ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ: ದಿವಾಕರ ಭಟ್

| Published : Nov 17 2025, 01:02 AM IST

ಸಾರಾಂಶ

ಶೃಂಗೇರಿ ಮಕ್ಕಳು ಮನುಕುಲದ ಮೊಳಕೆಗಳು. ಮಕ್ಕಳಲ್ಲಿ ವಿವಿಧ ರೀತಿ ಸುಪ್ತ ಪ್ರತಿಭೆಗಳು ಅಡಗಿರುತ್ತದೆ.ಅವರಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಶೃಂಗೇರಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿವಾಕರ ಭಟ್ ಹೇಳಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಮಕ್ಕಳು ಮನುಕುಲದ ಮೊಳಕೆಗಳು. ಮಕ್ಕಳಲ್ಲಿ ವಿವಿಧ ರೀತಿ ಸುಪ್ತ ಪ್ರತಿಭೆಗಳು ಅಡಗಿರುತ್ತದೆ.ಅವರಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಶೃಂಗೇರಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿವಾಕರ ಭಟ್ ಹೇಳಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪೋಷಕರ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶದ ಮೊದಲ ಪ್ರಧಾನಿ ನೆಹರೂ ರವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ. ನೆಹರೂ ಮಕ್ಕಳು ದೇಶದ ಭವಿಷ್ಯ ಎಂದು ನಂಬಿದ್ದರು.

ಮಕ್ಕಳ ಬಗ್ಗೆ ವಿಶೇಷವಾದ ಕಾಳಜಿ ಹೊಂದಿದ್ದರು. ಇವರನ್ನು ಚಾಚಾ ನೆಹರು ಎಂದು ಕರೆಯಲಾಗುತ್ತಿತ್ತು.ಮಕ್ಕಳೆಂದರೆ ಅಪಾರ ಪ್ರೀತಿ ಹೊಂದಿದ್ದ ಇವರು ದೇಶದ ಮಕ್ಕಳಿಗೆ ಅಗತ್ಯ ಶಿಕ್ಷಣ ಕಲ್ಪಿಸುವುದು ಅವರ ಕನಸಾಗಿತ್ತು. ಪ್ರತಿಯೊಂದು ಮಗುವಿಗೂ ಉಚಿತ ಶಿಕ್ಷಣ, ಸಮಾನತೆ,ಸೌಲಭ್ಯ ಸಿಗಬೇಕು ಎಂದು ಬಯಸಿದ್ದರು.ನಾಳೆ ನಿಮ್ಮದು ಎಂದು ಮಕ್ಕಳಿಗೆ ಆಗಾಗ ಹೇಳುತ್ತಿದ್ದರು.

ಶಿಕ್ಷಣ ಮಕ್ಕಳ ಬೆಳವಣಿಗೆಗೆ ಆಧಾರ. ಕೇವಲ ಪರೀಕ್ಷೆಗ‍ಳಿಗೆ ಸೀಮಿತವಾಗಿರದೇ ಶಿಕ್ಷಣ ಚಿಂತನಶೀಲ, ಸೃಜನಶೀಲತೆ, ದಯೆಯುಳ್ಳ ವ್ಯಕ್ತಿಗಳನ್ನಾಗಿ ರೂಪಿಸುತ್ತದೆ. ಮಕ್ಕಳ ಸರ್ವಾಂಗಿಣ ಅಭಿವೃದ್ಧಿಯೇ ಶಿಕ್ಷಣದ ಅಭಿವೃದ್ಧಿ. ನೆಹರೂ ಸ್ವಾತಂತ್ರ್ಯ ಹೋರಾಟಗಾರರಾಗಿ ಅನೇಕ ಬಾರಿ ಜೈಲು ಶಿಕ್ಷೆ ಅನುಭವಿಸಿದ್ದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಮೊದಲ ಪ್ರಧಾನಿಯಾಗಿ 1947- 1964 ರವರೆಗೆ ಅಧಿಕಾರ ನಡೆಸಿದ್ದರು. ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದರು ಎಂದರು. ಮಕ್ಕಳಿಗೆ ವಿವಿಧ ಛದ್ಮವೇಷ ಸ್ಪರ್ದೆ ಆಯೋಜಿಸಲಾಗಿತ್ತು.ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯ ಶಿಕ್ಷಕಿ ವೀಣಾ, ಎಸ್ ಡಿ ಎಂ ಸಿ ಸದಸ್ಯರಾದ ಲಕ್ಷಮಿಕಾಂತ್, ಗಜೇಂದ್ರ ಮತ್ತಿತರರರು ಉಪಸ್ಥಿತರಿದ್ದರು.

15 ಶ್ರೀ ಚಿತ್ರ 1-

ಶೃಂಗೇರಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಮಕ್ಕಳ ದಿನಾಚಾರಣೆ ನಡೆಯಿತು.