ಕಳಪೆ ಕಾಮಗಾರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಶಾಸಕ ಪೊನ್ನಣ್ಣ ಎಚ್ಚರಿಕೆ

| Published : Mar 02 2024, 01:53 AM IST

ಕಳಪೆ ಕಾಮಗಾರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಶಾಸಕ ಪೊನ್ನಣ್ಣ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಎನ್‌ಡಿಆರ್‌ಎಫ್‌ ವತಿಯಿಂದ ಒದಗಿಸಲಾದ 12 ಲಕ್ಷ ರು. ಅನುದಾನದಲ್ಲಿ ಪಾಡಿ ಇಗ್ಗುತಪ್ಪ ದೇವಾಲಯದ ಕಾಂಕ್ರಿಟ್‌ ರಸ್ತೆ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್ ಪೊನ್ನಣ ಭೂಮಿ ಪೂಜೆ ಮೂಲಕ ಚಾಲನೆ ನೀಡಿdru.

ಕನ್ನಡಪ್ರಭ ವಾರ್ತೆ ನಾಪೋಕ್ಲು ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದ ರಸ್ತೆ ಕಾಮಗಾರಿಯನ್ನು ಉತ್ತಮ ಗುಣಮಟ್ಟದಿಂದ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ,

ಶಾಸಕ ಎ.ಎಸ್ ಪೊನ್ನಣ ಹೇಳಿದ್ದಾರೆ.

ಎನ್‌ಡಿಆರ್‌ಎಫ್‌ ವತಿಯಿಂದ ಒದಗಿಸಲಾದ 12 ಲಕ್ಷ ರು. ಅನುದಾನದಲ್ಲಿ ಪಾಡಿ

ಇಗ್ಗುತಪ್ಪ ದೇವಾಲಯದ ಕಾಂಕ್ರಿಟ್‌ ರಸ್ತೆ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮಸ್ಥರ, ಸ್ಥಳೀಯ ನಾಗರಿಕರ ಬೇಡಿಕೆಯಂತೆ ರಸ್ತೆ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಲಾಗುವುದು. ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ .ಉತ್ತಮ ಗುಣಮಟ್ಟದ ಕೆಲಸ ನಿಗದಿತ ಸಮಯದಲ್ಲಿ ಪೂರೈಸಬೇಕು. ಕಳಪೆ ಕಾಮಗಾರಿ ಇದ್ದಲ್ಲಿ ನನ್ನ ಗಮನಕ್ಕೆ ತನ್ನಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪೊಂಗೇರ ಶಿಲ್ಪ, ಮಾಜಿ ಅಧ್ಯಕ್ಷೆ ಕರ್ತಂಡ ಶೈಲ ಕುಟ್ಟಪ್ಪ, ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕಲಿಯಂಡ ಸಂಪನ್ ಅಯ್ಯಪ್ಪ , ಸದಸ್ಯರಾದ ಹರೀಶ್ ಮೋಣ್ಣಪ್ಪ , ಲೀಲಾವತಿ ಕೆ.ಆರ್., ಶೌಕತ್ ಆಲಿ, ಬಶೀರ್, ರಜು, ಬಡಕಡ ದೀನ ಪೂವಯ್ಯ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಸೂರಜ್‌ ಹೊಸೂರು, ಪ್ರಮುಖರಾದ ಬಿದ್ದಾ ತಂಡ ತಮ್ಮಯ್ಯ , ಕಕ್ಕಬ್ಬೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೈಕೋಲ್ ಉಸ್ಮಾನ್, ಉದಿಯಂಡ ಶುಭಾಷ್ , ದೇವಾಲಯ ಪಾರುಪತ್ಯೆಗಾರ ಪರದಂಡ ಪ್ರಿನ್ಸ್‌ ತಮ್ಮಯ್ಯ, ಪಂಚಾಯಿತಿ ಮಾಜಿ ಅಧ್ಯಕ್ಷ ಕೋಟೆರ ನೈಲ್ ಕೆಂಗಪ್ಪ, ಕುಡಿಯರ ಮುತ್ತಪ್ಪ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು. ಅರ್ಚಕ ಶ್ರೀಕಾಂತ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

ಉದಿಯಂದ ಶುಭಾಶ್ ಹಾಗೂ ಕಲಿಯಂಡ ಸಂಪನ್ ಅಯ್ಯಪ್ಪ ಗ್ರಾಮಸ್ಥರ ಪರವಾಗಿ ಶಾಸಕರನ್ನು ಸನ್ಮಾನಿಸಿದರು.

ಇದಕ್ಕೂ ಮುನ್ನ ನರಿಯ೦ದಡ ಅರಪಟ್ಟು, ಪೊದವಾಡದಲ್ಲಿರುವ ಸ್ವಚ್ಛ ಸಂಕೀರ್ಣ ಘಟಕಕ್ಕೆ ಶಾಸಕ ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿ, ಕೊಡಗಿನಲ್ಲಿ ಘನ ತ್ಯಾಜ್ಯ ನಿವಾರಣೆಯ ಸವಾಲನ್ನು ಸಮರ್ಥವಾಗಿ ಎದುರಿಸಬೇಕಾಗಿದೆ. ಸ್ವಚ್ಛ ಪರಿಸರ ನಿರ್ಮಾಣಕ್ಕೆ ನಾಗರಿಕರು, ಪಂಚಾಯಿತಿ ಸದಸ್ಯರು ಕೈಜೋಡಿಸಬೇಕು ಎಂದು ಕರೆ ನೀಡಿದರು.

1-ಎನ್ ಪಿ ಕೆ-1.

ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಶಾಸಕ ಎ.ಎಸ್ ಪೊನ್ನಣ ಭೂಮಿ ಪೂಜೆ ಮೂಲಕ ಚಾಲನೆ ನೀಡುತ್ತಿರುವುದು.1-ಎನ್ ಪಿ ಕೆ-2.

ನರಿಯ೦ದಡ ಅರಪಟ್ಟು, ಪೊದವಾಡದಲ್ಲಿರುವ ಸ್ವಚ್ಛ ಸಂಕೀರ್ಣ ಘಟಕಕ್ಕೆ ಶಾಸಕ ಎ.ಎಸ್ ಪೊನ್ನಣ ಭೂಮಿ ಪೂಜೆ ನೆರವೇರಿಸಿದರು.