ಸಾರಾಂಶ
ಮೂಡುಬಿದಿರೆ : ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸಮಾಜ ಮಂದಿರದಲ್ಲಿ ಶುಕ್ರವಾರ ನಡೆದ ವಿಶಿಷ್ಟ ಗುರುತಿನ ಚೀಟಿ ನೋಂದಣಿ ಹಾಗೂ ಎಂಡೋಸಲ್ಫಾನ್ ತಪಾಸಣಾ ಶಿಬಿರದಲ್ಲಿ ಸುಮಾರು ೧೩೦ ಮಂದಿ ಪ್ರಯೋಜನ ಪಡೆದುಕೊಂಡರು. ದ.ಕ ಜಿಲ್ಲಾಡಳಿತ, ಜಿ.ಪಂ ದ.ಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ, ಮೂಡುಬಿದಿರೆ ತಾಪಂ, ಮೂಡುಬಿದಿರೆ ಪುರಸಭೆ, ಸಮುದಾಯ ಆರೋಗ್ಯ ಕೇಂದ್ರ ಮೂಡಬಿದಿರೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ , ಮೂಡುಬಿದಿರೆ ಇನ್ನರ್‌ವೀಲ್ ಕ್ಲಬ್ ಜಂಟಿ ಸಹಭಾಗಿತ್ವದಲ್ಲಿ ಶಿಬಿರವನ್ನು ಆಯೋಜಿಸಲಾಯಿತು. ತಾಲೂಕು ಆರೋಗ್ಯ ಅಧಿಕಾರಿ ಸುಜಯ ಭಂಡಾರಿ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಪ್ರದೀಪ್, ಪುರಸಭೆ ಮುಖ್ಯಾಧಿಕಾರಿ ಇಂದು ಎಂ., ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ದಂತ ವೈದ್ಯಾಧಿಕಾರಿ ಡಾ.ಅಕ್ಷತಾ, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಶಾಂತಮ್ಮ, ಮಂಗಳೂರು ತಾಪಂ ಎಂಆರ್‌ಡಬ್ಲುö್ಯ ಜಯಪ್ರಕಾಶ್ ಕುಲಾಲ್ ಮೂಡುಬಿದಿರೆ ತಾಲೂಕಿನ ಯುಆರ್‌ಡಬ್ಲು ಹಾಗೂ ವಿಆರ್‌ಡಬ್ಲುಗಳು, ಮೂಡುಬಿದಿರೆ ಇನ್ನರ್‌ವೀಲ್ ಕ್ಲಬ್‌ನ ಅಧ್ಯಕ್ಷೆ ಸರಿತಾ ಅಶೀರ್ವಾದ, ನಿಯೋಜಿತ ಅಧ್ಯಕ್ಷೆ ಬಿಂದಿಯಾ ಶರತ್ ಶೆಟ್ಟಿ, ಪೂರ್ವ ಅಧ್ಯಕ್ಷೆ ಸರಿತಾ ಆಶೀರ್ವಾದ್, ಪದಾಧಿಕಾರಿಗಳು ಉಪಸ್ಥಿತರಿದ್ದರು.