ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತೃತೀಯ ಲಿಂಗಿಗಳ ಬಗ್ಗೆ ನಾಗರಿಕ ಸಮಾಜ ಅಸಹಾಯಕತೆ ಬೆಳೆಸಿಕೊಳ್ಳಬಾರದು, ಅವರು ಕೂಡ ಈ ಸಮಾಜದಲ್ಲಿ ಬದುಕುವ ಹಕ್ಕು ಹೊಂದಿರುವವರು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದರು.ಕರ್ನಾಟಕ ಸಾಹಿತ್ಯ ಆಕಾಡೆಮಿ ಸಹಯೋಗದಲ್ಲಿ ಪಟ್ಟಣದಲ್ಲಿನ ವೈದ್ಯ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದ ಚಕೋರ ಉಪನ್ಯಾಸ ಮಾಲಿಕೆ -೧೪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತೃತೀಯ ಲಿಂಗಿಗಳು ಎಲ್ಲ ರೀತಿಯ ಗೌರವಯುತ ಬದುಕು ನಡೆಸಲು ಹಕ್ಕುದಾರರು. ಇದನ್ನು ಅರ್ಥ ಮಾಡಿಕೊಳ್ಳದ ನಾಗರಿಕ ಸಮಾಜ ಅವರನ್ನು ಕೀಳರಿಮೆಯಿಂದ ನೋಡುತ್ತಿದೆ. ಅವರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿದೆ. ಅವರಿಗೆ ಸೂಕ್ತ ಉದ್ಯೋಗವಿಲ್ಲದೇ ಭಿಕ್ಷೆ ಬೇಡುವ ಸ್ಥಿತಿ ಇಂದಿಗೂ ಇರುವುದು ಶೋಚನೀಯ. ಹೊಟ್ಟೆಪಾಡಿಗಾಗಿ ಕೆಲವರು ಲೈಂಗಿಕ ಅಲ್ಪಸಂಖ್ಯಾತರಾಗಿದ್ದು ಅವರ ಮೇಲೆ ರೌಡಿಗಳು, ಕೆಲ ಪೊಲೀಸರಿಂದ ಅನ್ಯಾಯ, ಅತ್ಯಾಚಾರಗಳಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.ಇಂದಿನ ಯುವಕರು, ವಿದ್ಯಾರ್ಥಿಗಳು ಅವರ ಕುರಿತಾಗಿ ಕೀಳರಿಮೆ, ಅಸಹಾಯಕತೆ ಬೆಳೆಸಿಕೊಳ್ಳಬಾರದು. ಅವರು ಬದುಕು, ಜೀವನವನ್ನು ಅವರ ಕುರಿತಾಗಿ ಬಂದಿರುವ ಕೃತಿ, ಸಿನಿಮಾಗಳ ಮೂಲಕ ತಿಳಿಯಬೇಕು. ದೇಹದಲ್ಲಿ ಹಾರ್ಮೋನ್‌ಗಳ ವ್ಯತ್ಯಾಸದಿಂದ ಉಂಟಾಗುವ ಅವರ ಭಾವನೆ, ನಡವಳಿಕೆ, ರೀತಿ, ನೀತಿಗಳನ್ನು ಸಮಾಜ ಒಪ್ಪಿಕೊಳ್ಳಬೇಕು. ಮನುಷ್ಯ ಸಾಹಿತ್ಯವನ್ನು ಓದಬೇಕು. ಆಗ ಎಂತಹ ಕ್ರೂರಿಯೂ ಉತ್ತಮ ಮನುಷ್ಯನಾಗಲು ಸಾಧ್ಯವೆಂದರು.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಚ್. ಎನ್. ಮಲ್ಲೇಶ್ ಗೌಡ ಮಾತನಾಡಿ, ಸಾಹಿತ್ಯ ಅಕಾಡೆಮಿಯೂ ಪ್ರತಿ ತಿಂಗಳಿಗೊಮ್ಮೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಸುತ್ತಾ ಬಂದಿದೆ. ಚಕೋರ ಉಪನ್ಯಾಸ ಮಾಲಿಕೆಯನ್ನು ಹುಟ್ಟು ಹಾಕಿದ್ದು ಆಕಾಡೆಮಿ ಅಧ್ಯಕ್ಷರಾದ ಎಲ್. ಎನ್. ಮುಕುಂದರಾಜ್ ಅವರು, ಎಳೆಯ ತಲೆಮಾರು ಮಹತ್ತರವಾದ ಚಿಂತನೆಗಳಲ್ಲಿ ತೊಡಗಬೇಕು, ಪ್ರಪಂಚ ದೊಡ್ಡದಿದೆ. ಅದನ್ನು ಆಳವಾಗಿ ಅರಿಯಬೇಕು, ಹೊಸ ಆಲೋಚನೆಗಳನ್ನು ಸೃಷ್ಟಿಸಬೇಕು. ಸಾಹಿತ್ಯ, ಚಿಂತನೆ, ವೈಚಾರಿಕತೆಯತ್ತ ಮುಖ ಮಾಡಬೇಕು ಎಂಬುದು ಅಕಾಡೆಮಿಯ ಉದ್ದೇಶವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಹೋರಾಟಗಾರ್ತಿ ವರ್ಷ ಹಾಸನರವರು ಪ್ರಸ್ತುತ ಸಂದರ್ಭದಲ್ಲಿ ತೃತೀಯ ಲಿಂಗಿಗಳ ಬದುಕು ಕುರಿತಾಗಿ ಮಾತನಾಡಿ, ಸರ್ಕಾರ ಅಲ್ಪಸಂಖ್ಯಾತರ ಪರವಾದ ಹಲವು ಬಿಲ್‌ಗಳನ್ನು ತಂದಿದ್ದರೂ ಯಾವುದೂ ಸಮರ್ಪಕವಾಗಿ ಜಾರಿಯಾಗಿಲ್ಲ, ಇಂದಿಗೂ ನಾವುಗಳು ಶೋಷಣೆಗೊಳಗಾಗುತ್ತಿದ್ದೇವೆ. ಬೆಳವಣಿಗೆಯ ಹಂತದಲ್ಲಿ ನಮ್ಮ ಭಾವನೆಗಳು ಬದಲಾಗಿ, ತೃತೀಯ ಲಿಂಗಿಗಳಾಗಿ ಮಾರ್ಪಡುವ ನಮಗೆ ಮೊದಲಿಗೆ ನಮ್ಮ ಮನೆಯಿಂದಲೇ ಕೀಳರಿಮೆ ಆರಂಭವಾಗುತ್ತದೆ. ಮನೆ ಯಿಂದ ಆಚೆ ಹಾಕುತ್ತಾರೆ. ಉದ್ಯೋಗ, ವಿದ್ಯೆಯಿಲ್ಲದೇ ನಾವು ನಮ್ಮ ಹೊಟ್ಟೆಪಾಡಿಗಾಗಿ ಭಿಕ್ಷೆ, ಲೈಂಗಿಕ ಕಾರ್ಯಕರ್ತರಾಗಬೇಕಾಗಿದೆ. ನಮ್ಮ ಬಗೆ ಇರುವ ಕೀಳರಿಮೆ ಇಂದಿನ ಸಮಾಜದಲ್ಲಿ ಕಡಿಮೆಯಾಗಬೇಕಾದರೆ ಪಠ್ಯದಲ್ಲಿ ನಮ್ಮ ಬದುಕಿನ ಕುರಿತು ವಿಷಯ ಸೇರ್ಪಡೆಯಾಗಬೇಕೆಂದರು. ಸಾಹಿತ್ಯ ಆಕಾಡೆಮಿಯ ಸದಸ್ಯ ಸಂಚಾಲಕಿ, ಹಿರಿಯ ಕವಚುತ್ರಿ ಎಚ್. ಆರ್. ಸುಜಾತ, ವೈದ್ಯ ಪ್ಯಾರಮೆಡಿ ಕಲ್ ಕಾಲೇಜಿನ ಪ್ರಾಂಶುಪಾಲ ಬಿ. ಎಲ್.ಅರುಣ್ ಕುಮಾರ್ ಇದ್ದರು.ಸಾಹಿತ್ಯ ಓದುವುದರಿಂದ ಕ್ರೂರಿಯೂ ಮನುಷ್ಯನಾಗುತ್ತಾನೆ
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಚ್. ಎನ್. ಮಲ್ಲೇಶ್ ಗೌಡ ಮಾತನಾಡಿ, ಸಾಹಿತ್ಯ ಅಕಾಡೆಮಿಯೂ ಪ್ರತಿ ತಿಂಗಳಿಗೊಮ್ಮೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಸುತ್ತಾ ಬಂದಿದೆ. ಚಕೋರ ಉಪನ್ಯಾಸ ಮಾಲಿಕೆಯನ್ನು ಹುಟ್ಟು ಹಾಕಿದ್ದು ಆಕಾಡೆಮಿ ಅಧ್ಯಕ್ಷರಾದ ಎಲ್. ಎನ್. ಮುಕುಂದರಾಜ್ ಅವರು, ಎಳೆಯ ತಲೆಮಾರು ಮಹತ್ತರವಾದ ಚಿಂತನೆಗಳಲ್ಲಿ ತೊಡಗಬೇಕು, ಪ್ರಪಂಚ ದೊಡ್ಡದಿದೆ. ಅದನ್ನು ಆಳವಾಗಿ ಅರಿಯಬೇಕು, ಹೊಸ ಆಲೋಚನೆಗಳನ್ನು ಸೃಷ್ಟಿಸಬೇಕು. ಸಾಹಿತ್ಯ, ಚಿಂತನೆ, ವೈಚಾರಿಕತೆಯತ್ತ ಮುಖ ಮಾಡಬೇಕು ಎಂಬುದು ಅಕಾಡೆಮಿಯ ಉದ್ದೇಶವಾಗಿದೆ ಎಂದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.