ಹಣ, ಅಂತಸ್ತು ಪೈಪೋಟಿಗೆ ನಶಿಸುತ್ತಿರುವ ಬಾಂಧವ್ಯ: ಮಾದಾರ ಚನ್ನಯ್ಯ

| Published : Nov 05 2025, 02:00 AM IST

ಹಣ, ಅಂತಸ್ತು ಪೈಪೋಟಿಗೆ ನಶಿಸುತ್ತಿರುವ ಬಾಂಧವ್ಯ: ಮಾದಾರ ಚನ್ನಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಹಣ. ಆಂತಸ್ತುಗಳ ಪೈಪೋಟಿಗಳ ಭರಾಟೆಯಲ್ಲಿ ಬಾಂಧ್ಯವ್ಯ, ಸಾಮರಸ್ಯಗಳು ಸಮಾಜದಲ್ಲಿ ನಶಿಸಿಹೋಗುತ್ತಿವೆ ಎಂದು ಚಿತ್ರದುರ್ಗ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಹಣ. ಆಂತಸ್ತುಗಳ ಪೈಪೋಟಿಗಳ ಭರಾಟೆಯಲ್ಲಿ ಬಾಂಧ್ಯವ್ಯ, ಸಾಮರಸ್ಯಗಳು ಸಮಾಜದಲ್ಲಿ ನಶಿಸಿಹೋಗುತ್ತಿವೆ ಎಂದು ಚಿತ್ರದುರ್ಗ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಎಚ್.ಕಡದಕಟ್ಟೆ ಗ್ರಾಮದಲ್ಲಿ ಸೋಮವಾರ ಜೀರ್ಣೋದ್ಧಾರಗೊಂಡ ನೂತನ ಶ್ರೀ ಧರಿಲಿಂಗೇಶ್ವರ ದೇವಾಲಯ, ಪ್ರವೇಶೋತ್ಸವ, ನೂತನ ಶಿಲಾಮೂರ್ತಿ ಪ್ರತಿಷ್ಠಾಪನೆ. ಕಳಸಾರೋಹಣ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ಸಮಾಜದಲ್ಲಿ ಮತ್ತೊಬ್ಬರ ಧರ್ಮಗಳನ್ನು ಗೌರವಿಸಬೇಕು. ಇದರ ಜತೆಯಲ್ಲಿಯೇ ನಮ್ಮ ಧರ್ಮಯನ್ನು ಕೂಡ ಗಟ್ಟಿಯಾಗಿ ಉಳಿಸಿಕೊಂಡು ಹೋಗಬೇಕು, ಕ್ರಾಂತಿ ಯೋಗಿ ಬಸವಣ್ಣ ಹೇಳಿದ ರೀತಿಯಲ್ಲಿ ಮೊದಲು ಕಾಯಕ ಪ್ರಧಾನ ಸಮಾಜ ಹಾಗೂ ಸಮಸಮಾಜದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸ್ವಸ್ಥ ಸಮಾಜವನ್ನು ಕಾಣಬಹುದು ಎಂದು ಹೇಳಿದರು.

ಪ್ರಸ್ತುತ ದಿನಗಳಲ್ಲಿ ನಗರ ಜೀವನ, ಹೊರದೇಶಗಳ ಶಿಕ್ಷಣಗಳಿಗೆ ಮಾರುಹೋಗಿ, ಕುಟುಂಬ ವ್ಯಸ್ಥೆಯೇ ಬದಲಾಗಿದ್ದು, ಯಾವುದೇ ರೀತಿಯಲ್ಲಿ ಕಂಪ್ಯೂಟರ್‌ನಿಂದ ನಾವು ತಮ್ಮ ಹಸಿವನ್ನು ಇಂಗಿಸುವ ಅಕ್ಕಿ, ರಾಗಿ ಜೋಳ ಪಡೆಯಲಾಗುವುದಿಲ್ಲ ಇವುಗಳನ್ನು ನಾವು ನಂಬಿರುವ ಭೂಮಿ ತಾಯಿಯನ್ನು ಉಳಿಮೆ ಮಾಡಿ ಅದರಲ್ಲಿ ಕಾಯಕದ ಮೂಲಕ ಮಾತ್ರವೇ ಆಹಾರ ಧಾನ್ಯಗಳನ್ನು ಪಡೆಯಲು ಸಾಧ್ಯ ಎಂದರು.

ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ತಾಲೂಕಿನಲ್ಲಿಯೇ ಎಚ್.ಕಡದಕಟ್ಟೆ ಗ್ರಾಮದ ಹೆಚ್ಚು ವಿದ್ಯಾವಂತರು, ನೌಕರರಸ್ಥು ಹೊಂದಿರುವ ಉತ್ತಮ ಗ್ರಾಮದವಾಗಿದೆ ಹೊನ್ನಾಳಿ ನಗರ, ಪಟ್ಟಣ ಪಂಚಾಯಿತಿಯಾಗಿ ಇದೀಗ ಪುರಸಭೆಯಾಗಿದೆ ಮುಂದಿನ ದಿನಗಳಲ್ಲಿ ಹೆದ್ದಾರಿ ಪಕ್ಕದಲ್ಲಿಯೇ ಇರುವ ಎಚ್.ಕಡದಕಟ್ಟೆ, ಹರಳಹಳ್ಳಿ ಗ್ರಾಮಗಳನ್ನು ಸೇರಿಸಿಕೊಂಡರೆ ಹೊನ್ನಾಳಿ ಮುಂದೊಂದು ದಿನ ನಗರಸಭೆಯನ್ನಾಗಿ ಮಾಡಬಹುದಾಗಿದೆ ಎಂದರು. .

ಸಾಮಾನ್ಯವಾಗಿ ಎಲ್ಲಿ ಯಾವುದೇ ಗ್ರಾಮ, ಊರುಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದರೆ ಅಲ್ಲಿ ಪುರಷರಿಗಿಂತ ಮಹಿಳೆಯರೇ ಹೆಚ್ಚು ಭಾಗವಹಿಸಿರುತ್ತಾರೆ ಇದರಿಂದಾಗಿಯೇ ನಮ್ಮ ಸಮಾಜದಲ್ಲಿ, ಧರ್ಮ, ಶಾಂತಿ, ಸೌಹಾರ್ದತೆ ಸಮನ್ವಯತೆಗಳು ಉಳಿದುಕೊಂಡು ಬರುತ್ತಿವೆ ಎಂದು ಹೇಳಿದರು.

ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿಯವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ಚನ ನೀಡಿದರು.

ಮುಖಂಡ ಶಾಂತರಾಜ್ ಪಾಟೀಲ್ ಬಲಮುರಿ ಉಪನ್ಯಾಸ ನೀಡಿ, ಮನುಷ್ಯನಿಗೆ ಅನ್ನ, ಆಹಾರದಷ್ಟೇ ಬಹುಮುಖ್ಯವಾದದ್ದು ಧರ್ಮಾಚರಣೆಯಾಗಿದೆ ಎಂದರು .

ಮಾಜಿ ಶಾಸಕ ಡಾ. ಡಿ.ಬಿ.ಗಂಗಪ್ಪ ಮಾತನಾಡಿದರು, ಶ್ರೀ ಧರಿಲಿಗೇಶ್ವರ ಕಮಿಟಿ ಗೌರವಾಧ್ಯಕ್ಷ, ಬಿ.ಜಯದೇವಪ್ಪ, ಧರಿಲಿಂಗೇಶ್ವರ ಕಮಿಟಿ ಅಧ್ಯಕ್ಷ ಎಚ್.ಸಿದ್ದಪ್ಪ ಇದ್ದರು.

ಗಾಯಕ ತಿಮ್ಮಪ್ಪ ಕಡದಕಟ್ಟೆ ರಚಿಸಿದ ಧರಿಲಿಂಗೇಶ್ವರ, ಬಸವೇಶ್ವರರ ಧ್ವನಿಸುರಳಿ ಬಿಡುಗಡೆ ಮಾಡಲಾಯಿತು. ನಂತರ ದಾನಿಗಳು, ಗ್ರಾಮದ ಮುಖಂಡರನ್ನು ಸನ್ಮಾನಿಸಲಾಯಿತು.

ತಿಮ್ಮಪ್ಪ ಎಂ. ಸ್ವಾಗತಿಸಿದರು. ಸುರೇಶ್, ಬಸಪ್ಪ ನಿರೂಪಿಸಿದರು. ಗ್ರಾಪಂ ಮಾಜಿ ಸದಸ್ಯ ದಾನಪ್ಪ ವಂದಿಸಿದರು.