ರೆಡ್ಡಿ ಕುಟುಂಬದ ಗನ್ ಮ್ಯಾನ್ ಪಿಸ್ತೂಲ್ ಕಳವು

| Published : Oct 17 2023, 12:45 AM IST

ಸಾರಾಂಶ

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಕುಟುಂಬದ ಗನ್‌ಮ್ಯಾನ್ ಬಾಲಮುಕುಂದ ಶುಕ್ಲಾ ಅವರ ಪಿಸ್ತೂಲ್ ಕಳ್ಳತನವಾಗಿದ್ದು, ಈ ಕುರಿತು ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಬಳ್ಳಾರಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಕುಟುಂಬದ ಗನ್‌ಮ್ಯಾನ್ ಬಾಲಮುಕುಂದ ಶುಕ್ಲಾ ಅವರ ಪಿಸ್ತೂಲ್ ಕಳ್ಳತನವಾಗಿದ್ದು, ಈ ಕುರಿತು ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ವೀರನಗೌಡ ಕಾಲನಿಯಲ್ಲಿರುವ ತಮ್ಮ ಮನೆಯ ಬಾಗಿಲು ಗ್ರಿಲ್ ಮುರಿದು ಒಳ ಪ್ರವೇಶಿಸಿರುವ ಕಳ್ಳರು, ಬೆಡ್ ರೂಂನ ಗೂಡಿನಲ್ಲಿಟ್ಟಿದ್ದ ಸುಮಾರು ₹80 ಸಾವಿರ ಮೌಲ್ಯದ ಪಿಸ್ತೂಲ್ ಹಾಗೂ 6 ಜೀವಂತ ಗುಂಡುಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಬಾಲಮುಕುಂದ ಶುಕ್ಲಾ ದೂರಿನಲ್ಲಿ ತಿಳಿಸಿದ್ದಾರೆ. ಬಾಲಮುಕುಂದ ಶುಕ್ಲಾ ಅವರು ಜನಾರ್ದನ ರೆಡ್ಡಿ ಪತ್ನಿ ಮತ್ತು ಮಗನ ಗನ್‌ಮ್ಯಾನ್ ಆಗಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.