ಸಾರಾಂಶ
ಪ್ರತಿ ಜೀವನ ಜಂಜಾಟದಲ್ಲಿ ಮನುಷ್ಯ ಒಂದಿಷ್ಟು ಆಧ್ಯಾತ್ಮಕ ಚಿಂತನೆ ಮತ್ತು ಭಗವದ್ಗೀತೆ ಅಧ್ಯಯನ ಮಾಡಿದರೆ ಮನುಷ್ಯನಿಗೆ ನೆಮ್ಮದಿ ಸಿಗಲು ಸಾಧ್ಯವಾಗುತ್ತದೆ ಎಂದು ಇಬ್ರಾಹಿಂಪುರದ ಶಿವಾನಂದ ಮಠದ ದಯಾನಂದ ಶ್ರೀಗಳು ಹೇಳಿದರು.
ನರಗುಂದ: ಪ್ರತಿ ಜೀವನ ಜಂಜಾಟದಲ್ಲಿ ಮನುಷ್ಯ ಒಂದಿಷ್ಟು ಆಧ್ಯಾತ್ಮಕ ಚಿಂತನೆ ಮತ್ತು ಭಗವದ್ಗೀತೆ ಅಧ್ಯಯನ ಮಾಡಿದರೆ ಮನುಷ್ಯನಿಗೆ ನೆಮ್ಮದಿ ಸಿಗಲು ಸಾಧ್ಯವಾಗುತ್ತದೆ ಎಂದು ಇಬ್ರಾಹಿಂಪುರದ ಶಿವಾನಂದ ಮಠದ ದಯಾನಂದ ಶ್ರೀಗಳು ಹೇಳಿದರು.
ಅವರು ತಾಲೂಕಿನ ಶಿರೋಳ ಗ್ರಾಮದ ಜಗದ್ಗುರು ಯಚ್ಚರಸ್ವಾಮಿಗಳ ಗವಿಮಠದಲ್ಲಿ ನಡೆದ 22ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಸನ್ಮಾನ ಸ್ವೀಕರಿಸಿ ಆನಂತರ ಮಾತನಾಡಿ, ಮನುಷ್ಯನಿಗೆ ನಿತ್ಯ ಬದುಕಿನ ಜಂಜಾಟದಲ್ಲಿ ನೆಮ್ಮದಿ ಎನ್ನುವಂತಹದು ಮಾಯವಾಗಿ ಹೋಗುತ್ತಿದೆ. ನಮ್ಮ ನಿತ್ಯ ಜೀವನದ ಒಂದಿಷ್ಟು ಸಮಯವನ್ನು ಮೀಸಲಿಟ್ಟು ಭಗವದ್ಗೀತೆಯನ್ನು ಓದಿದರೆ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ ಎಂದರು.ಜಗದ್ಗುರು ಯಚ್ಚರಸ್ವಾಮಿಗಳ ಗವಿಮಠದ ಅಭಿನವ ಯಚ್ಚರ ಶ್ರೀಗಳು ಮಾತನಾಡಿ, ಭಗದ್ಗೀತೆ ನೇರವಾಗಿ ಭಗವಂತನ ವಾಣಿಯಿಂದ ಬಂದದ್ದು ಅವುಗಳನ್ನು ಮನುಷ್ಯ ನಿತ್ಯ ಜೀವನದಲ್ಲಿ ಶ್ರವಣ ಪಠಣ ಮನನವನ್ನು ಮಾಡಿದರೆ ಒಂದಿಷ್ಟು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆತ್ಮ ಸಂತೋಷ ಲಭಿಸುತ್ತದೆ. ನಾವು ಮನೆಯಲ್ಲಿ ಮಕ್ಕಳ ಜೊತೆಗೂಡಿ ನಿತ್ಯವೂ ಒಂದೊಂದು ಶ್ಲೋಕವನ್ನು ಪಠಣ ಮಾಡಿದರೆ ಒಳ್ಳೆಯ ಸಂಸ್ಕಾರ ಬೆಳೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಕಾಶಗೌಡ ತಿರಕನಗೌಡ್ರ, ನಾಗನಗೌಡ ತಿಮ್ಮನಗೌಡ್ರ, ಮಲ್ಲನಗೌಡ ತಿರಕಗೌಡ್ರ, ಬಾಪುಗೌಡ ತಿಮ್ಮನಗೌಡ್ರ, ಮಹಾಬಳೇಶ್ವರ ಕೋಡಬಳಿ, ಶಿವನಗೌಡ ಪಾಟೀಲ, ವಿನಾಯಕ ಶಾಲದಾರ, ಶೇಖರಪ್ಪ ಗಟ್ಟಿ, ಮಲ್ಲನಗೌಡ ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು,ಮಲ್ಲಪ್ಪ ಚಿಕ್ಕನರಗುಂದ ಹಾಗೂ ಬಸವರಾಜ ಮಡಿವಾಳರ ಶಿವಾನುಭವ ಕಾರ್ಯಕ್ರಮದಲ್ಲಿ ಸಂಗೀತ ಸೇವೆಯನ್ನು ಸಲ್ಲಿಸಿದರು.