ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಚರಂತಿಮಠ ವಿರುದ್ಧ ತಾವು ರಾಜಕೀಯ ಸಂಘರ್ಷಕ್ಕೆ ಸಿದ್ಧರಿದ್ದು, ಸಂಘ ಬಿಟ್ಟು ಹೊರಗೆ ಬಂದು ರಾಜಕೀಯ ಮಾಡಲಿ ನೋಡೋಣಾ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರಿಗೆ ಸವಾಲು ಹಾಕಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ಬಾರಿ ಶಾಸಕರಾಗಿರುವ ಚರಂತಿಮಠ ಮುಳುಗಡೆ ಸಂತ್ರಸ್ತರು ಹಾಗೂ ಅವರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಎಷ್ಟು ಬಾರಿ ಮಾತನಾಡಿದ್ದೀರಿ ಎಂದು ಪ್ರಶ್ನಿಸಿದ ಅವರು, ನನ್ನ ಐಡಿ ಎತ್ತಿಕೊಂಡು ಶಾಸಕರಾಗಿರುವ ನೀವು ಜನತೆಗೆ ಮಾಡಿದ್ದಾದರೂ ಏನು? ನನ್ನ ಕ್ಷೇತ್ರದ ಬಗ್ಗೆ ಮಾತನಾಡುವ ನೀವು ಮೊದಲು ಎಲ್ಲಿಯವರೂ ಎಂದು ತಿಳಿದಿಕೊಳ್ಳಿ. ನನ್ನನ್ನು ಬೀಳಗಿಯವ ಎಂದು ಜರಿಯುವ ನೀವು ಮೊದಲು ಹುನಗುಂದದಲ್ಲಿ ರಾಜಕಾರಣ ಮಾಡಿ ಎಂದರು.
ಅಭಿವೃದ್ಧಿ ಏನು ಮಾಡಿದ್ದೀರಿ:ಮೂರು ಬಾರಿ ಆಡಳಿತ ಪಕ್ಷದ ಶಾಸಕರಾಗಿ ಕ್ಷೇತ್ರಕ್ಕೆ ಏನನ್ನು ಮಾಡಲಿಲ್ಲ. ಒಂದೇ ಒಂದು ಕೈಗಾರಿಕೆ ಬರಲಿಲ್ಲ. ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿರುವ ಸಂತ್ರಸ್ತರಿಗೆ ಉದ್ಯೋಗ ಕಲ್ಪಿಸುವ ಕೆಲಸ ಮಾಡಲಿಲ್ಲ. ರಸ್ತೆ, ಬೀದಿ ದೀಪ ಅಳವಡಿಕೆ ಇವುಗಳು ಅಭಿವೃದ್ಧಿ ಮಾನದಂಡ ಅಲ್ಲ ಅನ್ನುವುದನ್ನ ಚರಂತಿಮಠ ಅರಿಯಬೇಕು ಎಂದು ಹರಿಹಾಯ್ದರು.
ಏಕವಚನದಲ್ಲೇ ವಾಗ್ದಾಳಿ:ಬಾಗಲಕೋಟೆ ಜನತೆಗೆ ನೀನು ಏನು ಎಂಬುವುದು ಗೊತ್ತಿದೆ. ಹಿಂದೆ ಶಾಸಕರಾಗಿದ್ದಾಲೂ ಬರೀ ಜಗಳ ಹಚ್ಚುವ ಕೆಲಸ ಮಾಡುವ ನೀನು ಮೂರು ಬಾರಿ ಶಾಸಕನಾಗಿದ್ದರೂ ಮಾಡಿದ ಸಾಧನೆ ಶೂನ್ಯ. ಬಿಟಿಡಿಎದಲ್ಲಿ ಲಪಡಾ ಮಾಡಿದ ಅಂಜಿಕೆಯಿಂದಾಗಿ ಇಂದು ಏನೇನೋ ಮಾತನಾಡುತ್ತಿರುವೆ. ಪಕ್ಷದ ತತ್ವ ಸಿದ್ಧಾಂತಗಳಿಗೆ ನಿನಗೆ ಗೊತ್ತಿಲ್ಲ. ವಿರೋಧ ಮಾಡುವವರನ್ನು ಸಹಿಸಲಾಗದವ. ಕಾರ್ಯಕರ್ತರು ನಿನ್ನೊಂದಿಗೆ ಅಷ್ಟೇ ಇಲ್ಲ ನನ್ನ ಜೊತೆಗೆ ಇದ್ದಾರೆ. ನಿಮ್ಮ ಭಯಕ್ಕೆ ಅಂಜಿ ಬಹಿರಂಗವಾಗಿ ಕಾಣಿಸಿಕೊಳ್ಳುವುದಿಲ್ಲ ಅಷ್ಟೇ ಎಂದರು.
ಪಕ್ಷದ ಯಾವುದೇ ಹುದ್ದೆಗಳನ್ನು ನಿಭಾಯಿಸದೇ ನೇರವಾಗಿ ಶಾಸಕ ಸ್ಥಾನಕ್ಕೆ ಕುಳಿತ ನಿನಗೆ ಸಂಘಟನೆಯ ಕಷ್ಟ ಗೊತ್ತಿಲ್ಲವೆಂದರು.ವಕೀಲ ವೃತ್ತಿಗೆ ಅವಮಾನ:
ನನ್ನ ವಕೀಲ ವೃತ್ತಿಯ ಬಗ್ಗೆ ಅವಮಾನ ಮಾಡಿದ್ದೀಯಾ. ಇದು ಇಡೀ ವಕೀಲರ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ನಾನು ಅತ್ಯಂತ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಿಂದ ಪದವಿ ಪಡೆದುಕೊಂಡು ವಕೀಲನಾಗಿದ್ದೇನೆ. ನಾನು ಮುಳುಗಡೆ ಸಂತ್ರಸ್ತರ ಪರ ವಕಾಲತ್ತು ವಹಿಸಿದ್ದರೆ ಇನ್ನೂ ಕೆಲವರು ಅಪರಾಧ ಪ್ರಕರಣಗಳ ಬಗ್ಗೆ, ಮತ್ತಿಷ್ಟು ವಕೀಲರು ಖಾಸಗಿ ಪ್ರಕರಣಗಳಿಗೆ ಸಂಬಂಧಿಸಿದಂತೆ ವಕಾಲತ್ತು ವಹಿಸುತ್ತಾರೆ. ಅದು ಅವರವರ ಆಸಕ್ತಿಯ ಕ್ಷೇತ್ರವಾಗಿರುತ್ತದೆ ಎನ್ನುವ ಕನಿಷ್ಠ ಜ್ಞಾನ ಚರಂತಿಮಠರಿಗೆ ಇಲ್ಲ ಎಂದರು.---
ಬಾಕ್ಸ್ಇನ್ನೂ ಆರೋಪಗಳಿಗೆ ಉತ್ತರಿಸಿ ಸಣ್ಣವನಾಗಲಾರೆ
ಮುಚಖಂಡಿ ಕ್ರಾಸ್ ಬಳಿ ಇರುವ ಪಂಚಮುಖಿ ಆಂಜನೇಯ ದೇವಸ್ಥಾನ ಪ್ರತಿಷ್ಠಾಪನೆ ವಿಷಯದಲ್ಲಿ ಜಗಳ ಹಚ್ಚುವ ಕೆಲಸದಲ್ಲಿಯೂ ನಿಸ್ಸಿಮರಾಗಿದ್ದು ಬಹಿರಂಗಗೊಂಡಿದೆ. ಓಣಿಗಳಲ್ಲೂ ತಮಗೆ ವಿರೋಧಿಗಳು ಇರಬಾರದು ಎನ್ನುವ ಭಾವನೆ ಉಳ್ಳವರಾಗಿದ್ದಾರೆ. ಇಂತಹವರ ಬಗ್ಗೆ ಮಾತನಾಡುವವರೇ ಸಣ್ಣವರಾಗುತ್ತಾರೆ. ಇಂತಹವರ ಆರೋಪಗಳಿಗೆ ಮುಂದಿನ ದಿನಗಳಲ್ಲಿ ಉತ್ತರಿಸಲಾರೆ ಜನರೇ ಇವರಿಗೆ ಉತ್ತರ ನೀಡುತ್ತಾರೆ ಎಂದರು.