ಸಾರಾಂಶ
ಚಿಕ್ಕಮಗಳೂರು, ರಾಷ್ಟ್ರದ ಸಮಗ್ರತೆ ಹಾಗೂ ಐಕ್ಯತೆ ಎತ್ತಿಹಿಡಿಯಲು ಕಾರ್ಯಕರ್ತರು ಮಾನಸಿಕವಾಗಿ ಸಜ್ಜಾಗಬೇಕು. ವಿಕಸಿತ ಭಾರತದ ಅಭಿವೃದ್ಧಿಯನ್ನು ಸಮಾಜದ ಮುಂದಿಡಲು ಪಕ್ಷಾತೀತವಾಗಿ ಶ್ರಮಿಸಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್ ಹೇಳಿದರು.
ಮೋದಿ ಸರ್ಕಾರಕ್ಕೆ ೧೧ ವರ್ಷ ಪೂರೈಸಿದ ಅಂಗವಾಗಿ ವಿಕಸಿತ ಭಾರತ ಸಂಕಲ್ಪ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಷ್ಟ್ರದ ಸಮಗ್ರತೆ ಹಾಗೂ ಐಕ್ಯತೆ ಎತ್ತಿಹಿಡಿಯಲು ಕಾರ್ಯಕರ್ತರು ಮಾನಸಿಕವಾಗಿ ಸಜ್ಜಾಗಬೇಕು. ವಿಕಸಿತ ಭಾರತದ ಅಭಿವೃದ್ಧಿಯನ್ನು ಸಮಾಜದ ಮುಂದಿಡಲು ಪಕ್ಷಾತೀತವಾಗಿ ಶ್ರಮಿಸಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್ ಹೇಳಿದರು.ನಗರದ ಜಿಲ್ಲಾ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ನಗರ ಮಂಡಲದಿಂದ ಶುಕ್ರವಾರ ನಡೆದ ಸೇವೆ, ಸುಶಾಸನ, ಬಡವರ ಕಲ್ಯಾಣದ ಮೋದಿ ಸರ್ಕಾರಕ್ಕೆ ೧೧ ವರ್ಷ ಪೂರೈಸಿದ ಅಂಗವಾಗಿ ವಿಕಸಿತ ಭಾರತ ಸಂಕಲ್ಪ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು. ಹಿಂದಿನ ಕಾಂಗ್ರೆಸ್ ಆಳ್ವಿಕೆಯಲ್ಲಿ ಭಾರತ ನಿರುದ್ಯೋಗ, ಬಡತನ, ನಕ್ಸಲ್ ಹಾಗೂ ಭಯೋತ್ಪಾ ದನೆ ಚಟುವಟಿಕೆಗಳಿಂದ ನಲುಗಿ ಹೋಗಿತ್ತು. 2014ರಲ್ಲಿ ನರೇಂದ್ರ ಮೋದಿ ದೇಶದ ಚುಕ್ಕಾಣಿ ಹಿಡಿದ ಬಳಿಕ ದೇ ಶದ ಕಟ್ಟಕಡೆ ವ್ಯಕ್ತಿಗೂ ಸಮಾನ ಯೋಜನೆಗಳನ್ನು ರೂಪಿಸಿ ಹಂತ ಹಂತವಾಗಿ ರಾಷ್ಟ್ರವನ್ನು ಬಲಿಷ್ಟ ಗೊಳಿಸಲು ಮುಂದಾದರು ಎಂದರು.
ಭಾರತ ಸ್ವಾತಂತ್ರ್ಯಗೊಂಡು ಏಳು ದಶಕ ಪೂರೈಸಿದರೂ ಬಡವರ ಪಾಲಿಗೆ ಕನಸಾಗಿದ್ದ ಬ್ಯಾಂಕ್ ಖಾತೆ, ಅಡುಗೆ ಸಿಲಿಂಡರ್, ಜನೌಷಧಿ ಕೇಂದ್ರ ತೆರೆದರು. ಯುವಕರ ಸ್ವಾವಲಂಬಿ ಬದುಕಿಗೆ ಕೌಶಾಲ್ಯಾಭಿವೃದ್ಧಿ ತರಬೇತಿ ನೀಡಿದರು. ಅಲ್ಲದೇ ಪ್ರತಿದಿನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೊಳಿಸಿ ಅಸಾಧ್ಯವಾಗಿದ್ದನ್ನು ಸಾಧ್ಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.ದೇಶದ ಕೋಟ್ಯಾಂತರ ಜನರ ದೈನಂದಿನ ವ್ಯಾಪಾರವನ್ನು ಡಿಜಿಟಲೀಕರಣಗೊಳಿಸಿದ ಪರಿಣಾಮ ಇಂದು ದೇಶದಲ್ಲಿ ₹೨೪ ಲಕ್ಷ ಕೋಟಿ ವಹಿವಾಟು ಯುಪಿಐನಿಂದ ನಡೆಯುತ್ತಿದೆ. ಕೋವಿಡ್ ವೇಳೆಯಲ್ಲಿ ಆತ್ಮನಿರ್ಭರ ಪ್ಯಾಕೇಜ್ ಘೋಷಣೆ ಹಾಗೂ ದೇಶದ ಪ್ರಜೆಗಳು ಸೇರಿದಂತೆ ವಿದೇಶಗಳಿಗೂ ಕೋವಿಡ್ ಲಸಿಕೆ ವಿತರಿಸಿದ ದೇಶವೆಂದರೆ ಭಾರತ ಎಂದರು.ದೇಶದ ೨೮೫ ಜಿಲ್ಲೆಗಳಲ್ಲಿ ಇದ್ದ ನಕ್ಸಲ್ ಚಟುವಟಿಕೆ ಕಡಿವಾಣಕ್ಕೆ ಮುನ್ನುಡಿ ಬರೆದವರು ಮೋದಿ. ಕಾಂಗ್ರೆಸ್ ಅವಧಿಯಲ್ಲಿ ಮಂಡಿ ಯೂರಿ ನಿಲ್ಲಿಸಿದ್ಧ ದೇಶವನ್ನು ಭುಜದೆತ್ತರಕ್ಕೆ ಕೊಂಡೊಯ್ದು ರಾಷ್ಟ್ರದ ಪ್ರಗತಿಗೆ ಭದ್ರಬುನಾದಿ ಹಾಕಿದವರು. ಭಾರತದ ನೆಲದಲ್ಲಿ ವಿದೇಶಿ ಪ್ರಖ್ಯಾತ ಕಂಪನಿಗಳ ತಯಾರಿಕಾ ಘಟಕ ಸ್ಥಾಪಿಸಲು ಮೋದಿಯವರ ಸ್ನೇಹವೇ ಕಾರಣ ಎಂದು ಹೇಳಿದರು.ವಿಶ್ವಮಟ್ಟದಲ್ಲಿ ಭಾರತ 3ನೇ ಅತಿದೊಡ್ಡ ರಾಷ್ಟ್ರವಾಗಲು ಕಾರ್ಯಕರ್ತರು ಜೊತೆಗೆ ಜನಸಾಮಾನ್ಯರು ತಮ್ಮ ಜವಾಬ್ದಾರಿ ಅರಿತು ದೇಶದ ಕರ್ತವ್ಯ ನೆನಲಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾ ರದ ಜನಪರ ಆಡಳಿತ ಯೋಜನೆಗಳನ್ನು ಜಿಲ್ಲೆ, ಹೋಬಳಿ, ವಾರ್ಡ್ ಹಾಗೂ ಬೂತ್‌ಗಳಲ್ಲಿ ನಿರಂತರವಾಗಿ ಕಾರ್ಯಾಗಾರ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.ಭಾರತೀಯರ ಶಾಂತಿ ಕದಡಲು ಯತ್ನಿಸುತ್ತಿದ್ದ ನೆರೆದೇಶ ಪಾಕಿಸ್ತಾವನ್ನು ಮೋದಿ ಆಡಳಿತದಲ್ಲಿ ಎರ್ ಮತ್ತು ಸರ್ಜಿಕಲ್ ಸ್ಟ್ರೈಕ್, ಉರಿ ಮುಖಾಂತರ ತಕ್ಕಪಾಠ ಕಲಿಸಿದೆ. ಈಚೆಗೆ ಆಪರೇಷನ್ ಸಿಂಧೂರ್ ಮೂಲಕ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ವನ್ನು ಒಂಟಿಕಾಲಿನಲ್ಲಿ ನಿಲ್ಲುವಂತೆ ಮಾಡಲು ಮೋದಿಯವರ ಆಡಳಿತ ವೈಖರಿಯೇ ಕಾರಣ ಎಂದು ಹೇಳಿದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಸವಿತಾ ರಮೇಶ್ ಮಾತನಾಡಿ ವಾಜಪೇಯಿ ಬಳಿಕ ದೇಶದ ಆರ್ಥಿಕತೆ, ರಕ್ಷಣೆ ವಿಚಾರದಲ್ಲಿ ಮುಂಚೂಣಿ ನಾಯಕರಾಗಿ ರಾಷ್ಟ್ರಕ್ಕಾಗಿ ದುಡಿಯುತ್ತಿರುವ ನರೇಂದ್ರ ಮೋದಿ ಸದಾಕಾಲ ದೇಶದ ಮಕ್ಕಳ ಭವಿಷ್ಯ, ಜನತೆಗೆ ಬೆಂಗವಲಾಗಿ ನಿಂತಿರುವುದು ಶ್ಲಾಘನೀಯ ಎಂದರು.ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್ ಗುಜರಾತ್‌ನಲ್ಲಿ 15 ವರ್ಷ ಮುಖ್ಯಮಂತ್ರಿ ಹಾಗೂ ಪ್ರಧಾನಿಗಳಾಗಿ 11 ವರ್ಷ ಪೂರೈಸಿರುವುದು ದೊಡ್ಡ ಸಾಧನೆ. ದೇಶದ ಸುಮಾರು 18 ಸಾವಿರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ, ೨೯ ಕೋಟಿ ಬ್ಯಾಂಕ್ ಖಾತೆಗೆ ಅಡಿಪಾಯ ಹಾಗೂ ಭಾರತೀಯ ಕನಸಾಗಿದ್ದ ಶ್ರೀರಾಮಮಂದಿರದ ನಿರ್ಮಾಣಕ್ಕೆ ಕಾರಣೀಭೂತರಾದವರು ಎಂದು ಹೇಳಿದರು.ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಪ್ರೇಮ್‌ಕುಮಾರ್, ಕೋಟೆ ರಂಗನಾಥ್, ಓಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ನಗರಸಭಾ ಸದಸ್ಯ ಮಧುಕುಮಾರ್‌ರಾಜ್ ಅರಸ್, ಮುಖಂಡರು ಬಸವರಾಜ್, ಕೌಶಿಕ್, ವೆಂಕಟೇಶ್ ಅರಸ್ ಮತ್ತಿತರರು ಹಾಜರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))