ಸಾರಾಂಶ
ಆಟೋ ಚಾಲಕರು ತಮ್ಮ ವಾಹನಗಳಿಗೆ ಕನ್ನಡದ ಹಿರಿಮೆ ಸಾರುವ ಸಂದೇಶಗಳನ್ನು, ಚಿತ್ರಗಳನ್ನು ಬರೆಸುವ ಮೂಲಕ ಕನ್ನಡಾಭಿಮಾನವನ್ನು ಮೆರೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್ ಹೇಳಿದರು. ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಹೊಯ್ಸಳ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಹಮ್ಮಿಕೊಂಡ ಅದ್ಧೂರಿ ಕನ್ನಡ ರಾಜ್ಯೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ತಾಲೂಕಿನ ಹಲ್ಮಿಡಿಯಲ್ಲಿ ಲಭ್ಯವಾದ ಶಿಲಾಶಾಸನದಿಂದ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಜಗತ್ತಿನ ಸಾವಿರಾರು ಭಾಷೆಯಲ್ಲಿ ಲಿಪಿಯನ್ನು ಹೊಂದಿರುವ ಹೆಗ್ಗಳಿಕೆ ಕನ್ನಡ ಭಾಷೆಗಿದೆ ಎಂದರು.
ಕನ್ನಡಪ್ರಭ ವಾರ್ತೆ ಬೇಲೂರು
ಆಟೋ ಚಾಲಕರು ತಮ್ಮ ವಾಹನಗಳಿಗೆ ಕನ್ನಡದ ಹಿರಿಮೆ ಸಾರುವ ಸಂದೇಶಗಳನ್ನು, ಚಿತ್ರಗಳನ್ನು ಬರೆಸುವ ಮೂಲಕ ಕನ್ನಡಾಭಿಮಾನವನ್ನು ಮೆರೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್ ಹೇಳಿದರು.ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಹೊಯ್ಸಳ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಹಮ್ಮಿಕೊಂಡ ಅದ್ಧೂರಿ ಕನ್ನಡ ರಾಜ್ಯೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ತಾಲೂಕಿನ ಹಲ್ಮಿಡಿಯಲ್ಲಿ ಲಭ್ಯವಾದ ಶಿಲಾಶಾಸನದಿಂದ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಜಗತ್ತಿನ ಸಾವಿರಾರು ಭಾಷೆಯಲ್ಲಿ ಲಿಪಿಯನ್ನು ಹೊಂದಿರುವ ಹೆಗ್ಗಳಿಕೆ ಕನ್ನಡ ಭಾಷೆಗಿದೆ ಎಂದರು.
ಪುರಸಭೆ ಅಧ್ಯಕ್ಷ ಎ ಆರ್ ಅಶೋಕ್ ಮಾತನಾಡಿ, ಸರ್ಕಾರ ಮತ್ತು ಸಂಬಂಧ ಪಟ್ಟ ಇಲಾಖೆಗಳ ಧೋರಣೆಯಿಂದ ಅಭಿವೃದ್ಧಿ ಮರಿಚಿಕೆಯಾಗಿದೆ. ಇಡೀ ದೇಶದಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಮ್ಮೆಯ ನಾಡಾಗಿದೆ. ಕನ್ನಡತನ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಏಕರೂಪದ ಶಿಕ್ಷಣದ ವ್ಯವಸ್ಥೆಗೆ ಮುಂದಾಗಬೇಕಿದೆ. ಈಗಾಗಲೇ ತಾಲೂಕಿನಲ್ಕಿ ೫೦ನೇ ಸುವರ್ಣ ಸಂಭ್ರಮದ ಅಂಗವಾಗಿ ೪೦ ಅಡಿ ಎತ್ತರದ ಧ್ವಜಸ್ಥಂಭವನ್ನು ನಿರ್ಮಾಣ ಮಾಡಲು ಮುಂದಾಗಿದ್ದು, ಅದರಂತೆ ನಮ್ಮ ತಾಲೂಕಿನಲ್ಲಿ ಇರುವ ಹಲ್ಮಿಡಿ ಶಾಸನದ ಬಗ್ಗೆ ಪ್ರವಾಸಿ ತಾಣವನ್ನಾಗಿಸಲು ಮುಖ್ಯಮಂತ್ರಿಗಳಿಗೆ ಹಾಗೂ ಪ್ರವಾಸೋದ್ಯಮ ಸಚಿವರಿಗೆ ನಮ್ಮ ಸರ್ವ ಸದಸ್ಯರೊಂದಿಗೆ ಪಕ್ಷಾತೀತವಾಗಿ ಮನವಿ ಮಾಡಲಾಗುತ್ತದೆ ಎಂದರು. ಬೇಲೂರು ರೋಟರಿ ಕ್ಲಬ್ ಹಾಗೂ ಕಸಾಪ ಕಾರ್ಯದರ್ಶಿ ಬಿ.ಬಿ.ಶಿವರಾಜ್ ಮಾತನಾಡಿ, ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾದ ಬೇಲೂರು-ಹಳೇಬೀಡಿನಲ್ಲಿ ನೆನಗುದಿಗೆ ಬಿದ್ದ ಹೊಯ್ಸಳ ಮಹೋತ್ಸವ ನಡೆಸಲು ಸರ್ಕಾರ ಹಾಗೂ ಜಿಲ್ಲಾಡಳಿತ ಮೀನಾಮೇಷ ಎಣಿಸುತ್ತಿದೆ. ಈ ಬಗ್ಗೆ ಬೇಲೂರಿನ ಶಾಸಕರು ಸರ್ವಪಕ್ಷಗಳು ಮತ್ತು ಕನ್ನಡಪರ ಸಂಘಟನೆಗಳ ನಿಯೋಗದಿಂದ ಮುಖ್ಯಮಂತ್ರಿಗಳನ್ನು ಭೇಟಿಯಾಗಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹೊಯ್ಸಳ ಆಟೋ ಸಂಘದ ಅಧ್ಯಕ್ಷ ದೀಪು, ಕರವೇ ಅಧ್ಯಕ್ಷರಾದ ಚಂದ್ರಶೇಖರ್ ಮತ್ತು ವಿ.ಎಸ್.ಭೋಜೇಗೌಡ, ಪತ್ರಕರ್ತರಾದ ಪೈಂಟ್‌ರವಿ ಮತ್ತು ಗಣೇಶ್, ಪುರಸಭಾ ಸದಸ್ಯ ಬಿ.ಸಿ.ಜಗದೀಶ್, ಮಾನವ ಹಕ್ಕುಗಳ ಒಕ್ಕೂಟದ ಎಂ.ಜೆ.ನಿಂಗರಾಜು, ಮೈಥಿಲಿ ರಾಘವ್,ಉಪಾಧ್ಯಕ್ಷ ಅಂಜುಂ, ಗೌರವಾಧ್ಯಕ್ಷ ಪುಟ್ಟರಾಜು, ನರಸಿಂಹ,ರವೀಶ್ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದ ಕಾರ್ಯಕ್ರಮವನ್ನು ಉಪನ್ಯಾಸಕ ಲಕ್ಷ್ಮೀನಾರಾಯಣ ನಿರೂಪಿಸಿದರು.