ಚಿಕ್ಕಮಗಳೂರುಇತಿಹಾಸವನ್ನ ಸೃಷ್ಠಿಸಬೇಕಾದರೆ ಇತಿಹಾಸ ಸೃಷ್ಠಿಸಿದ ವ್ಯಕ್ತಿಗಳ ಜೀವನ ಚರಿತ್ರೆ ಓದಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಶ್ರೀ ಡಾ.ನಿರ್ಮಲಾನಂದ ನಾಥ ಸ್ವಾಮೀಜಿ ಹೇಳಿದರು.
- ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಇತಿಹಾಸವನ್ನ ಸೃಷ್ಠಿಸಬೇಕಾದರೆ ಇತಿಹಾಸ ಸೃಷ್ಠಿಸಿದ ವ್ಯಕ್ತಿಗಳ ಜೀವನ ಚರಿತ್ರೆ ಓದಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಶ್ರೀ ಡಾ.ನಿರ್ಮಲಾನಂದ ನಾಥ ಸ್ವಾಮೀಜಿ ಹೇಳಿದರು.
ಸೋಮವಾರ ತಾಲೂಕಿನ ಆಲ್ದೂರು ಪಟ್ಟಣದ ಸರ್ಕಲ್‌ನಲ್ಲಿ ಒಕ್ಕಲಿಗರ ಸಂಘದಿಂದ ಪ್ರತಿಷ್ಠಾಪಿಸಲಾದ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ಥಳಿ ಅನಾವರಣಗೊಳಿಸಿ ಆಶೀರ್ವಚನ ನೀಡಿದ ಅವರು, ಜನಪದರು ಹೇಳುವಂತೆ ಕೆಂಪೇಗೌಡರು ಆಚಾರಕ್ಕೆ ಹೆಸರಾಗಿದ್ದರು. ನೀತಿಗೆ ಪ್ರಭು ವಾಗಿದ್ದರು. ಮಾತಿನಲಿ ಚೂಡಾಮಣಿಯಾಗಿದ್ದರು. ತಮ್ಮ ಬದುಕು ಓದಿಸಿಕೊಳ್ಳಲು ಯೋಗ್ಯ ರೀತಿಯಲ್ಲಿ ಬದುಕಿ ಹೋದವರು ಎಂದರು.ಸಾಧಕರು ಯಾವುದೇ ಜಾತಿಗೆ ಸೇರಿದವರು ಎನ್ನುವುದು ಮುಖ್ಯವಲ್ಲ. ಅಂಬೇಡ್ಕರ್ ಅವರು ಎಷ್ಟೆಲ್ಲಾ ಅಪಮಾನ, ಕಷ್ಟಗಳನ್ನು ಅನುಭವಿಸಿದರೂ ಯಾರಮೇಲೂ ದೂರು ಕೊಡಲು ಹೋಗಲಿಲ್ಲ. ಅವರ ಗಮನವೆಲ್ಲ ನಿರಂತರ ಓದಿನ ಕಡೆ ಇತ್ತು. ಇಂದಿಗೂ ಗಗನ ಕುಸುಮದಂತಿರುವ ಅಮೆರಿಕಾ ದಂತಹ ಕೊಲಂಬೋ ಯೂನಿವರ್ಸಿಟಿಯಲ್ಲಿ ಅಂದೇ ಕಲಿತರು. ಸಂವಿಧಾನ ಬರೆಯುವ ಶಕ್ತಿಯೂ ಅವರಿಗೆ ಬಂತು. ಯಾವುದೇ ಮೀಸಲಾತಿ ಇಲ್ಲದ ಸಂದರ್ಭದಲ್ಲಿ ಅವರನ್ನು ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿ ನೇಮಿಸಲಾಯಿತು. ಇಂತಹ ಜ್ಞಾನ ಪರಂಪರೆ ಪಡೆದ ಯಾವುದೇ ವ್ಯಕ್ತಿಯನ್ನ ನಾವು ಯಾವುದೇ ಸಮುದಾಯಕ್ಕೆ, ಧರ್ಮಕ್ಕೆ ಸೀಮಿತಗೊಳಿಸದೆ ಎಲ್ಲಾ ಮಕ್ಕಳಿಗೆ ಅವರ ಸಾಧನೆ ತಿಳಿಸಿಕೊಡಬೇಕು ಎಂದರು.
ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಟಾರ್ಟ್ಅಪ್‌ಗಳ ಬಗ್ಗೆ ಮಾತನಾಡುತ್ತಿವೆ. ಈ ಸ್ಟಾರ್ಟ್ಅಪ್ ಇಂಡಿಯಾ ಸಂಸ್ಕೃತಿಯನ್ನು ಕೆಂಪೇಗೌಡರು ಅಂದೇ ಪರಿಚಯಿಸಿದ್ದರು. ಕಳೆದ ಹತ್ತು ವರ್ಷದಲ್ಲಿ ನಮ್ಮ ದೇಶದಲ್ಲಿ ಸುಮಾರು 2 ಲಕ್ಷ ಸ್ಟಾರ್ಟ್ಅಪ್‌ಗಳು ಬಂದಿವೆ. ದೇಶದ ಆರ್ಥಿಕತೆಯೂ ಬೆಳೆಯುತ್ತಿದೆ. ಇದಲ್ಲದೆ ಕೆಂಪೇಗೌಡರು ಅಂದಿನ ದಿನದಲ್ಲೇ ವಿವಿಧ ಸಮುದಾಯದ ಕುಶಲತೆಯನ್ನ ಸಮಾಜದ ಅಭಿವೃದ್ಧಿಗೆ ಉಪಯೋಗಿಸಿದವರು ಎಂದರು.ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಮುಂದಿನ ಪೀಳಿಗೆಗೆ ಇತಿಹಾಸದ ನೆನಪಿಸುವ ದೃಷ್ಠಿಯಿಂದ ಇಂತಹ ಪುತ್ಥಳಿ ನಿರ್ಮಿಸುವುದು ಒಳ್ಳೆಯ ಕಾರ್ಯ. ಇತಿಹಾಸ ಮರೆತರೆ, ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ. ನಾಡಪ್ರಭು ಕೆಂಪೇಗೌಡರ ಇತಿಹಾಸ ಎಲ್ಲರೂ ತಿಳಿದುಕೊಳ್ಳಬೇಕು ಎಂದರು. ರಾಜ್ಯ ಯುವ ಜನತಾದಳದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಆದಿಚುಂಚನಗಿರಿ ಮಠದಿಂದ ಕೆಂಪೇಗೌಡರ ಹೆಸರಿನಲ್ಲಿ ಸಿಟಿ ಮೊಬಿಲಿಟಿ ಅಂಡ್ ಸಸ್ಟೇನಬಲ್ ಕಾಲೇಜನ್ನು ಸ್ಥಾಪಿಸಲು ಶ್ರೀಗಳು ಯೋಜಿಸಿದ್ದಾರೆ. ಯುವ ಸಮುದಾಯಕ್ಕೆ ಕೆಂಪೇಗೌಡರು ಹಾಕಿಕೊಟ್ಟ ಮಾರ್ಗಕ್ಕೆ ತಕ್ಕಂತೆ ತರಬೇತಿ ನೀಡುವ ಮೂಲಕ ಸುಸ್ಥಿರ ಸಮಾಜ ಕಟ್ಟಲು ಅನುಕೂಲವಾಗುವಂತೆ ಕಾಲೇಜು ತರಬೇಕು ಎಂದು ಮನವಿ ಮಾಡಿದರು.ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ ಮಾತನಾಡಿ, 500 ವರ್ಷ ಕಳೆದರೂ ಕೆಂಪೇಗೌಡರನ್ನು ಆರಾಧಿಸುತ್ತಿದ್ದೇವೆ. ಎಲ್ಲಾ ಜನಾಂಗಕ್ಕೆ ಅನುಕೂಲವಾಗುವಂತೆ ಬೆಂಗಳೂರು ಕಟ್ಟಿ, ಎಲ್ಲವನ್ನೂ ಸಮಾಜಕ್ಕೆ ತ್ಯಾಗ ಮಾಡಿದ್ದಾರೆ. ಇದರ ಪರಿಣಾಮ ಬೆಂಗಳೂರು ನಗರ ಸಿಲಿಕಾನ್ ಸಿಟಿಯಾಗಿದೆ ಎಂದರು.ಆಲ್ದೂರು ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಬಿ.ಅಶೋಕ್, ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಶಾಸಕರಾದ ರಾಜೇಗೌಡ, ಸಿ.ಟಿ.ರವಿ, ಎಸ್.ಎಲ್.ಬೋಂಜೇಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಪೂರ್ಣೇಶ್, ತಾಲೂ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಎಚ್.ಎಸ್.ಕವೀಶ್, ಉಪಾಧ್ಯಕ್ಷ ಸಂಪತ್ ಹೆಡದಾಳ್, ಕಾರ್ಯದರ್ಶಿ ಡಿ.ಎಸ್.ವಸಂತ್ ಕುಮಾರ್, ಖಜಾಂಚಿ ಎಸ್.ಕೆ.ಲಿಂಗೇಗೌಡ ಉಪಸ್ಥಿತರಿದ್ದರು.
ರಾಮನಗರದ ಮಣ್ಣು ಬಿಟ್ಟು ಎಲ್ಲಿಯೂ ಹೋಗಲ್ಲ: ನಿಖಿಲ್‌ಚಿಕ್ಕಮಗಳೂರು: ರಾಮನಗರ ತಂದೆ ಕರ್ಮಭೂಮಿ, ತಾತನಿಗೆ ರಾಜಕೀಯ ಮರುಜನ್ಮ ನೀಡಿದ ಪುಣ್ಯಭೂಮಿ, ಹಾಗಾಗಿ ಆ ಮಣ್ಣನ್ನು ಬಿಟ್ಟು ಎಲ್ಲಿಗೂ ಹೋಗು ವುದಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''''''''ರಾಮನಗರ ಜಿಲ್ಲೆ ತಂದೆಯವರ ಕರ್ಮಭೂಮಿ. 1994ರಲ್ಲಿ ಹಾಸನದಿಂದ ಬಂದಂತಹ ತಾತ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌರಿಗೆ ರಾಜಕೀಯವಾಗಿ ಮರುಜನ್ಮ ನೀಡಿದ ಪುಣ್ಯ ಭೂಮಿ. ಅಂತಹ ಮಣ್ಣನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಎಂದಿದ್ದಾರೆ.ರಾಮನಗರದ ಪಕ್ಷದ ಮುಖಂಡರಿದ್ದಾರೆ. ನಮ್ಮ ಕುಟುಂಬ ಪ್ರೀತಿಸುವ ಒಂದು ದೊಡ್ಡ ವರ್ಗವೇ ಅಲ್ಲಿದೆ. ಅವರನ್ನು ನಡುನೀರಿನಲ್ಲಿ ಕೈಬಿಟ್ಟು ಬೇರೆ ಕ್ಷೇತ್ರಕ್ಕೆ ವಲಸೆ ಹೋಗುವ ಜಾಯಮಾನ ನಮ್ಮದಲ್ಲ. ಬೇರೆ ಯಾವುದೇ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.ದೇವೇಗೌಡರ ಕುಟುಂಬ ರಾಮನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಅಪಾರ ಶ್ರಮ ಹಾಕಿದೆ. ಅಲ್ಲಿನ ನೀರಾವರಿ, ರಸ್ತೆ ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯಗಳ ವೃದ್ಧಿಗೆ ಪ್ರಾಮಾಣಿಕವಾಗಿ ದುಡಿದಿದ್ದೇವೆ. ಈ ಅಭಿವೃದ್ಧಿ ಕೆಲಸಗಳೇ ನಮಗೆ ಶ್ರೀರಕ್ಷೆಯಾಗಲಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಜನರ ವಿಶ್ವಾಸಗಳಿಸುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪಕ್ಷಕ್ಕೆ ಸಣ್ಣಪುಟ್ಟ ಹಿನ್ನೆಡೆಗಳಾಗಿರಬಹುದು, ರಾಜಕೀಯದಲ್ಲಿ ಏರುಪೇರುಗಳು ಸರ್ವೇ ಸಾಮಾನ್ಯ. ಕಳೆದ ನಾಲ್ಕು ಚುನಾವಣೆಗಳಲ್ಲಿ ರಾಮನಗರದ ಜನತೆ ನಮ್ಮ ಕೈಬಿಟ್ಟಿರಲಿಲ್ಲ. ಆದರೆ ಕೆಲವೊಮ್ಮೆ ಕಾಲಘಟ್ಟದಲ್ಲಿ ಬದಲಾವಣೆಗಳಾಗುತ್ತವೆ. ಅದೆಲ್ಲವನ್ನೂ ಸಮತೋಲನದಿಂದ ಸ್ವೀಕರಿಸಬೇಕು ಎಂದು ತಿಳಿಸಿದರು.----ಬಾಕ್ಸ್---ಪಾರದರ್ಶಕವಾಗಿದ್ದರೆ ಜಾತಿಗಣತಿ ಸ್ವಾಗತಿಸುತ್ತೇವೆಜಾತಿಗಣತಿ ಕೇವಲ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಯ ಹಿತದೃಷ್ಟಿಯಿಂದ ನಡೆಯಬೇಕೇ ಹೊರತು, ಇದು ರಾಜಕೀಯ ಉದ್ದೇಶದ ತಂತ್ರವಾಗಬಾರದು. ಸರ್ಕಾರದ ಲೋಪದೋಷಗಳು ಹಾಗೂ ಸಮಸ್ಯೆಗಳು ಎದುರಾದಾಗ ಜನರನ್ನು ದಿಕ್ಕು ತಪ್ಪಿಸಲು ಇಂತಹ ವಿಚಾರವನ್ನು ಮುನ್ನೆಲೆಗೆ ತರುವುದು ಸರಿಯಲ್ಲ. ಜಾತಿಗಣತಿಯನ್ನು ನಾವು ಸ್ವಾಗತಿಸುತ್ತೇವೆ, ಆದರೆ ಈ ವರದಿ ಅತ್ಯಂತ ಪಾರದರ್ಶಕ ವಾಗಿರಬೇಕು, ಜನಪರವಾಗಿರಬೇಕೇ ಹೊರತು ರಾಜಕೀಯ ಪ್ರೇರಿತವಾಗಿರಬಾರದು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.(ನಿಖಿಲ್ ಕುಮಾರಸ್ವಾಮಿ ಫೋಟೋ ಬಳಸಿ)ಫೋಟೋ
ತಾಲೂಕಿ ಆಲ್ದೂರು ಪಟ್ಟಣದ ಸರ್ಕಲ್‌ನಲ್ಲಿ ಒಕ್ಕಲಿಗರ ಸಂಘದಿಂದ ಪ್ರತಿಷ್ಠಾಪಿಸಲಾದ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ಥಳಿ ಅನಾವರಣಗೊಳಿಸಲಾಯಿತು. ಈ ವೇಳೆ ಶ್ರೀ ಡಾ.ನಿರ್ಮಲಾನಂದ ನಾಥ ಸ್ವಾಮೀಜಿ, ನಿಖಲ್ ಕುಮಾರಸ್ವಾಮಿ, ಶಾಸಕಿ ನಯನ ಮೋಟಮ್ಮ, ಭೋಜೇಗೌಡ ಮೊದಲಾದವರಿದ್ದರು.