ಸಾರಾಂಶ
ರಾಜ್ಯದಲ್ಲಿ ಗೋವುಗಳ ಮೇಲೆ ನಡೆಯುತ್ತಿರುವ ಹಿಂಸೆಯಿಂದ ಗೋವಂಶ ಸುರಕ್ಷೆಗೆ ಪೇಜಾವರ ಶ್ರೀಪಾದರು ಕೊಟ್ಟಿರುವ ಕರೆಯಂತೆ, ಶಿರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಶನಿವಾರ ಇಲ್ಲಿನ ಕಡೆಕಾರು ಮಠಕ್ಕೆ ಆಗಮಿಸಿ ಶಿಷ್ಯರೊಂದಿಗೆ ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ಅರ್ಚನೆಯನ್ನು ಮಾಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ರಾಜ್ಯದಲ್ಲಿ ಗೋವುಗಳ ಮೇಲೆ ನಡೆಯುತ್ತಿರುವ ಹಿಂಸೆಯಿಂದ ಗೋವಂಶ ಸುರಕ್ಷೆಗೆ ಪೇಜಾವರ ಶ್ರೀಪಾದರು ಕೊಟ್ಟಿರುವ ಕರೆಯಂತೆ, ಶಿರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಶನಿವಾರ ಇಲ್ಲಿನ ಕಡೆಕಾರು ಮಠಕ್ಕೆ ಆಗಮಿಸಿ ಶಿಷ್ಯರೊಂದಿಗೆ ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ಅರ್ಚನೆಯನ್ನು ಮಾಡಿದರು.ಈ ಸಂದರ್ಭ ಶಿರೂರು ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ ಹಾಗೂ ಕಡೇಕಾರು ಮಠದ ಸೀತಾರಾಮ ಭಟ್ ಮತ್ತು ಸಹೋದರರು ಹಾಗೂ ತುಳು ಶಿವಳ್ಳಿ ಬ್ರಾಹ್ಮಣ ಸಂಘದ ಅಧ್ಯಕ್ಷ ಜಯರಾಮ ಆಚಾರ್ಯ ಮತ್ತು ಕಾರ್ಯದರ್ಶಿ ರವೀಂದ್ರ ಆಚಾರ್ಯ, ಪುರೋಹಿತ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.ಇದೇ ಸಂದರ್ಭ ಕೃಷ್ಣಂಗಾರ ಚತುರ್ದಶಿ ಪ್ರಯುಕ್ತ ಶಿರೂರು ಮೂಲ ಮಠದ ಸುವರ್ಣಾ ನದಿಯಲ್ಲಿ ಶ್ರೀಪಾದರು ಶಿಷ್ಯವರ್ಗದೊಂದಿಗೆ ತೀರ್ಥ ಸ್ನಾನ ಮಾಡಿದರು.ಶುಕ್ರವಾರ ಉದ್ಯಾವರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದಿಕ್ ಕಾಲೇಜು ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮಕ್ಕೆ ಶ್ರೀಪಾದರು ಭೇಟಿ ನೀಡಿ ಕಾಲೇಜನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಶ್ರೀಗಳನ್ನು ಬರ ಮಾಡಿಕೊಂಡರು. ಮಠದ ದಿವಾನರಾದ ಉದಯಕುಮಾರ್ ಸರಳತ್ತಾಯ ಉಪಸ್ಥಿತರಿದ್ದರು.