ಸಾರಾಂಶ
ದಾಂಡೇಲಿ:
ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಗಟಾರ, ಕಟ್ಟಡ ಅಷ್ಟೇ ಅಲ್ಲ. ಅಭಿವೃದ್ಧಿಯ ಬಗ್ಗೆ ಮಾತನಾಡುವಾಗ ಮೊದಲು ಜನರ ಆದ್ಯತೆಯ ಬಗ್ಗೆ ಮಾತನಾಡಬೇಕು. ಜನ ಸಮುದಾಯದ ಆದ್ಯತೆಯ ಸಂಗತಿಯೇ ನಿಜವಾದ ಅಭಿವೃದ್ಧಿ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕರು ಹಾಗೂ ಅಭಿವೃದ್ಧಿ ಚಿಂತಕರಾದ ಡಾ. ಎಂ. ಚಂದ್ರ ಪೂಜಾರಿ ನುಡಿದರು.ಅವರು ದಾಂಡೇಲಿಯ ಹಾರ್ನಬಿಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ''''''''''''''''ಉತ್ತರ ಕನ್ನಡ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ನಾವು-ನೀವು'''''''''''''''' ಎಂಬ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಅಭಿವೃದ್ಧಿ ಚಿಂತನೆ ಮಂಡಿಸಿ ಮಾತನಾಡಿದರು.
ಸಾಮಾಜಿಕ ಚಿಂತಕ ಮೀನಾಕ್ಷಿ ಸುಂದರಂ, ಕರಾವಳಿ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡ ಸಾಕಷ್ಟು ಹಿಂದುಳಿದಿದೆ. ಇಲ್ಲಿನ ಜನ ಸಮುದಾಯದ ಧ್ವನಿ, ಚಳವಳಿಯಾಗಿ ಸರ್ಕಾರವನ್ನು ತಲುಪಬೇಕಿದೆ ಎಂದರು.ಸಹಕಾರಿ ಧುರೀಣ ಜಾರ್ಜ್ ಫರ್ನಾಂಡಿಸ್, ಜಿಲ್ಲೆಯಲ್ಲಿ ವಿಶ್ವವಿದ್ಯಾಲಯಗಳಿಲ್ಲ. ಐಟಿ ಕಾಲೇಜುಗಳಿಲ್ಲ. ಬಹು ವ್ಯವಸ್ಥೆಯ ಆಸ್ಪತ್ರೆಗಳಿಲ್ಲ ರೈಲ್ವೆ ಸಂಪರ್ಕಗಳು ಕೂಡ ಸಮರ್ಪಕವಾಗಿಲ್ಲ. ಇದಕ್ಕೆಲ್ಲ ಪರಿಹಾರ ಎಂದರೆ ಹೋರಾಟವೊಂದೇ ದಾರಿಯಾಗಿದೆ ಎಂದರು.
ದಾಂಡೇಲಿ ನಗರಸಭಾ ಸದಸ್ಯ ಮೋಹನ ಹಲವಾಯಿ, ಸ್ಕಾಡ್ ವೇಸ್ ಸಂಸ್ಥೆಯ ಮುಖ್ಯಸ್ಥ ಡಾ. ವೆಂಕಟೇಶ ನಾಯ್ಕ, ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ. ನಾಗೇಶ ನಾಯ್ಕ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಸರ್ವಂಗೀಣ ಅಭಿವೃದ್ಧಿ ಸಮಾವೇಶ ಸಂಘಟನೆಯ ಗೌರವಾಧ್ಯಕ್ಷ ಬಿ.ಎನ್. ವಾಸರೆ, ಸಮಾವೇಶದಲ್ಲಿ ಹೊರ ತಂದಿರುವ ''''''''''''''''ಜನತೆಯ ಕೈಪಿಡಿ''''''''''''''''ಯನ್ನು ಇಲ್ಲಿ ಆಗಿರುವ ಚರ್ಚೆಗಳನ್ನೂ ಒಳಗೊಂಡು ಮತ್ತಷ್ಟು ವಿಸ್ತರಿಸಿ ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಈ ಕೈಪಿಡಿಯಲ್ಲಿ ಈ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕುರಿತಂತೆ ಸಂಗತಿಗಳಿದ್ದು ಅದರ ಅನುಷ್ಠಾನಕ್ಕೆ ಒತ್ತಾಯಿಸಲಾಗುವುದು. ಸಾಧ್ಯವಾದರೆ ಬೆಳಗಾವಿ ಅಧಿವೇಶನ ಅಥವಾ ಸರ್ಕಾರದ ಇನ್ಯಾವುದೇ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಪಟ್ಟಂತೆ ವಿಶೇಷ ಪ್ಯಾಕೇಜ್ ನೀಡಲು ಒತ್ತಾಯಿಸಲಾಗುವುದು ಎಂದರು.
ನಗರಸಭಾ ಅಧ್ಯಕ್ಷ ಅಷ್ಪಾಕ್ ಶೇಖ್, ಉಪಾಧ್ಯಕ್ಷ ಶಿಲ್ಪಾ ಕೋಡೆ, ತಹಶೀಲ್ದಾರ ಶೈಲೇಶ ಪರಮಾನಂದ, ಪೌರಾಯುಕ್ತ ರಾಜಾರಾಮ ಪವಾರ, ನಗರಸಭಾ ಸದಸ್ಯರಾದ ಮೋಹನ ಹಲವಾಯಿ, ಯಾಸ್ಮಿನ್ ಕಿತ್ತೂರ್, ಆಸಿಫ್ ಮುಜಾವರ್, ಅನಿಲ್ ನಾಯ್ಕರ್, ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವಕರ ಮತ್ತಿತರರು ಇದ್ದರು.