ಎಸ್‌ಆರ್‌ಎನ್‌ ಮೇಹ್ತಾ ವಾಣಿಜ್ಯ- ವಿಜ್ಞಾನ ಕಾಲೇಜಿಗೆ ದಾಖಲೆಯ ಅತ್ಯುತ್ತಮ ಫಲಿತಾಂಶ

| Published : Apr 11 2024, 12:47 AM IST

ಎಸ್‌ಆರ್‌ಎನ್‌ ಮೇಹ್ತಾ ವಾಣಿಜ್ಯ- ವಿಜ್ಞಾನ ಕಾಲೇಜಿಗೆ ದಾಖಲೆಯ ಅತ್ಯುತ್ತಮ ಫಲಿತಾಂಶ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಪಿಯುಸಿ ಫಲಿತಾಂಶದಲ್ಲಿ ಇಲ್ಲಿನ ಎಸ್‌ಆರ್‌ಎನ್ ಮೇಹ್ತಾ ಕಾಲೇಜಿನ ವಾಣಿಜ್ಯ ವಿಭಾಗಕ್ಕೆ ಶೇ.100 ಫಲಿತಾಂಶ ಬಂದಿದೆ, ಮೇಹ್ತಾ ಪಪೂ ಕಾಲೇಜಿಗೆ ಶೇ.97.07 ಫಲಿತಾಂಶ ಬಂದಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಪ್ರಸಕ್ತ ಪಿಯುಸಿ ಫಲಿತಾಂಶದಲ್ಲಿ ಇಲ್ಲಿನ ಎಸ್‌ಆರ್‌ಎನ್ ಮೇಹ್ತಾ ಕಾಲೇಜಿನ ವಾಣಿಜ್ಯ ವಿಭಾಗಕ್ಕೆ ಶೇ.100 ಫಲಿತಾಂಶ ಬಂದಿದೆ, ಮೇಹ್ತಾ ಪಪೂ ಕಾಲೇಜಿಗೆ ಶೇ.97.07 ಫಲಿತಾಂಶ ಬಂದಿದೆ.

ವಾಣಿಜ್ಯ ವಿಭಾಗದಲ್ಲಿ 11 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌, 3 ಪ್ರಥಮ, 7 ದ್ವಿತೀಯ, ಓರ್ವ ಹಾಗೇ ಉತ್ತೀರ್ಣನಾಗಿದ್ದಾನೆ. ಉದಯಕುಮಾರ್‌ ಪಾಟೀಲ್‌ 578 ಅಂಕ ಪಡೆದು ಮೊದಲಿಗನಾಗಿ, ಭೂಮಿಕಾ 560 ಅಂಕ ಪಡೆದು ದ್ವಿತೀಯಳಾಗಿ, ಶೇಯಸ್‌ ಕುಲಕರ್ಣಿ 514 ಅಂಕ ಪಡೆದು ಮೂರನೆಯವರಾಗಿ ಪಾಸಾಗಿದ್ದಾರೆ.

ಮೇಹ್ತಾ ಪಪೂ ಕಾಲೇಜಿನ ವಿಜ್ಞಾನ ವಿಭಾಗದಲ್ಲಿಯೂ ಉತ್ತಮ ಫಲಿತಾಂಶ ದಾಖಲಾಗಿದೆ. 121 ವಿದ್ಯಾರ್ಥಿಗಳಲ್ಲಿ 21 ಡಿಸ್ಟಿಂಕ್ಷನ್‌, 81 ಪ್ರಥಮ ದರ್ಜೆ, 12 ದ್ವಿತೀಯ ದರ್ಜೆ ಪಾಸಾಗಿದ್ದಾರೆ.

571 ಅಂಕ ಪಡೆದು ಗೌಡಪ್ಪ ಕಾಲೇಜಿಗೆ ಮೊದಲಿಗನಾಗಿದ್ದಾನೆ. ಅನಂತ ದೇಶಮುಖ 567, ಅನ್ವಿತಾ 561, ಮೊಹ್ಮದ್‌ ಅಬ್ದುಲ್‌ ರಹೇಮಾನ್‌ 560, ಪವಿತ್ರಾ- 556, ಈಶ್ವರಿ- 554, ಮೋಹನ್‌- 554, ಪ್ರಾಥ್ವಿ 548, ಅನನ್ಯ 543, ವರಾಲಿಕಾ 543, ಮೊಹ್ಮದ್‌ ಜಾವದ್‌ ಅಲಿ- 541 ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.