ನಿತ್ಯ ಯೋಗದಿಂದ ಆರೋಗ್ಯ ಸದೃಢ: ರಾಜೇಶ್ವರಿ

| Published : Jun 23 2025, 12:33 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ನಿತ್ಯ ಯೋಗ ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆ. ಮಕ್ಕಳು ನಿತ್ಯ ಯೋಗಾಭ್ಯಾಸ ರೂಢಿಸಿಕೊಂಡರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಎಂದು ಯೋಗ ಶಿಕ್ಷಕಿ ಡಾ.ರಾಜೇಶ್ವರಿ ಗೂಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ನಿತ್ಯ ಯೋಗ ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆ. ಮಕ್ಕಳು ನಿತ್ಯ ಯೋಗಾಭ್ಯಾಸ ರೂಢಿಸಿಕೊಂಡರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಎಂದು ಯೋಗ ಶಿಕ್ಷಕಿ ಡಾ.ರಾಜೇಶ್ವರಿ ಗೂಳಿ ಹೇಳಿದರು.

ಪಟ್ಟಣದ ಬಸವ ವಿದ್ಯಾಪ್ರಸಾರಕ ಸಂಸ್ಥೆಯ ಪ್ರಾರ್ಥನಾ ವಿದ್ಯಾಮಂದಿರದಲ್ಲಿ ನಡೆದ ವಿಶ್ವಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚೆಗೆ ಪ್ರತಿಯೊಂದು ಕೆಲಸಗಳನ್ನು ಯಂತ್ರಗಳೇ ಮಾಡುತ್ತಿದ್ದು, ಮನುಷ್ಯ ಸೋಮಾರಿಯಾಗುತ್ತಿದ್ದಾನೆ. ಮಹಿಳೆಯರು ಮನೆಗೆಲಸಗಳನ್ನು ಸ್ವತಃ ಮಾಡಿದರೆ ಅದೂ ಯೋಗದ ಭಾಗವೇ ಆಗಿದೆ. ಇದರಿಂದ ಹಣವೂ ಉಳಿದು ಆರೋಗ್ಯ ಸುಧಾರಿಸುತ್ತದೆ ಎಂದರು.

ಸಂಸ್ಥೆಯ ಅಧ್ಯಕ್ಷ ಸುಧೀರ ನಾವದಗಿ, ಕಾರ್ಯದರ್ಶಿ ನಿಂಗಪ್ಪ ಚಟ್ಟೇರ, ಪ್ರಾಥಮಿಕ ವಿಭಾಗದ ಮುಖ್ಯಗುರು ವಿನೋದ ಪಟಗಾರ, ಪ್ರೌಢ ಶಾಲೆ ಮುಖ್ಯ ಗುರು ದಿವ್ಯಾ ಹೆಬ್ಬಾರ ಇದ್ದರು. ರಾಜು ಜೋಳದ, ಪ್ರಭುದೇವ ಕಲಬುರ್ಗಿ, ಮುತ್ತಣ್ಣ ಕಡಿ, ಪ್ರವೀಣ ನಾಗಠಾಣ, ಜಗದೀಶ ಕಂಠಿ, ಚಂದ್ರಶೇಖರ ಕಡಿ, ಮಹಾಬಲೇಶ್ವರ ಗಡೇದ ಇದ್ದರು. ಶಿಕ್ಷಕರಾದ ಪರಶುರಾಮ ರತ್ನಾಕರ, ರಾಜು ಜಾಧವ, ಫಕೀರಪ್ಪ ಬೀಜಗುಪ್ಪಿ, ಮುತ್ತಣ್ಣ ನೆರಬೆಂಚಿ, ರಾಮನಗೌಡ ಬಿರಾದಾರ, ಹಣಮಂತ ಜಯವಾಡಗಿ ಮತ್ತು ಶಿಕ್ಷಕಿಯರಾದ ಗೀತಾ ಉಗ್ಗನ್ನವರ, ತ್ರಿವೇಣಿ ರಾಠೋಡ, ಅಂಜನಾ ಬಸರಕೋಡ, ಶಾರದಾ ಗೌಡ, ಸಮರಿನ ದೇಸಾಯಿ, ಸುಗ್ಲಾ ಕಂಠಿ, ಸವಿತಾ ಹಿರೇಮಠ, ಭವಾನಿ ನಾಯ್ಕ, ರೇಷ್ಮಾ.ಎಚ್, ಲಾವಣ್ಯ ಶಿರೋದ್ಕರ, ಸೈದಾ ಫಾತಿಮಾ, ಸೌಜನ್ಯಾ ಬೂದಿಹಾಳ ಹಾಜರಿದ್ದರು.