ಚನ್ನರಾಯಪಟ್ಟಣದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ರೈತ ಸಂಘದ ಮುಖಂಡರು, ಈ ಹಿಂದೆ ಸಚಿವ ಕೃಷ್ಣ ಬೈರೇಗೌಡ ಅವರು ಭೇಟಿ ನೀಡಿದ ಸಂದರ್ಭದಲ್ಲಿಯೂ ೫೦೦ರಿಂದ ೭೦೦ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ, ಅವುಗಳಲ್ಲಿನ ಬಹುತೇಕ ಸಮಸ್ಯೆಗಳು ಇಂದಿಗೂ ಪರಿಹಾರ ಕಂಡಿಲ್ಲ. ಇದೀಗ ೪೮೨ ಅರ್ಜಿಗಳು ಸಲ್ಲಿಕೆಯಾಗಿವೆ. ಸಂಜೆ ೪ಗಂಟೆ ಆದರೂ ನೂರು ಅರ್ಜಿಗಳು ವಿಲೇವಾರಿಯಾಗಿಲ್ಲ. ಹೀಗಿರುವಾಗ ಪದೇಪದೆ ಅರ್ಜಿ ಸ್ವೀಕರಿಸುವುದರಿಂದ ರೈತರಿಗೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಸರ್ಕಾರದ ಜನಸ್ಪಂದನ ಕಾರ್ಯಕ್ರಮಗಳು ಕೇವಲ ಅರ್ಜಿಗಳನ್ನು ಸ್ವೀಕರಿಸಿ, ಸಭೆ ನಡೆಸಿ ಮುಕ್ತಾಯಗೊಳಿಸುವ ಔಪಚಾರಿಕ ಪ್ರಕ್ರಿಯೆಯಾಗಬಾರದು. ಬದಲಾಗಿ, ದಶಕಗಳಿಂದ ಕಂದಾಯ ಇಲಾಖೆಯ ಕಚೇರಿಗಳಿಗೆ ಅಲೆದಾಡುತ್ತಿರುವ ರೈತರ ಬದುಕಿಗೆ ಆಶಾಕಿರಣವಾಗಿ, ಅವರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಆಡಳಿತಾತ್ಮಕ ಬದ್ಧತೆ ಪ್ರದರ್ಶಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಸರ್ಕಾರವನ್ನು ಆಗ್ರಹಿಸಿದೆ.ಚನ್ನರಾಯಪಟ್ಟಣದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ರೈತ ಸಂಘದ ಮುಖಂಡರು, ಈ ಹಿಂದೆ ಸಚಿವ ಕೃಷ್ಣ ಬೈರೇಗೌಡ ಅವರು ಭೇಟಿ ನೀಡಿದ ಸಂದರ್ಭದಲ್ಲಿಯೂ ೫೦೦ರಿಂದ ೭೦೦ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ, ಅವುಗಳಲ್ಲಿನ ಬಹುತೇಕ ಸಮಸ್ಯೆಗಳು ಇಂದಿಗೂ ಪರಿಹಾರ ಕಂಡಿಲ್ಲ. ಇದೀಗ ೪೮೨ ಅರ್ಜಿಗಳು ಸಲ್ಲಿಕೆಯಾಗಿವೆ. ಸಂಜೆ ೪ಗಂಟೆ ಆದರೂ ನೂರು ಅರ್ಜಿಗಳು ವಿಲೇವಾರಿಯಾಗಿಲ್ಲ. ಇನ್ನು ಸಾವಿರಾರು ರೈತರು ತಮ್ಮ ಸಮಸ್ಯೆಗಳನ್ನು ಮಂಡಿಸಲು ಅವಕಾಶವಿಲ್ಲದೆ ಉಳಿದಿದ್ದಾರೆ. ಹೀಗಿರುವಾಗ ಪದೇಪದೆ ಅರ್ಜಿ ಸ್ವೀಕರಿಸುವುದರಿಂದ ರೈತರಿಗೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.ಕಂದಾಯ ಇಲಾಖೆಯ ಜಡತ್ವಕ್ಕೆ ರೈತರು ಬಲಿಪಶು:ಭೂಮಿ ದುರಸ್ತಿ, ಪೋಡಿ, ಹಕ್ಕುಪತ್ರ ವಿತರಣೆ ಹಾಗೂ ಫಾರಂ ನಂ.೫೩ರಡಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಅಧಿಕಾರಶಾಹಿಯ ನಿರ್ಲಕ್ಷ್ಯ ಮತ್ತು ಆಡಳಿತಾತ್ಮಕ ಜಡತ್ವದಿಂದ ರೈತರು ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿದೆ. ಸಮಸ್ಯೆಗಳನ್ನು ಆಲಿಸುವುದ? ಸರ್ಕಾರದ ಕರ್ತವ್ಯವಲ್ಲ; ಅವುಗಳಿಗೆ ಪರಿಹಾರ ಒದಗಿಸುವ ಹೊಣೆಗಾರಿಕೆಯೂ ಸರ್ಕಾರಕ್ಕಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಸಿ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ತಹಶೀಲ್ದಾರ್ ನೇತೃತ್ವದಲ್ಲಿ ಬಾಕಿ ಅರ್ಜಿಗಳ ವಿಲೇವಾರಿಗೆ ಕಾಲಮಿತಿ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.ಸರ್ವೆಯರ್ಗಳ ಕೊರತೆ; ದುರಸ್ತಿ ಕಾರ್ಯಕ್ಕೆ ಹಿನ್ನಡೆತಾಲೂಕಿನಲ್ಲಿ ಭೂಮಿ ದುರಸ್ತಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯದಿರಲು ಸರ್ವೆಯರ್ಗಳ ತೀವ್ರ ಕೊರತೆಯೂ ಪ್ರಮುಖ ಕಾರಣವಾಗಿದೆ. ಬೆರಳೆಣಿಕೆಯ? ಸಿಬ್ಬಂದಿಯನ್ನು ನಿಯೋಜಿಸಿ ನೂರಾರು ಗ್ರಾಮಗಳ ಭೂ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ಅಗತ್ಯಕ್ಕೆ ತಕ್ಕಂತೆ ನೂರಾರು ಸರ್ವೆಯರ್ಗಳನ್ನು ನೇಮಿಸಿ, ದುರಸ್ತಿ ಕಾರ್ಯಕ್ಕೆ ವೇಗ ನೀಡಬೇಕು. ಇಲ್ಲವಾದರೆ ಸರ್ಕಾರದ ಘೋಷಣೆಗಳು ಘೋ?ಣೆಗಳಾಗಿಯೇ ಉಳಿಯಲಿವೆ ಎಂದರು.ಪೋಡಿ ಮುಕ್ತ ಗ್ರಾಮ ಘೋಷಣೆ ಅನುಷ್ಠಾನವಾಗಲಿಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಶೇ.೨೫ರಷ್ಟು ಭೂಮಿಯ ಪೋಡಿ ಮತ್ತು ದುರಸ್ತಿ ಪ್ರಕ್ರಿಯೆ ಬಾಕಿ ಉಳಿದಿದೆ. ಸರ್ಕಾರ ಘೋಷಿಸಿರುವ ಪೋಡಿ ಮುಕ್ತ ಗ್ರಾಮ ಪರಿಕಲ್ಪನೆ ಕೇವಲ ಪ್ರಚಾರಕ್ಕೆ ಸೀಮಿತವಾಗದೆ, ಪ್ರತಿಯೊಬ್ಬ ಅರ್ಹ ರೈತನಿಗೂ ಅದರ ಪ್ರಯೋಜನ ತಲುಪಬೇಕು. ಇದಕ್ಕಾಗಿ ಪೋಡಿ ಮತ್ತು ದುರಸ್ತಿಗೆ ಪ್ರತ್ಯೇಕ ಸಮಿತಿ, ಹಕ್ಕುಪತ್ರ ವಿತರಣೆಗೆ ಪ್ರತ್ಯೇಕ ಸಮಿತಿ ರಚಿಸಿ, ಅಧಿಕಾರಿಗಳನ್ನೊಳಗೊಂಡ ವ್ಯವಸ್ಥಿತ ಕಾರ್ಯಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.ನಿವೇಶನ ರಹಿತರಿಗೆ ಹಕ್ಕುಪತ್ರ ನೀಡಿ:ಗ್ರಾಮೀಣ ಭಾಗದ ನೂರಾರು ಗ್ರಾಮಗಳಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವವರಿಗೆ ಇಂದಿಗೂ ಹಕ್ಕುಪತ್ರ ದೊರೆತಿಲ್ಲ. ನಿವೇಶನ ರಹಿತರನ್ನು ಗುರುತಿಸಿ, ಲಭ್ಯವಿರುವ ಸರ್ಕಾರಿ ಜಮೀನುಗಳಲ್ಲಿ ನಿವೇಶನ ಹಂಚಿಕೆ ಮಾಡುವ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳು ನಿರ್ವಹಿಸಬೇಕು. ಜನರ ಭೂಮಿ ಮತ್ತು ವಸತಿ ಹಕ್ಕುಗಳನ್ನು ಕಲ್ಪಿಸುವಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸಬಾರದು ಎಂದು ಒತ್ತಾಯಿಸಿದರು.ಜನರ ಸಮಸ್ಯೆಗಳನ್ನು ಆಲಿಸಲು ಇಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಬಹುದು. ಆದರೆ, ಅರ್ಜಿಗಳನ್ನು ಸ್ವೀಕರಿಸಿ ಅಧಿಕಾರಿಗಳೊಂದಿಗೆ ಫೋಟೋ ತೆಗೆಸಿಕೊಂಡು ಕಾರ್ಯಕ್ರಮ ಮುಗಿಸುವುದರಿಂದ ರೈತರ ಸಂಕಷ್ಟ ದೂರವಾಗುವುದಿಲ್ಲ. ಅರ್ಜಿಗಳ ಸಂಖ್ಯೆ ಹೆಚ್ಚಿಸುವುದಲ್ಲ, ಸಮಸ್ಯೆಗಳನ್ನು ಬಗೆಹರಿಸಿದ ಪ್ರಕರಣಗಳ ಸಂಖ್ಯೆ ಹೆಚ್ಚಿಸುವುದೇ ಜನಪರ ಆಡಳಿತದ ಮಾನದಂಡವಾಗಬೇಕು. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಇಂತಹ ಜನಸ್ಪಂದನ ಕಾರ್ಯಕ್ರಮಗಳು ಅರ್ಥ ಕಳೆದುಕೊಳ್ಳಲಿವೆ ಎಂದು ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಪ್ರಜಾಸೇವಾ ಆಂದೋಲನದ ವಿರುದ್ಧ, ಕಬ್ಬು ಬೆಳೆಗಾರರ ಹಿತ ಕಾಯಲು ಸರ್ಕಾರ ಮುಂದಾಗಬೇಕು ಎಂದು ಬಿತ್ತಿ ಪತ್ರವನ್ನು ಹಿಡಿದು ರೈತ ಮುಖಂಡರು. ಪ್ರತಿಭಟನೆಯಲ್ಲಿ ಎಚ್ ಎಸ್ ಮಂಜುನಾಥ್, ಚಂದ್ರಹಾಸ, ತೇಜಸ್ ಗೌಡ ಗೋವಿನಕೆರೆ, ವಾಸುದೇವ ಕಲಕೆರೆ, ಎಂಆರ್ಪಿ ಚಂದ್ರು ಚನ್ನರಾಯಪಟ್ಟಣ, ಕುಮಾರ್ ಬಾಗೂರು, ಸುರೇಶ್ ಕಲ್ಕೆರೆ, ಸೋಮಶೇಖರ್ ರಾಘವೇಂದ್ರ ಪಟೇಲ್ ಮುಂತಾದವರು ಇದ್ದರು.
