿಭಾಗಾಧಿಕಾರಿ ಡಿ.ಎಲ್ ಅಶ್ವಿನ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಎನ್ ಕೇಶವರೆಡ್ಡಿ, ತಾಲ್ಲೂಕು ತಹಶೀಲ್ದಾರ್ ಅನಿಲ್ ಕುಮಾರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಆರ್.ಪ್ರವೀಣ್ ಪಾಟೀಲ್, ನಗರಸಭೆ ಅಧ್ಯಕ್ಷ ಎ.ಗಜೇಂದ್ರ, ಉಪಾಧ್ಯಕ್ಷ ಜೆ.ನಾಗರಾಜ್, ಸದಸ್ಯರು ಇದ್ದರು.