ಕಾದಂಬರಿಗಳಲ್ಲಿ ನೈಜತೆಗೆ ಆದ್ಯತೆ ನೀಡಿದ್ದ ಕಾರಂತರು

| Published : Jun 22 2024, 12:53 AM IST

ಕಾದಂಬರಿಗಳಲ್ಲಿ ನೈಜತೆಗೆ ಆದ್ಯತೆ ನೀಡಿದ್ದ ಕಾರಂತರು
Share this Article
  • FB
  • TW
  • Linkdin
  • Email

ಸಾರಾಂಶ

ಕಾರಂತರು ತಮ್ಮ ಕಾದಂಬರಿಗಳಲ್ಲಿ ವಿವಿಧಜಾತಿ ಧರ್ಮಗಳ, ಶ್ರೇಣಿಗಳ, ಕಾಲ ಮತ್ತು ಕಾಮದ ವಸ್ತು ಸ್ಥಿತಿಯ ಮಹಿಳೆಯರ ಪಾತ್ರಗಳನ್ನು ಸಾದೃಶ್ಯ-ವೈದೃಶ್ಯದಲ್ಲಿತರುವ ಮುಖಾಂತರ ನೈಜತೆಯನ್ನು ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿಮರ್ಶಕ ಪ್ರೊ. ಟಿ. ಪಿ.ಅಶೋಕ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತುಮಕೂರುಕಾರಂತರು ತಮ್ಮ ಕಾದಂಬರಿಗಳಲ್ಲಿ ವಿವಿಧಜಾತಿ ಧರ್ಮಗಳ, ಶ್ರೇಣಿಗಳ, ಕಾಲ ಮತ್ತು ಕಾಮದ ವಸ್ತು ಸ್ಥಿತಿಯ ಮಹಿಳೆಯರ ಪಾತ್ರಗಳನ್ನು ಸಾದೃಶ್ಯ-ವೈದೃಶ್ಯದಲ್ಲಿತರುವ ಮುಖಾಂತರ ನೈಜತೆಯನ್ನು ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿಮರ್ಶಕ ಪ್ರೊ. ಟಿ. ಪಿ.ಅಶೋಕ ಅಭಿಪ್ರಾಯಪಟ್ಟರು.ತುಮಕೂರು ವಿವಿಯ ಮಹಿಳಾ ಅಧ್ಯಯನ ಕೇಂದ್ರವು ಡಿ.ವಿ.ಜಿ. ಕನ್ನಡ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ‘ಶಿವರಾಮ ಕಾರಂತರ ಮಹಿಳಾ ಪಾತ್ರದ ಕೆಲವು ಮಾದರಿಗಳು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಾರಂತರ ಜಗತ್ತಿನ ಕಾದಂಬರಿಗಳಲ್ಲಿ ಮಹಿಳಾ ಪಾತ್ರಗಳನ್ನು ಮುಖ್ಯಘಟಕವಾಗಿ ಚಿತ್ರಿಸಿದ್ದಾರೆ. ಕಾಲದ ಆಯಾಮ ಮೀರಿ ಬದುಕಿನ ಅಗತ್ಯಕ್ಕಿರುವ ಮಹಿಳಾ ಪಾತ್ರಗಳನ್ನು ಸೃಷ್ಟಿಸಿದ್ದಾರೆ.‘ಸರಸಮ್ಮನ ಸಮಾಧಿ’ ಕಾದಂಬರಿಯಲ್ಲಿ ದೇಹ-ಮನಸ್ಸು ಕೂಡದ ಯಾವುದೇ ದಾಂಪತ್ಯವು ಅನಾರೋಗ್ಯಕರವೆಂದು ವೇಶ್ಯೆಯ ಗೃಹಿಣಿಯ, ವಿದ್ಯಾವಂತ ಮಹಿಳಾ ಪಾತ್ರಗಳ ಮೂಲಕ ಪ್ರಸ್ತುತಪಡಿಸುತ್ತಾರೆ ಎಂದು ತಿಳಿಸಿದರು.ಪ್ರಶ್ನೆ-ಉತ್ತರಗಳ ಸರಣಿಯಲ್ಲಿ ನಡೆಯುವ ‘ಮೂಕಜ್ಜಿಯ ಕನಸುಗಳು’ ಕಾದಂಬರಿಯಲ್ಲಿ ಅಂಧ ನಂಬಿಕೆಗಳನ್ನು ಹೋಗಲಾಡಿಸುವ, ಸಮಕಾಲೀನ ಲೈಂಗಿಕ ನಡಾವಳಿಗಳನ್ನು ಎತ್ತಿಹಿಡಿಯುವ ವಿಚಾರಧಾರೆಯನ್ನು ಮೂಕಜ್ಜಿ ಪಾತ್ರವು ಬದುಕಿನ ವಿವಿಧ, ವಿಭಿನ್ನ ಆಯಾಮಗಳನ್ನು ತೋರಿಸುತ್ತದೆ. ಪ್ರಶ್ನಿಸುವ, ಸಂದೇಹಿಸುವ, ಬದುಕಿನ ಆಳವನ್ನು ತೋರಿಸುವ ಪಾತ್ರಗಳನ್ನೂ ಕಾಣಬಹುದು ಎಂದು ತಿಳಿಸಿದರು.‘ಮರಳಿ ಮಣ್ಣಿಗೆ’, ‘ಅಳಿದ ಮೇಲೆ’ ‘ಮೈಮನಗಳ ಸುಳಿಯಲ್ಲಿ’ ‘ಒಡಹುಟ್ಟಿದವರು’ ಕಾದಂಬರಿಗಳಲ್ಲಿ ವೃದ್ಧರ, ಒಡಹುಟ್ಟಿದವರ ಮಹಿಳಾ ಪಾತ್ರಗಳನ್ನು ಕಾಣಬಹುದು.ಸಫಲ, ದಾರುಣ, ವಿಷಮ ದಾಂಪತ್ಯದ ಮಹಿಳಾ ಪಾತ್ರಗಳು ಸಾಹಿತ್ಯಲೋಕದಲ್ಲಿ ಅಪರೂಪಕ್ಕೆ ಚಿತ್ರಿಸಬಹುದಾದ, ಮಹಿಳೆಯರ ಮೇಲೆ ಬೆಳಕು ಚೆಲ್ಲುವ ಪಾತ್ರಗಳಾಗಿ ಓದುಗರನ್ನು ಸದಾಕಾಡುತ್ತವೆ ಎಂದರು.ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಪರಿವರ್ತನೆಗಾಗಿ ಸಾಹಿತ್ಯದ ಅಗತ್ಯ ವಿದ್ಯಾರ್ಥಿಗಳಿಗಿದೆ. ಮನಸ್ಸನ್ನು ತೆರೆದಿಟ್ಟಾಗ ಮಾತ್ರಜ್ಞಾನದ ಬೆಳಕು ಒಳಹರಿಯಲು ಸಾಧ್ಯ.ಶಿಕ್ಷಕನಿಗಿಂತ ಮಿಗಿಲಾದ ಸಾಹಿತಿ ಮತ್ತೊಬ್ಬನಿಲ್ಲ ಎಂದರು.ವಿವಿಯ ಮಹಿಳಾ ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ಜ್ಯೋತಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಪರೀಕ್ಷಾಂಗ ಕುಲಸಚಿವ ಪ್ರೊ.ಕೆ. ಪ್ರಸನ್ನಕುಮಾರ್, ಡಿ.ವಿ.ಜಿ. ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ನಿತ್ಯಾನಂದ ಬಿ.ಶೆಟ್ಟಿ ಉಪಸ್ಥಿತರಿದ್ದರು.