ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸರ್ವತ್ಯಾಗಕ್ಕೂ ಸಿದ್ಧ: ಮಾಜಿ ಸಚಿವ ಡಾ.ಮುರುಗೇಶ್ ನಿರಾಣಿ

| Published : Jan 21 2025, 12:35 AM IST

ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸರ್ವತ್ಯಾಗಕ್ಕೂ ಸಿದ್ಧ: ಮಾಜಿ ಸಚಿವ ಡಾ.ಮುರುಗೇಶ್ ನಿರಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಗುಣಮಟ್ಟದ ಶಿಕ್ಷಣ ನೀಡಿ, ವಿದ್ಯಾರ್ಥಿಗಳ ಭವಿಷ್ಯ ಬದಲಿಸುವ ಶಿಕ್ಷಣಕ್ಕಾಗಿ ಸರ್ವತ್ಯಾಗಕ್ಕೂ ಸಿದ್ಧ ಎಂದು ಎಂಆರ್‌ಎನ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮಾಜಿ ಸಚಿವ ಡಾ.ಮುರುಗೇಶ್ ನಿರಾಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಗುಣಮಟ್ಟದ ಶಿಕ್ಷಣ ನೀಡಿ, ವಿದ್ಯಾರ್ಥಿಗಳ ಭವಿಷ್ಯ ಬದಲಿಸುವ ಶಿಕ್ಷಣಕ್ಕಾಗಿ ಸರ್ವತ್ಯಾಗಕ್ಕೂ ಸಿದ್ಧ ಎಂದು ಎಂಆರ್‌ಎನ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮಾಜಿ ಸಚಿವ ಡಾ.ಮುರುಗೇಶ್ ನಿರಾಣಿ ಹೇಳಿದರು.

ನಗರದ ಎಂಆರ್‌ಎನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಹಾಗೂ ಎಂಆರ್‌ಎನ್ ಇನ್‌ಸ್ಟಿಟ್ಯೂಟ್‌ ಆಫ್ ನರ್ಸಿಂಗ್ ಸೈನ್ಸ್ ಅಡಿಯಲ್ಲಿ ಶೃಂಖಲಾ-2024-25 ಹೆಸರಿನಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜೀವನದ ಏಳು ಬೀಳುಗಳ ನಡುವೆ ಹಲವು ಸಮಸ್ಯೆ ಎದುರಿಸಿ ನಿಂತು ಈ ಮಟ್ಟಕ್ಕೆ ಬಂದಿರುವ ನಾವುಗಳು ಶಿಕ್ಷಣಕ್ಕಾಗಿ ಸದಾಕಾಲ ಸೇವೆ ಮಾಡಲು ಉತ್ಸುಕರಾಗಿದ್ದೇವೆ. ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳ್ಳಲಿ ಎಂದು ಆಶಿಸಿದರು.

ಬೆಂಗಳೂರಿನ ಆರ್‌ಜಿಯುವ್‌ಎಚ್‌ಎಸ್‌ನ ಶನಟ್ ಸದಸ್ಯ ಡಾ.ಜೆ.ಬಿ.ಕೋನರೆಡ್ಡಿ ಉದ್ಘಾಟಿಸಿ ಮಾತನಾಡಿ, ಇಂತಹ ವಿಶಾಲವಾದ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವ ನೀವುಗಳೇ ನಿಜಕ್ಕೂ ಪುಣ್ಯವಂತರು ಎಂದರು. ಬೆಂಗಳೂರಿನ ಆಯುಷ್ ಇಲಾಖೆಯ ಸಂಶೋಧನಾ ಅಧಿಕಾರಿ ಡಾ.ಶಶಿಧರ್ ದೊಡ್ಡಮನಿ ಮಾತನಾಡಿ, ಸಂಶೋಧನೆಗಳಿಗೆ ಹೆಚ್ಚು ಮಹತ್ವ ಕೊಡುತ್ತ ಇಲಾಖೆ ಧನಸಹಾಯ ಸದುಪಯೋಗಪಡಿಸಿಕೊಳ್ಳಬೇಕೆಂದರು. ಎಂಆರ್‌ಎನ್ ಗ್ರೂಪ್ ಆಫ್ ಮೆಡಿಕಲ್ ಇನ್‌ಸ್ಟಿಟ್ಯೂಟ್‌ ಡೀನ್/ ಆಡಳಿತಾಧಿಕಾರಿ ಡಾ.ಶಿವಕುಮಾರ್ ಗಂಗಾಲ ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಂಸ್ಥೆಯ ಭವಿಷ್ಯದ ರೂಪುರೇಷೆ ತಿಳಿಸಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬಿದರು.2023-24ನೇ ಸಾಲಿನಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಮಾಧುರಿ ಮುಧೋಳ, ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರಹ್ಲಾದ ಗಂಗಾವತಿ ಕಾಲೇಜಿನ ಡೀನ್/ ಆಡಳಿತ ಅಧಿಕಾರಿ ಡಾ.ಶಿವಕುಮಾರ್ ಗಂಗಾಲ, ಬೆಂಗಳೂರಿನ ಆರ್‌ಜಿಯುವ್‌ಎಚ್‌ಎಸ್‌ನ ಡೆಪ್ಯೂಟಿ ರೆಜಿಸ್ಟರ್ ಡಾ.ಸಂತೋಷ ಯಡಹಳ್ಳಿ ಕಾಲೇಜಿನ ಹಿರಿಯ ಉಪನ್ಯಾಸಕ ವರ್ಗ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಪೋಷಕರು ಪಾಲ್ಗೊಂಡಿದ್ದರು. ಡಾ.ಈಶ್ವರ್ ಪಾಟೀಲ ಸ್ವಾಗತಿಸಿದರು. ಡಾ.ಅಂಜನಾ ಕೃಷ್ಣನ್ ನಿರೂಪಿಸಿದರು. ಡಾ.ದೀಪಾ ಗಂಗಾಲ ವಂದಿಸಿದರು.