ಸಾರಾಂಶ
ಹೊಯ್ಸಳ ಲಾಂಛನದ ಪುತ್ಥಳಿ ಸೂಕ್ತ ನಿರ್ವಹಣೆ ಇಲ್ಲದೆ ಧೂಳು ಹಿಡಿದು ಬಣ್ಣ ಮಾಸಿತ್ತು. ಇಲ್ಲಿಗೆ ಪುರಸಭೆ ಅಧ್ಯಕ್ಷ ಎ.ಆರ್. ಅಶೋಕ್ ಅವರು ಸ್ಥಳಕ್ಕೆ ಆಗಮಿಸಿ ಒಂದೇ ದಿನದಲ್ಲಿ ಹೊಯ್ಸಳ ಪುತ್ಥಳಿಗೆ ಕಾಯಕಲ್ಪ ನೀಡಿದ್ದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವಲ್ಪಮಟ್ಟಿನ ನಿರ್ವಹಣೆ ಕಡಿಮೆಯಾಗಿ ಬಣ್ಣ ಮಾಸುವ ಮೂಲಕ ಧೂಳು ಹಿಡಿದು ಅಸ್ವಚ್ಛತೆಯಾಗಿ ಕಾಣುತ್ತಿದೆ ಎಂದು ಸಾರ್ವಜನಿಕರು ಮಾಧ್ಯಮಗಳ ಮೂಲಕ ತಮ್ಮ ದೂರು ವ್ಯಕ್ತಪಡಿಸಿದ್ದರು. ಧೂಳು ಹಿಡಿದ ಹೊಯ್ಸಳರ ಲಾಂಛನ ಪುತ್ಥಳಿಗೆ ಪುರಸಭೆಯಿರದ ಕಾಯಕಲ್ಪ ನೀಡಲಾಗಿದೆ ಎಂದರು.
ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ಯಗಚಿ ಸೇತುವೆ ಪ್ರವೇಶ ದ್ವಾರದಲ್ಲಿರುವ ಹೊಯ್ಸಳ ಲಾಂಛನದ ಪುತ್ಥಳಿ ಸೂಕ್ತ ನಿರ್ವಹಣೆ ಇಲ್ಲದೆ ಧೂಳು ಹಿಡಿದು ಬಣ್ಣ ಮಾಸಿತ್ತು. ಇಲ್ಲಿಗೆ ಪುರಸಭೆ ಅಧ್ಯಕ್ಷ ಎ.ಆರ್. ಅಶೋಕ್ ಅವರು ಸ್ಥಳಕ್ಕೆ ಆಗಮಿಸಿ ಒಂದೇ ದಿನದಲ್ಲಿ ಹೊಯ್ಸಳ ಪುತ್ಥಳಿಗೆ ಕಾಯಕಲ್ಪ ನೀಡಿದ್ದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಪುರಸಭಾ ಅಧ್ಯಕ್ಷ ಎ.ಆರ್. ಅಶೋಕ್ ಮಾತನಾಡಿ, ಮಾಜಿ ಪುರಸಭಾ ಅಧ್ಯಕ್ಷ ವೆಂಕಟೇಶ್ ಅವರು ಹೊಯ್ಸಳ ಪುತ್ಥಳಿ ಸ್ಥಾಪನೆ ಮಾಡಿದ್ದರು. ಬಳಿಕ ಸ್ವಲ್ಪಮಟ್ಟಿನ ನಿರ್ವಹಣೆ ಕಡಿಮೆಯಾಗಿ ಬಣ್ಣ ಮಾಸುವ ಮೂಲಕ ಧೂಳು ಹಿಡಿದು ಅಸ್ವಚ್ಛತೆಯಾಗಿ ಕಾಣುತ್ತಿದೆ ಎಂದು ಸಾರ್ವಜನಿಕರು ಮಾಧ್ಯಮಗಳ ಮೂಲಕ ತಮ್ಮ ದೂರು ವ್ಯಕ್ತಪಡಿಸಿದ್ದರು. ಧೂಳು ಹಿಡಿದ ಹೊಯ್ಸಳರ ಲಾಂಛನ ಪುತ್ಥಳಿಗೆ ಪುರಸಭೆಯಿರದ ಕಾಯಕಲ್ಪ ನೀಡಲಾಗಿದೆ ಎಂದರು.
ನಮ್ಮ ಸಿಬ್ಬಂದಿ ಹೊಯ್ಸಳ ಪುತ್ಥಳಿಯನ್ನು ಸ್ವಚ್ಛಗೊಳಿಸಿ ಹೊಸದಾಗಿ ಬಣ್ಣವನ್ನು ಬಳಿದಿದ್ದಾರೆ. ಅಲ್ಲದೇ ಇಲ್ಲಿರುವ ಉದ್ಯಾನವನವನ್ನು ಕೂಡ ಸ್ವಚ್ಛಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಪಟ್ಟಣದ ಪ್ರಮುಖ ಪ್ರವೇಶ ದ್ವಾರವಾದಲ್ಲಿ 40 ಆಡಿ ಕನ್ನಡ ಬಾವುಟದ ಧ್ವಜಸ್ಥಂಭವನ್ನು ಸ್ಥಾಪನೆ ಮಾಡಲಾಗುತ್ತದೆ. ಈಗಾಗಲೇ ಧ್ವಜಸ್ತಂಭ ಸ್ಥಾಪನೆಗೆ ಟೆಂಡರ್ ಕೂಡ ಬೆಂಗಳೂರು ಮೂಲದವರಿಗೆ ಆಗಿದೆ. ಜಾತ್ರೆ ಕಳೆದ ನಂತರದಲ್ಲಿ ಕೆಲಸ ಆರಂಭಗೊಳ್ಳುತ್ತದೆ ಎಂದರು.ಈ ಸಂದರ್ಭದಲ್ಲಿ ಪುರಸಭೆ ಆರೋಗ್ಯಾಧಿಕಾರಿ ಲೋಹಿತ್ ಇದ್ದರು.