ಜಾತಿಗಣತಿ ವರದಿ ಮೊದಲು ಓದಿ, ಓದದೇ ವಿರೋಧಿಸಬೇಡಿ: ಜಯಪ್ರಕಾಶ್‌ ಹೆಗ್ಡೆ

| Published : Oct 10 2024, 02:20 AM IST

ಜಾತಿಗಣತಿ ವರದಿ ಮೊದಲು ಓದಿ, ಓದದೇ ವಿರೋಧಿಸಬೇಡಿ: ಜಯಪ್ರಕಾಶ್‌ ಹೆಗ್ಡೆ
Share this Article
  • FB
  • TW
  • Linkdin
  • Email

ಸಾರಾಂಶ

ವರದಿಯನ್ನು ಓದಿದರೆ ಯಾರು ವಿರೋಧಿಸುವುದಿಲ್ಲ, ನಾವು ಮಾಡಿರುವ ಸಮೀಕ್ಷೆ ಮತ್ತು ನಮ್ಮ ಸಲಹೆಗಳ ಬಗ್ಗೆ ನನಗೆ ಅಷ್ಟು ವಿಶ್ವಾಸವಿದೆ. ಈ ವರದಿ ತಯಾರಿಸುವುದಕ್ಕೆ 163 ಕೋಟಿ ರು. ಖರ್ಚಾಗಿದೆ. ಆದ್ದರಿಂದ ಈ ವರದಿಯನ್ನು ವಿರೋಧಿಸದೇ ಸ್ವೀಕರಿಸಿ ಎಂದು ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಹಸ್ತಾಂತರಿಸಿರುವ ಆಯೋಗದ ಮಾಜಿ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ಕೋರಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸರ್ಕಾರಕ್ಕೆ ಸಲ್ಲಿಸಿದ ಜಾತಿ ಗಣತಿ ಯಾನೆ ಸಾಮಾಜಿಕ - ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಓದದೇ ಯಾರೂ ವಿರೋಧ ಮಾಡಬಾರದು. ವರದಿಯನ್ನು ಓದಿದರೆ ಯಾರು ವಿರೋಧಿಸುವುದಿಲ್ಲ, ನಾವು ಮಾಡಿರುವ ಸಮೀಕ್ಷೆ ಮತ್ತು ನಮ್ಮ ಸಲಹೆಗಳ ಬಗ್ಗೆ ನನಗೆ ಅಷ್ಟು ವಿಶ್ವಾಸವಿದೆ. ಈ ವರದಿ ತಯಾರಿಸುವುದಕ್ಕೆ 163 ಕೋಟಿ ರು. ಖರ್ಚಾಗಿದೆ. ಆದ್ದರಿಂದ ಈ ವರದಿಯನ್ನು ವಿರೋಧಿಸದೇ ಸ್ವೀಕರಿಸಿ ಎಂದು ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಹಸ್ತಾಂತರಿಸಿರುವ ಆಯೋಗದ ಮಾಜಿ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ಕೋರಿದ್ದಾರೆ.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊನ್ನೆ ಮುಖ್ಯಮಂತ್ರಿಗಳು ಸಭೆ ಕರೆದಿದ್ದರು ನಾನು ಭಾಗವಹಿಸಿದ್ದೆ. ಕಾಂತರಾಜ್ ಸಮೀಕ್ಷೆಯನ್ನು ಹಿಂದಿನ ಸರ್ಕಾರಗಳು ಒಪ್ಪಿಲ್ಲ. ಆದ್ದರಿಂದ ನಾನು ತಯಾರಿಸಿದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇನೆ. ವರದಿಯನ್ನು ಅ.18ರಂದು ಕ್ಯಾಬಿನೆಟ್ ಸಭೆಯಲ್ಲಿ ಇರಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ನಮ್ಮ ಒಂದು ವರದಿ ಶಾಶ್ವತ ದಾಖಲೆಯಾಗಿ ಉಳಿಯಲಿದೆ. ಇದಕ್ಕಿಂತ ಖುಷಿಯ ವಿಚಾರ ಬೇರೆ ಇಲ್ಲ ಎಂದವರು ಹೇಳಿದರು.ವರದಿ ಸ್ವೀಕಾರಕ್ಕೆ ಕಾಂಗ್ರೆಸ್ ಪಕ್ಷದ ಪ್ರಬಲ ಸಮುದಾಯದ ನಾಯಕರ ವಿರೋಧಕ್ಕೆ ಪ್ರತಿಕ್ರಿಯಿಸಿದ ಹೆಗ್ಡೆ, ಕ್ಯಾಬಿನೆಟ್‌ನಲ್ಲಿ ಚರ್ಚೆ ಆಗುವಾಗ ಎಲ್ಲ ನಾಯಕರಿಗೂ ವರದಿಯಲ್ಲೇನಿದೆ ಎಂದು ತಿಳಿಯುತ್ತದೆ. ಯಾರು ಕೂಡ ಅದನ್ನು ಓದದೇ ವಿರೋಧ ಮಾಡಬಾರದು, ಓದಿದ ನಂತರ ತಪ್ಪಿದ್ದರೆ ಸೂಚಿಸಬಹುದು, ಸೂಕ್ತವಾಗಿ ಬದಲಾಯಿಸಬಹುದು ಎಂದವರು ತಿಳಿಸಿದರು.