ಸಾರಾಂಶ
ನಗರದಲ್ಲಿ ನಡೆದ ‘ಪರಸ್ಪರ ಸಂಬಂಧಗಳ ಮೂಲಕವೇ ಸಂತೋಷವಾಗಿ ಇರುವುದು ಹೇಗೆ?’ ವಿಚಾರದ ಕುರಿತು ಉಪನ್ಯಾಸ ನೀಡಿದ ಲೇಖಕಿ, ಪ್ರಾಫಿಟ್ ಪ್ಲಸ್ ಪತ್ರಿಕೆಯ ಸಂಪಾದಕಿ ಸುಧಾ ಶರ್ಮಾ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬದಲಾದ ಇಂದಿನ ಸಮಾಜಿಕ ಪರಿಸ್ಥಿತಿ, ತಾಂತ್ರಿಕ ವ್ಯವಸ್ಥೆಯಲ್ಲಿ ಆರೋಗ್ಯ, ಅರ್ಥಿಕತೆ, ಸಂಬಂಧ ನಿಭಾಯಿಸುವುದು ಅವಶ್ಯ ಎಂದು ಲೇಖಕಿ, ಪ್ರಾಫಿಟ್ ಪ್ಲಸ್ ಪತ್ರಿಕೆಯ ಸಂಪಾದಕಿ ಸುಧಾ ಶರ್ಮಾ ಹೇಳಿದ್ದಾರೆ.ಅವರು ಈಚೆಗೆ ನಗರದಲ್ಲಿ ನಡೆದ ‘ಪರಸ್ಪರ ಸಂಬಂಧಗಳ ಮೂಲಕವೇ ಸಂತೋಷವಾಗಿ ಇರುವುದು ಹೇಗೆ?’ ವಿಚಾರದ ಕುರಿತು ಉಪನ್ಯಾಸ ನೀಡಿದರು.
ಪ್ರಸ್ತುತ ಆರೋಗ್ಯ, ಅರ್ಥಿಕತೆ, ಪರಸ್ಪರ ಸಂಬಂಧ ನಿರ್ವಹಣೆ ಜೀವನದ ಪ್ರಮುಖ ಸವಾಲು, ಸಮಸ್ಯೆಗಳಾಗಿವೆ. ಪ್ರತಿಯೊಬ್ಬರಿಗೂ ಪ್ರತಿದಿನ ಸುಮಾರು 16 ರಿಂದ 70 ಸಾವಿರದಷ್ಟು ಯೋಚನೆಗಳು ಬರುತ್ತವೆ. ನಮ್ಮ ಯೋಚನೆಗಳನ್ನು ನಿಯಂತ್ರಿಸಿ, ನಮ್ಮನ್ನು ನಾವು ಅರ್ಥೈಸಿಕೊಳ್ಳಬೇಕು. ಭಾವನೆ, ಯೋಚನೆ, ಆತಂಕ, ಬದಲಾವಣೆ, ವೈವಿಧ್ಯ ತೆ ಪ್ರತಿಯೊಬ್ಬರಲ್ಲೂ ಭಿನ್ನವಾಗಿದೆ. ಇದರ ನಡುವೆಯೂ ಸಂಬಂಧಗಳನ್ನು ಉತ್ತಮವಾಗಿಟ್ಟುಕೊಳ್ಳಬೇಕು ಎಂದರು.ಸನ್ಮಾನ ಸ್ವೀಕರಿಸಿ ಲೇಖಕಿ, ಡಾ.ಶಾಂತಾ ನಾಗರಾಜ ಅವರು ಮಾತನಾಡಿದರು.ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪುರಸ್ಕೃತೆ ಡಾ.ಶುಭಾ ವಿಷ್ಣು ಸಭಾಹಿತ ಅವರನ್ನು ಗೌರವಿಸಲಾಯಿತು. ಅಂಕಣಗಾರ್ತಿ ಮಾಲತಿ ಭಟ್, ಜೀವನ ಕೌಶಲ್ಯ ತರಬೇತುದಾರರಾದ ಸಿ.ಚಿತ್ರಾ, ಸುಮಾ ನಾಗೇಶ, ವೀಣಾ ಜೋಶಿ, ಪೂರ್ಣಿಮಾ ಪುರೋಹಿತ, ಪತ್ರಕರ್ತೆ ನಿಂಗಮ್ಮ ಇದ್ದರು.