ದೇವರ ಮುಂದೆ ಪ್ರಮಾಣಕ್ಕೆ ಸಿದ್ಧ: ಶಾಸಕರಿಗೆ ಸವಾಲ್‌

| Published : Feb 08 2025, 12:33 AM IST

ಸಾರಾಂಶ

ಗುಬ್ಬಿ ಶಾಸಕರು ಕಾರ್ಯಕ್ರಮವೊಂದರಲ್ಲಿ ನಾನು ಅವರ ಮನೆ ಬಾಗಿಲಿಗೆ ಬಂದಿದ್ದೆ, ನನ್ನ ಕೆಲಸ ಮಾಡಿಕೊಡಿ ಎಂದು ಹೇಳಿದ್ದೀರಿ. ಯಾವಾಗ ಬಂದಿದ್ದೆ? ಸಾಕ್ಷಿ ಸಮೇತ ಹೇಳಬೇಕು. ಗುಬ್ಬಿಯಪ್ಪ ದೇವಸ್ಥಾನದ ಮುಂದೆ ಪ್ರಮಾಣ ಮಾಡಲು ನಾನು ಸಿದ್ಧ ಎಂದು ಕೆಎಂಎಫ್ ಮಾಜಿ ನಿರ್ದೇಶಕ ಚಂದ್ರಶೇಖರ್ ಶಾಸಕ ಎಸ್‌. ಆರ್‌. ಶ್ರೀನಿವಾಸ್‌ ಸವಾಲೆಸೆದಿದ್ದಾರೆ.

ಕನ್ನಡಪ್ರಭ ವಾರ್ತೆ ಗುಬ್ಬಿ ಗುಬ್ಬಿ ಶಾಸಕರು ಕಾರ್ಯಕ್ರಮವೊಂದರಲ್ಲಿ ನಾನು ಅವರ ಮನೆ ಬಾಗಿಲಿಗೆ ಬಂದಿದ್ದೆ, ನನ್ನ ಕೆಲಸ ಮಾಡಿಕೊಡಿ ಎಂದು ಹೇಳಿದ್ದೀರಿ. ಯಾವಾಗ ಬಂದಿದ್ದೆ? ಸಾಕ್ಷಿ ಸಮೇತ ಹೇಳಬೇಕು. ಗುಬ್ಬಿಯಪ್ಪ ದೇವಸ್ಥಾನದ ಮುಂದೆ ಪ್ರಮಾಣ ಮಾಡಲು ನಾನು ಸಿದ್ಧ ಎಂದು ಕೆಎಂಎಫ್ ಮಾಜಿ ನಿರ್ದೇಶಕ ಚಂದ್ರಶೇಖರ್ ಶಾಸಕ ಎಸ್‌. ಆರ್‌. ಶ್ರೀನಿವಾಸ್‌ ಸವಾಲೆಸೆದಿದ್ದಾರೆ. ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷವನ್ನೇ ಮುಂದಿಟ್ಟುಕೊಂಡ ಬಿಳಿ ಹೋರಿ ಕರಿ ಹೋರಿ ಹಾಗೂ ತಂಡ ಸ್ವಾರ್ಥಿಗಳು ಹಾಗೂ ಮೋಸಗಾರರು ಆಗಿದ್ದಾರೆ. ಈಗ ನಿಮ್ಮ ಬಳಿ ಬಂದಿದ್ದಾರೆ. ನಾಳೆ ನಿಮ್ಮ ಸೋಲಿಗೂ ಅವರೇ ಕಾರಣ ಆಗುತ್ತಾರೆ ಎಂದು ಶಾಸಕರಿಗೆ ಮಾರ್ಮಿಕ ಪ್ರತಿಕ್ರಿಯೆ ನೀಡಿದರು. ಚುನಾವಣೆಗೆ ಸ್ಪರ್ಧಿಸದಂತೆ ಆಸೆ ಆಮಿಷ ಒಡ್ಡುವ ಕೆಲಸ ಮಾಡಿದ್ದು ಯಾರು?. ನಿಮ್ಮ ಶಿಷ್ಯ ನನ್ನ ಬಳಿ ಬಂದು ಎರಡೂವರೆ ಕೋಟಿಯಿಂದ ಐದು ಕೋಟಿ ಆಮಿಷ ತೋರಿದ್ದು ನಾನು ಎಲ್ಲೂ ಹೇಳಿಲ್ಲ. ಈ ರೀತಿಯ ರಾಜಕಾರಣ ಸರಿಯಲ್ಲ ಎಂದರು. ಬಿಜೆಪಿಯಲ್ಲಿ ಕೆಲವು ಮಂದಿ ಮದ್ದು ಗುಂಡಿಗೆ ಸಗಣಿ ಸುರಿಯುವವರು ಇದ್ದಾರೆ. ಇಂತಹ ಕಪಟತನದಿಂದ ನಾನು ಹಾಲು ಒಕ್ಕೂಟ ಚುನಾವಣೆ ಸೋತೆ. ಹಾಲು ಒಕ್ಕೂಟದ ಚುನಾವಣೆಯಲ್ಲಿ 11 ಮತಗಳು ಹಿಡಿದು ಕೊಡುವ ಪ್ಯಾಕೇಜ್ ಒಪ್ಪಿಕೊಂಡಿದ್ದ ಬಿಜೆಪಿ ಮುಖಂಡರು ಎಂದು ಹೇಳಿಕೊಳ್ಳುವ ಇವರೇ ಈ ಹಿಂದೆ ಬೆಟ್ಟಸ್ವಾಮಿ, ದಿಲೀಪ್ ಕುಮಾರ್ ಸೋಲಿಗೂ ಕಾರಣಕರ್ತರು ಎಂದು ಆರೋಪ ಮಾಡಿದ ಅವರು, ಇಂತಹ ಕುತಂತ್ರಿಗಳ ಜೊತೆ ಸೇರಿ ಶಾಸಕರು ಕುತಂತ್ರ, ಅಡ್ಡದಾರಿ ಹಿಡಿದು ನನ್ನ 25 ವರ್ಷ ಸಹಕಾರ ಕ್ಷೇತ್ರದ ರಾಜಕೀಯ ಮುಗಿಸುವ ಪ್ರಯತ್ನ ಮಾಡಿದ್ದೀರಿ. ಇನ್ನುಳಿದ ಮೂರು ವರ್ಷದಲ್ಲಿ ನಿಮ್ಮನ್ನು ಸೋಲಿಸಲು ಇದೇ ತಂತ್ರಗಳ ಬಳಸುವ ಒಬ್ಬ ಗಂಡು ಹುಟ್ಟಿ ಬರುತ್ತಾನೆ. ಇದು ದೇವರ ಆಟ. ನಾನು ಸೋತಿದ್ದೇನೆ ಅಷ್ಟೇ ಸತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು.ಅಧಿಕಾರ ದುರ್ಬಳಕೆ ಮಾಡಿಕೊಂಡು ನಿಮ್ಮದೇ ಸರ್ಕಾರ, ನಿಮ್ಮದೇ ಅಧಿಕಾರಿಗಳು, ನಿಮ್ಮದೇ ಶಾಸಕತನ ಇವುಗಳ ಬಳಸಿ ನನ್ನ ಚುನಾವಣೆಗೆ ಸ್ಪರ್ಧಿಸದಂತೆ ಯಾವ ರೀತಿ ಅಸ್ತ್ರಗಳು ಬಳಸಿದ್ದೀರಿ ಎಂಬುದು ತಿಳಿಯಬೇಕು. ನನ್ನ ಮಗಳು ಚನ್ನಯ್ಯನಪಾಳ್ಯ ಹಾಲು ಡೈರಿಗೆ ಕಳೆದ ಒಂದೂವರೆ ವರ್ಷದಿಂದ ಹಾಲು ಹಾಕುತ್ತಿದ್ದಾಳೆ. ಆದರೆ ವಾಸಸ್ಥಳ ವಿಚಾರವಾಗಿ ನೋಟಿಸ್ ಜಾರಿ ಮಾಡಿಸಿದ್ದೀರಿ. ಆದರೆ ನಿಮ್ಮ ಪತ್ನಿ ಅವರು ಎಲ್ಲಿ ವಾಸವಿದ್ದಾರೆ, ಕೇವಲ ನಾಲ್ಕು ತಿಂಗಳು ಹಾಲು ಹಾಕಿ ಅಭ್ಯರ್ಥಿ ಯಾಗಿದ್ದು ಹೇಗೆ ? ಎಲ್ಲವೂ ಅಧಿಕಾರ ಬಳಕೆ ಅಷ್ಟೇ ಎಂದರು.