ಸಾರಾಂಶ
ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಮತ್ತೆ ಕೇಂದ್ರಕ್ಕೆ ಶಿಫಾರಸ್ಸು ಮಾಡುವದಾಗಿ ಭರವಸೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೆ. 22ರಿಂದ ಅ.7ರವರೆಗೆ ನಡೆವ ಸಮೀಕ್ಷೆ ವೇಳೆ ಕುರುಬ ಅಂತಲೇ ಜಾತಿ ಕಾಲಂನಲ್ಲಿ ಬರೆಯಿಸುವಂತೆ ಸಮಾಜ ಬಾಂಧವರಿಗೆ ಕರೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಮತ್ತೆ ಕೇಂದ್ರಕ್ಕೆ ಶಿಫಾರಸ್ಸು ಮಾಡುವದಾಗಿ ಭರವಸೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೆ. 22ರಿಂದ ಅ.7ರವರೆಗೆ ನಡೆವ ಸಮೀಕ್ಷೆ ವೇಳೆ ಕುರುಬ ಅಂತಲೇ ಜಾತಿ ಕಾಲಂನಲ್ಲಿ ಬರೆಯಿಸುವಂತೆ ಸಮಾಜ ಬಾಂಧವರಿಗೆ ಕರೆ ನೀಡಿದ್ದಾರೆ.ಕರ್ನಾಟಕ ರಾಜ್ಯ ಕುರುಬಗೊಂಡ ಸಂಘ ಮತ್ತು ಸಂಗೊಳ್ಳಿ ರಾಯಣ್ಣ ಯುವಕ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಯಣ್ಣ ಅವರ ಮೂರ್ತಿ ಅನಾವರಣಗೊಳಿಸಿ, ನಗರ ಸಿಟಿ ಬಸ್ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣರ ಹೆಸರು ನಾಮಕರಣ ಮಾಡಿ ಮಾತನಾಡಿದರು.
ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಹಿಂದೆಯೇ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಇದನ್ನು ಕೇಂದ್ರ ಸರ್ಕಾರ ವಾಪಾಸ್ ಕಳುಹಿಸಿದೆ. ಹೀಗಾಗಿ ಮತ್ತೆ ಹೆಚ್ಚುವರಿ ಅಂಕಿ ಅಂಶ, ದಾಖಲೆಗಳ ಸಮೇತ ಕೇಂದ್ರಕ್ಕೆ ಮತ್ತೆ ಶಿಫಾರಸ್ಸು ಕಳುಹಿಸಲಾಗುವುದು ಎಂದು ಸಿ.ಎಂ ಭರವಸೆ ನೀಡಿದರು.ಸಿದ್ದರಾಮಯ್ಯನವರನ್ನು ಅಲ್ಲಾಡಿಸಲು ಆಗಲ್ಲ: ಭೈರತಿ
ಈ ದೇಶ ಕಂಡ ಪ್ರಾಮಾಣಿಕ ರಾಜಕಾರಣಿ ಅಂದ್ರೆ ಸಿದ್ದರಾಮಯ್ಯ, ಸಿದ್ದರಾಮಯ್ಯ ಅವರು ಕುರುಬ ಸಮಾಜದಲ್ಲಿ ಹುಟ್ಟಿದ್ದು ನಮಗೆಲ್ಲ ಹೆಮ್ಮೆ, ಎಲ್ಲಾ ಸಮಾಜಗಳಿಗೂ ಒಳ್ಳೆಯದು ಮಾಡುವ ಮುಖ್ಯಮಂತ್ರಿ ಅಂದ್ರೆ ಸಿದ್ದರಾಮಯ್ಯ, ಸಿದ್ದರಾಮಯ್ಯ ಅವರನ್ನು ಯಾವುದೇ ಕಾರಣಕ್ಕೂ ಯಾರು ಅಲ್ಲಾಡಿಸಲು ಆಗಲ್ಲನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಬೆಂಬಲ ಇರುವ ವರೆಗೂ ಸಿದ್ದರಾಮಯ್ಯ ಅಲ್ಲಾಡಿಸಲು ಯಾರಿಗೂ ಆಗಲ್ಲ
ಹೈಕಮಾಂಡ್ ಅವರೆಲ್ಲರ ಪ್ರೀತಿ ವಿಶ್ವಾಸ ಗಳಿಸಿದ್ದಾರೆಂದು ಸಚಿವ ಸುರೇಶ ಬೈರತಿ ಕೊಂಡಾಡಿದರು.ಕುರುಬ ಸಮಾಜ ಶೌರ್ಯಕ್ಕೆ ಹೆಸರು: ಸಚಿವ ಪ್ರಿಯಾಂಕ್ ಖರ್ಗೆ
ಶೌರ್ಯಕ್ಕೆ ಕುರುಬರು ಹೆಸರಾಗಿದ್ದರೆ, ಹಾಲುಮತ ಸಮಾಜ ನಂಬಿಕೆಗೆ ದ್ರೋಹ ಮಾಡದವರು, ಸಮಾಜಿಕ ನ್ಯಾಯಕ್ಕಾಗಿ ಸಿಎಂ ಸಿದ್ದರಾಮಯ್ಯ ಹೆಸರಾಗಿದ್ದಾರೆ. ಸುಳ್ಳಿನ ಮಾತು ನಂಬಬೇಡಿ. ಅಭಿವೃದ್ಧಿ ಕೆಲಸ ಮಾಡುವವರನ್ನು ಬೆಂಬಲಿಸಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಸಿದ್ದರಾಮಾನಂದ ಪುರಿ ಸ್ವಾಮಿಜಿ, ಹವಾ ಮಲ್ಲಿನಾಥ ಸ್ವಾಮಿಜಿ, ಮಾಳಿಂಗರಾಯ ಮಹಾರಾಜ, ಹವಾ ಮಲ್ಲಿನಾಥ ಮಹಾರಾಜ ಭಾಗವಹಿಸಿದ್ದರು.ಸಿಎಂ ಅಭಿನಂದನಾ: ಉಟಕ್ಕಾಗಿ ನೂಕುನುಗ್ಗಲು
ನಾ ಮುಂದು ತಾ ಮುಂದು ಅಂತ ಅನ್ನ ಬಡಿಸಿಕೊಳ್ಳಲು ಪರದಾಡಿದ ಜನ ಕಲಬುರಗಿಯ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ನಡೆಯುತ್ತಿರುವ ಅಭಿನಂದನಾ ಸಮಾರಂಭ ಸಮಾರಂಭಕ್ಕಾಗಿ ಹಾಕಿದ ಬೃಹತ್ ಪೆಂಡಾಲ್ ನ ಪಕ್ಕದ ಜಾಗದಲ್ಲಿ ಊಟದ ವ್ಯವಸ್ಥೆ ಕಸ ತುಂಬಿಕೊಂಡು ಹೋಗುವ ವಾಹನ ಪಾರ್ಕ್ ಮಾಡಿರುವ ಗಲೀಜು ಜಾಗದಲ್ಲಿ ಊಟಕ್ಕೆ ವ್ಯವಸ್ಥೆ ಟ್ರಾಕ್ಟರ್ ವಾಹನದಲ್ಲಿ ತಂದು ಊಡ ನೀಡುತ್ತಿರುವ ಆಯೋಜಕರು ಕಾರ್ಯಕ್ರಮ ಆಗಮಿಸಿದ ಜನ ಊಟ ಬಡಿಸಿಕೊಳ್ಳಲು ಹರಸಾಹಸ ಪಡಬೇಕಾದ ಸ್ಥಿತಿ.