ಮರುಮೌಲ್ಯಮಾಪನ: ಮೊರಾರ್ಜಿ ವಸತಿ ಶಾಲೆಗೆ ಅಕ್ಕಮಹಾದೇವಿ ಪ್ರಥಮ

| Published : Jun 06 2024, 12:34 AM IST

ಮರುಮೌಲ್ಯಮಾಪನ: ಮೊರಾರ್ಜಿ ವಸತಿ ಶಾಲೆಗೆ ಅಕ್ಕಮಹಾದೇವಿ ಪ್ರಥಮ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ: ಅಳಲಗೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಅಕ್ಕಮಹಾದೇವಿಗೆ ಮರು ಮೌಲ್ಯ ಮಾಪನದಲ್ಲಿ 3 ಅಂಕ ಹೆಚ್ಚಳವಾಗಿದೆ ಎಂದು ಪ್ರಾಂಶುಪಾಲರಾದ ಪೂರ್ಣಿಮಾ ತಿಳಿಸಿದ್ದಾರೆ.

ನರಸಿಂಹರಾಜಪುರ: ಅಳಲಗೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಅಕ್ಕಮಹಾದೇವಿಗೆ ಮರು ಮೌಲ್ಯ ಮಾಪನದಲ್ಲಿ 3 ಅಂಕ ಹೆಚ್ಚಳವಾಗಿದೆ ಎಂದು ಪ್ರಾಂಶುಪಾಲರಾದ ಪೂರ್ಣಿಮಾ ತಿಳಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದಾಗ ಅಕ್ಕಮಹಾದೇವಿಗೆ 625 ಕ್ಕೆ 599 ( ಶೇ 95.84) ಅಂಕ ಬಂದಿತ್ತು.

ಸಮಾಧಾನಗೊಳ್ಳದ ವಿದ್ಯಾರ್ಥಿನಿ ಅಕ್ಕಮಹಾದೇವಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಳು. ಆಗ 3 ಅಂಕ ಹೆಚ್ಚಳವಾಗಿದ್ದು ಅಕ್ಕಮಹಾದೇವಿಗೆ 625 ಕ್ಕೆ 602 ( ಶೇ 96.32) ಅಂಕ ಲಭಿಸಿದೆ. ಈ ಮೂಲಕ ಅಕ್ಕಮಹಾದೇವಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಸ್ಥಾನಗಳಿಸಿದ್ದಾಳೆ.