ಸಾಹಿತ್ಯ ಅಧ್ಯಯನದಿಂದ ಜ್ಞಾನದ ಸಾಕ್ಷಾತ್ಕಾರ

| Published : Oct 19 2025, 01:00 AM IST

ಸಾರಾಂಶ

ತಾವು ಬೆಳೆಯಲು ಕಾಲದ ಮಹತ್ವ ನಾವು ಅರ್ಥಮಾಡಿಕೊಳ್ಳಬೇಕು. ಸಾಹಿತ್ಯದಲ್ಲಿ ಬಹುಶಿಸ್ತಿನ ಅಧ್ಯಯನದ ಅಗತ್ಯವಾಗಿದೆ

ಕೊಪ್ಪಳ: ಪ್ರಸ್ತುತ ದಿನಗಳಲ್ಲಿ ಲೇಖಕರ ಜತೆಗೆ ವಿಮರ್ಶಕರ ಅಗತ್ಯವಿದೆ, ಸಾಹಿತ್ಯ ಸತ್ವ ಹಾಗೂ ಗಟ್ಟಿ ವಿಚಾರಗಳನ್ನು ಸಾಹಿತ್ಯ ಆಸಕ್ತರಿಗೆ ತಲುಪಿಸಿದಾಗ ವಿಚಾರ ಸಂಕಿರಣದ ಉದ್ದೇಶ ಸಾಕಾಗೊಳ್ಳುತ್ತವೆ. ನೂರಾರು ವರ್ಷಗಳ ಹಿಂದೆ ಜನಿಸಿದ ಕಾರಂತರು ಇಂದಿಗೂ ಪ್ರಸ್ತುತವಾಗಿದ್ದಾರೆ ಎಂದರೆ ಅವರ ವಿಚಾರಗಳೆ ಕಾರಣ ಎಂದು ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಸ್.ಜಿ. ಡೊಳ್ಳೆಗೌಡರ್ ಹೇಳಿದರು.

ನಗರದ ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಶಿವರಾಮ ಕಾರಂತ ಟ್ರಸ್ಟ್, ಉಡುಪಿ, ಜಿಲ್ಲೆ ಹಾಗೂ ಮಹಾವಿದ್ಯಾಲಯದ ಕನ್ನಡ ವಿಭಾಗ ಸಹಯೋಗದೊಂದಿಗೆ ಆಂತರಿಕ ಗುಣಮಟ್ಟ ಭರವಸೆ ಕೋಶದ ಅಡಿಯಲ್ಲಿ ನಡೆದ ಡಾ.ಶಿವರಾಮ ಕಾರಂತರ ಸಾಹಿತ್ಯ ಮತ್ತು ವೈಚಾರಿಕತೆ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ಸಾಹಿತ್ಯ ಓದುವದೆಂದರೆ ಬದುಕನ್ನು ತಿಳಿದುಕೊಳ್ಳುವುದು. ಸಾಹಿತ್ಯ ಅಧ್ಯಯನದಿಂದ ಜ್ಞಾನದ ಸಾಕ್ಷಾತ್ಕಾರವಾಗುತ್ತದೆ ಅಂತಹ ಬದುಕಿನ ಜ್ಞಾನ ಮತ್ತು ಅನುಭವ ಕಟ್ಟಿಕೊಟ್ಟವರು ಡಾ. ಶಿವರಾಮ ಕಾರಾಮತರಾಗಿದ್ದಾರೆ ಎಂದು ಹೇಳಿದರು.

ಡಾ.ಶಿವರಾಮ ಕಾರಂತ್‌ ಟ್ರಸ್ಟ್‌ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ತಾವು ಬೆಳೆಯಲು ಕಾಲದ ಮಹತ್ವ ನಾವು ಅರ್ಥಮಾಡಿಕೊಳ್ಳಬೇಕು. ಸಾಹಿತ್ಯದಲ್ಲಿ ಬಹುಶಿಸ್ತಿನ ಅಧ್ಯಯನದ ಅಗತ್ಯವಾಗಿದೆ. ಕಾರಂತರ ಸಾಹಿತ್ಯ ಸಾಹಿತ್ಯದ ಒಳನೋಟಗಳನ್ನು ತಾವು ಅಧ್ಯಯನಗೈಯ್ಯಬೇಕು ಎಂದರು.

ಡಾ. ಆರ್.ಮರೇಗೌಡ ಮಾತನಾಡಿ, ಶಿವರಾಮ ಕಾರಾಂತರು ಜ್ಞಾನದ ಗಣಿಯಾಗಿದ್ದರು. ಹೆಚ್ಚಿನ ಜ್ಞಾನ ಪಡೆದಾಗ ಪರಿಪೂರ್ಣದೆಡೆಗೆ ನಾವು ಸಾಗಲು ಸಾಧ್ಯ. ಲೋಕದ ಅಪೂರ್ವ ಜ್ಞಾನ ಅವರ ಸಾಹಿತ್ಯದಲ್ಲಿ ಅಡಗಿದೆ ತಾವು ಕಾರಂತರ ಅಧ್ಯಯನ ಮಾಡಬೇಕು ಎಂದರು.

ಡಾ.ಶಿವರಾಮ ಕಾರಂತ ಟ್ರಸ್ಟ್‌ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಮಾತನಾಡಿದರು.

ಡಾ.ಶಿವರಾಮ ಕಾರಂತರ ಸಾಹಿತ್ಯದಲ್ಲಿ ಪರಿಸರ ಮತ್ತು ವೈಚಾರಿಕ ಪ್ರಜ್ಞೆ ಕರಿತು ದಾವಣಗೆರೆ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಮಹಾಂತೇಶ ಪಾಟೀಲ ವಿಷಯ ಮಂಡಿಸಿದರು. ಗೋಷ್ಠಿಯ ಅಧ್ಯಕ್ಷತೆ ಡಾ.ಬಿ.ಬಿ.ಹಗ್ಡೆ, ಡಾ.ಚೇತನ್ ಶಟ್ಟಿ ಕೋವಾಡಿ ವಹಿಸಿಕೊಂಡಿದ್ದರು.

ಡಾ.ಶಿವರಾಮ ಕಾರಂತರ ಕಾದಂಬರಿ ಮಹಿಳೆ-ವೈಚಾರಿಕತೆ ಕುರಿತು ಕೇರಳ ಕಾಸರಗೂಡಿನ ಕೇಂದ್ರಿಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಗೊವಿಂದರಾಜು ಕಲ್ಲೂರ ವಿಷಯ ಮಂಡಿಸಿದರು.ಗೋಷ್ಠಿಯ ಅಧ್ಯಕ್ಷತೆ ಡಾ. ನಾನಾಸಾಹೇಬ ಹಚ್ಚಡದ ವಹಿಸಿಕೊಂಡಿದ್ದರು.

ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಬಸಂತಪ್ಪ ಹೊಸಳ್ಳಿ, ಸಂತೋಷ ನಾಯಕ ಪಟ್ಲಾ, ಪ್ರೊ.ಶರಣಬಸಪ್ಪ ಬಿಳಿಯಲೆ, ಡಾ. ದಯಾನಂದ ಸಾಳುಂಕೆ, ಡಾ.ಚನ್ನಬಸವ, ಡಾ. ಅರುಣಕುಮಾರ, ಡಾ.ಕರಿಬಸವೇಶ್ವರ, ಡಾ. ಸುಂದರ ಮೇಟಿ, ಡಾ. ಪ್ರಶಾಂತ ಕೊಂಕಲ್, ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್, ಡಾ.ಯಮನೂರಪ್ಪ, ಲಲಿತಾ ಕಿನ್ನಾಳ, ವಿನೋದ ಮುದಿಬಸನನಗೌಡರ, ಮಹೇಶ ಬಿರಾದಾರ, ಶರಣಪ್ಪ ಚೌಹಾಣ್, ಡಾ. ಶಿವಪ, ಶರಣಪ್ಪ ಗುಳಗುಳಿ, ಮಂಜುನಾಥ ಹಿರೇಮಠ, ವೆಂಕಟೇಶ ಬೋವಿ, ಸ್ವಾತಿ ಹಿರೇಮಠ, ಪ್ರತಿಭಾ ಚಿತ್ರಗಾರ, ಸಂಗೀತಾ ಮಸ್ಕಿ, ಪ್ರೀಯ ಪತ್ತಾರ, ಶ್ವೇತಾ ಗಿರಡ್ಡಿ, ಮಹಾಮತೇಶ ತವಳಗೇರಿ ಉಪಸ್ಥಿತರಿದ್ದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ.ನಾಗರಾಜ ದಂಡೋತಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ. ಸುಮಲತಾ ಬಿ.ಎಂ.ನಿರೂಪಸಿದರು, ಮಂಜುಶ್ರೀ ಪ್ರಾರ್ಥಿಸಿದರು, ಡಾ.ನಾಗೇಶ ವಂದಿಸಿದರು.