ರಾಮನಗರ: ರೇಷ್ಮೆ ನೂಲು ಬಿಚ್ಚುವವರ ಮತ್ತು ನೇಕಾರರ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ ಪರ್ವೀಜ್ ಪಾಷಾ ಬಣದ ಮಹಮ್ಮದ್ ಸಲಾವುದ್ದೀನ್ ಅಧ್ಯಕ್ಷರಾಗಿ ಮತ್ತು ವಿ.ಶ್ರೀನಿವಾಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ
ರಾಮನಗರ: ರೇಷ್ಮೆ ನೂಲು ಬಿಚ್ಚುವವರ ಮತ್ತು ನೇಕಾರರ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ ಪರ್ವೀಜ್ ಪಾಷಾ ಬಣದ ಮಹಮ್ಮದ್ ಸಲಾವುದ್ದೀನ್ ಅಧ್ಯಕ್ಷರಾಗಿ ಮತ್ತು ವಿ.ಶ್ರೀನಿವಾಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪರ್ವೀಜ್ ಪಾಷ ಬಣದಿಂದ ಮಹಮ್ಮದ್ ಸಲಾವುದ್ದೀನ್ ಮತ್ತು ಯಾಸಿನ್ ಪಾಷ ನಾಮಪತ್ರ ಸಲ್ಲಿಸಿದ್ದರು. ಚುನಾವಣೆ ಪ್ರಕ್ರಿಯೆಯಲ್ಲಿ ಮಹಮ್ಮದ್ ಸಲಾವುದ್ದೀನ್ 7 ಮತ ಪಡೆದು ಪ್ರತಿಸ್ಪರ್ಧಿ ಯಾಸಿನ್ ಪಾಷಾರನ್ನು 4 ಮತಗಳಿಂದ ಪರಾಭವಗೊಳಿಸಿದರು.ಉಪಾಧ್ಯಕ್ಷ ಸ್ಥಾನಕ್ಕೆ ವಿ.ಶ್ರೀನಿವಾಸ್ದೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಹಾಗು ಸಹಕಾರ ಇಲಾಖೆಯ ಪುರುಷೋತ್ತಮ್ ಘೋಷಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ ನಿರ್ದೇಶಕರಾದ ಯಾಸಿನ್ ಪಾಷ, ಮಹಮ್ಮದ್ ಸಲಾವುದ್ದೀನ್, ನಯಾಜ್ ಉಲ್ಲಾ ಖಾನ್, ಫೈರೋಜ್ ಖಾನ್ , ಮಹಮ್ಮದ್ ಷಫಿ ಅಹಮದ್, ನಾಸಿರುದ್ದೀನ್, ಶ್ರೀನಿವಾಸ್, ಅಜ್ಮತ್, ನೂರ್ ಸಾಧಿಕ್ ಮತ್ತು ಆಯಿಷಾ ಖಾನಂ ಪಾಲ್ಗೊಂಡಿದ್ದರು.
ಮಾದರಿ ಸೊಸೈಟಿಗೆ ಪ್ರಯತ್ನ:ನೂತನ ಅಧ್ಯಕ್ಷ ಮಹಮದ್ ಸಲಾವುದ್ದೀನ್ ಮಾತನಾಡಿ, ನನ್ನ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಪರ್ವಿಜ್ ಪಾಷಾ ನಮಗೆ ಸೇವೆ ಮಾಡಲು ಒಳ್ಳೆಯ ನಿರ್ದೇಶಕರ ತಂಡ ಕಟ್ಟಿ ಕೊಟ್ಟಿದ್ದಾರೆ. ಎಲ್ಲರ ಸಹಕಾರದಲ್ಲಿ ಮಾದರಿ ಸೊಸೈಟಿ ಮಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಶಾಸಕ ಇಕ್ಬಾಲ್ ಹುಸೇನ್ ಸೊಸೈಟಿ ಕಟ್ಟಡ ನಿರ್ಮಾಣಕ್ಕಾಗಿ 10 ಲಕ್ಷ ರು. ಅನುದಾನ ನೀಡಿದ್ದಾರೆ. ರೀಲರ್ಸ್ ಗಳಿಗೆ ನಮ್ಮ ಸೊಸೈಟಿಯಿಂದ ಸರ್ಕಾರದ ಸವಲತ್ತುಗಳ ಜೊತೆಗೆ ಉತ್ತಮ ವಹಿವಾಟು ನಡೆಸಲು ಎಲ್ಲ ರೀತಿಯ ನೆರವು ನೀಡಲಾಗುವುದು ಎಂದರು.
ಪರ್ವಿಜ್ ಪಾಷ ಬೆಂಬಲಿತರೇ ಆಯ್ಕೆ:ರೇಷ್ಮೆನೂಲು ಬಿಚ್ಚುವವರ ಮತ್ತು ನೇಕಾರರ ಕೈಗಾರಿಕಾ ಸಹಕಾರ ಸಂಘವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಪರ್ವಿಜ್ ಪಾಷ ಮತ್ತು ಅಕ್ಲಿಂ ಅಬ್ರಾರ್ ನಡುವೆ ನಿರ್ದೇಶಕ ಚುನಾವಣೆ ಪ್ರತಿಷ್ಠೆಯಿಂದ ನಡೆದಿತ್ತು. ಅಂದು ಸಹ ಪರ್ವಿಜ್ ಪಾಷಾ ಬೆಂಬಲಿತರು ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು. ಇದೀಗ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳನ್ನು ವಶಪಡಿಸಿಕೊಳ್ಳುವಲ್ಲಿ ಪರ್ವೀಜ್ ಪಾಷಾ ತಂಡ ಯಶಸ್ವಿಯಾಗಿದೆ.
ನೂತನ ಅಧ್ಯಕ್ಷ - ಉಪಾಧ್ಯಕ್ಷರನ್ನು ನಗರಸಭೆ ಸದಸ್ಯ ರಮೇಶ್, ರಾಮನಗರ ಸಿಲ್ಕ್ ರೀಲರ್ಸ್ ವೆಲ್ಫರ್ ಅಸೋಸಿಯೇಷನ್ ಅಧ್ಯಕ್ಷ ಪರ್ವೀಜ್ ಪಾಷ, ಕಾರ್ಯದರ್ಶಿ ಮೋಸಿನ್ ಅಲಿ ಖಾನ್, ಹಿರಿಯ ಉಪಾಧ್ಯಕ್ಷಹಾಜಿ ಸೈಯದ್ ಶಫಿ ಉಲ್ಲಾ , ಜಂಟಿ ಕಾರ್ಯದರ್ಶಿ ಮಹಮ್ಮದ ತಂಜಿಮ್, ಮುಖಂಡರಾದ ಶಾಂತಲಿಂಗೇಗೌಡ, ಬಾಲಗೇರಿ ಪ್ರಭು, ಹಬೀಬುಲ್ಲಾ, ನಯಾಜುಲ್ಲಾ, ಮಹಮ್ಮದ್ ನಿಜಾಂ ಇತರರು ಅಭಿನಂದಿಸಿದರು.
ಬಾಕ್ಸ್ .............ರೀಲರ್ಸ್‌ಗಳು ರೇಷ್ಮೆ ಮಾರುಕಟ್ಟೆ ಸ್ಥಳಾಂತರ ಒಪ್ಪಲ್ಲ: ಪರ್ವೀಜ್ ಪಾಷಾ
ಕನ್ನಡಪ್ರಭ ವಾರ್ತೆ ರಾಮನಗರಜಿಲ್ಲಾ ಕೇಂದ್ರ ರಾಮನಗರದಲ್ಲಿಯೇ ಎಲ್ಲ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ರೇಷ್ಮೆ ಮಾರುಕಟ್ಟೆ ಕಟ್ಟಡವನ್ನು ಚನ್ನಪಟ್ಟಣದಲ್ಲಿ ಏಕೆ ನಿರ್ಮಿಸಿದರು ಎಂಬುದು ಇಲ್ಲಿವರೆಗೂ ಅರ್ಥವಾಗುತ್ತಿಲ್ಲ. ಮಾರುಕಟ್ಟೆ ಸ್ಥಳಾಂತರದ ವಿಚಾರ ಬಂದಾಗ ಎಲ್ಲ ರೀಲರ್ಸ್ ಗಳು ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ರಾಮನಗರ ಸಿಲ್ಕ್ ರೀಲರ್ಸ್ ವೆಲ್ಫರ್ ಅಸೋಸಿಯೇಷನ್ ಅಧ್ಯಕ್ಷ ಪರ್ವೀಜ್ ಪಾಷಾ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ರಾಮನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿ ಜಿಲ್ಲೆ ಘೋಷಿಸಿದರು. ಇಲ್ಲಿ ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುವಂತೆ ಮಾಡಿದರು. ಆದರೆ, ರಾಮನಗರಕ್ಕೆ ರೇಷ್ಮೆನಗರಿ ಎಂದು ಹೆಸರು ಬರಲು ಕಾರಣವಾದ ವಿಶ್ವವಿಖ್ಯಾತ ರೇಷ್ಮೆ ಮಾರುಕಟ್ಟೆಯ ಹೊಸ ಕಟ್ಟಡವನ್ನು ಚನ್ನಪಟ್ಟಣದಲ್ಲಿ ಏಕೆ ನಿರ್ಮಿಸಿದರೊ ಗೊತ್ತಿಲ್ಲ. ಅವರಿಗೆ ರೀಲರ್ಸ್ ಗಳ ಮೇಲೆ ಇಷ್ಟೊಂದು ಕೋಪ ಏಕೆಂದು ಪ್ರಶ್ನಿಸಿದರು.ಕುಮಾರಸ್ವಾಮಿ ಮನಸ್ಸು ಮಾಡಿದ್ದರೆ ಇಲ್ಲಿಯೇ ಹೈಟೆಕ್ ಮಾರುಕಟ್ಟೆ ನಿರ್ಮಾಣ ಮಾಡಬಹುದಿತ್ತು. ಈಗಿರುವ ರೇಷ್ಮೆ ಮಾರುಕಟ್ಟೆ ಪಕ್ಕದಲ್ಲಿಯೇ 3.16 ಎಕರೆ ಖಾಸಗಿ ಜಾಗವಿದ್ದು, ಅದಕ್ಕೆ 1.51 ಕೋಟಿ ರುಪಾಯಿ ಭೂ ಪರಿಹಾರ ವಿತರಿಸಲಾಗಿದೆ. ಆದರೆ, ರೇಷ್ಮೆ ಇಲಾಖೆ ಇಲ್ಲಿವರೆಗೆ ಏಕೆ ಮೌನವಾಗಿದೆ ಎಂದು ಪ್ರಶ್ನಿಸಿದರು.
ರಾಜ್ಯಸರ್ಕಾರ ರೇಷ್ಮೆ ಮಾರುಕಟ್ಟೆಯನ್ನು ರಾಮನಗರದಿಂದ ಚನ್ನಪಟ್ಟಣಕ್ಕೆ ಸ್ಥಳಾಂತರ ಮಾಡುತ್ತದೆಯೊ ಇಲ್ಲವೊ ಕಾದು ನೋಡುತ್ತೇವೆ. ರೀಲರ್ಸ್ ಗಳು ಚನ್ನಪಟ್ಟಣದ ಹೈಟೆಕ್ ರೇಷ್ಮೆ ಮಾರುಕಟ್ಟೆಗೆ ಹೋಗಲು ತಯಾರಿಲ್ಲ. ಸರ್ಕಾರದ ಆದೇಶ ನೋಡಿಕೊಂಡು ಎಲ್ಲ ರೀಲರ್ಸ್ ಗಳ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.1973ರಲ್ಲಿ ರೀಲರ್ಸ್ ಸೊಸೈಟಿ ಸ್ಥಾಪಿಸಿದ್ದು, ಅಂದಿನಿಂದ ಇಲ್ಲಿವರೆಗೂ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಈಗ ರೀಲರ್ಸ್ ಗಳು ಒಳ್ಳೆಯ ಫಲಿತಾಂಶ ನೀಡಿದ್ದು, ನಮ್ಮ ತಂಡ ರೀಲರ್ಸ್ ಗಳ ಹಿತ ಕಾಯಲು ಬದ್ಧವಾಗಿದೆ ಎಂದು ಪರ್ವೀಜ್ ಪಾಷಾ ಹೇಳಿದರು.
9ಕೆಆರ್ ಎಂಎನ್ 2,3.ಜೆಪಿಜಿ2.ರೇಷ್ಮೆ ನೂಲು ಬಿಚ್ಚುವವರ ಮತ್ತು ನೇಕಾರರ ಕೈಗಾರಿಕಾ ಸಹಕಾರ ಸಂಘದ ನೂತನ ಅಧ್ಯಕ್ಷ ಮಹಮ್ಮದ್ ಸಲಾವುದ್ದೀನ್ ಮತ್ತು ಉಪಾಧ್ಯಕ್ಷ ವಿ.ಶ್ರೀನಿವಾಸ್ ಅವರನ್ನು ರೀಲರ್ಸ್‌ಗಳು ಹಾಗೂ ಮುಖಂಡರು ಅಭಿನಂದಿಸಿದರು.
3. ಮಾಜಿ ಅಧ್ಯಕ್ಷ ಪರ್ವೀಜ್ ಪಾಷ.