ರಾಜ್ಯ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡುವಲ್ಲಿ ಕೇಂದ್ರದ ಕಡೆ ಕೈ ಮಾಡದೆ ತಮ್ಮ ಅಧೀನದಲ್ಲಿ ಉಳಿದಿರುವ ಎಸ್‌ಡಿಆರ್‌ಎಫ್ ವಿಪತ್ತು ನಿಧಿಯಲ್ಲಿ ಸದ್ಯ ಬರ ಪರಿಹಾರ ಬಿಡುಗಡೆ ಮಾಡಬೇಕು.
ನರಗುಂದ: ರಾಜ್ಯದ ರೈತರು ತೀವ್ರ ಬರಗಾಲದಿಂದ ತೊಂದರೆಯಲ್ಲಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಎಸ್.ಡಿ.ಆರ್.ಎಫ್ ನಲ್ಲಿ ತನ್ನ ಪಾಲಿನ ಬರ ಪರಿಹಾರ ಬಿಡುಗಡೆ ಮಾಡಬೇಕೆಂದು ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ ಆಗ್ರಹಿಸದರು.
ಅವರು 3994ನೇ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿ ರಾಜ್ಯದ ರೈತರು ಮುಂಗಾರು ಹಂಗಾಮಿನ ಅಲ್ವಸ್ವಲ್ಪ ಮಳೆಗೆ ಸಾಲ ಮಾಡಿ ಬಿತ್ತನೆ ಮಾಡಿದ್ದರು, ಆದರೆ ಸಕಾಲಕ್ಕೆ ಮಳೆಯಾಗದೆ ಬಿತ್ತನೆ ಮಾಡಿದ ಎಲ್ಲಾ ಬೆಳೆಗಳು ತೇವಾಂಶ ಕೊರತೆಯಿಂದ ಒಣಗುತ್ತಿವೆ. ಆದ್ದರಿಂದ ರಾಜ್ಯ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡುವಲ್ಲಿ ಕೇಂದ್ರದ ಕಡೆ ಕೈ ಮಾಡದೆ ತಮ್ಮ ಅಧೀನದಲ್ಲಿ ಉಳಿದಿರುವ ಎಸ್‌ಡಿಆರ್‌ಎಫ್ ವಿಪತ್ತು ನಿಧಿಯಲ್ಲಿ ಸದ್ಯ ಬರ ಪರಿಹಾರ ಬಿಡುಗಡೆ ಮಾಡಬೇಕು. ಕೇಂದ್ರ ಸರ್ಕಾರ ಎನ್.ಡಿ.ಆರ್.ಎಫ್ ವಿಪತ್ತು ನಿಧಿಯಲ್ಲಿ ಪರಿಹಾರ ನೀಡಿದ ನಂತರ ಅದನ್ನು ಅನ್ನದಾತರಗೆ ಬಿಡುಗಡೆ ಮಾಡಿ ಕಷ್ಟದಲ್ಲಿರುವವರನ್ನು ಎತ್ತಿ ಹಿಡಿಯಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಪರಶುರಾಮ ಜಂಬಗಿ, ಎಸ್.ಬಿ. ಜೋಗಣ್ಣವರ, ಸಿ.ಎಸ್.ಪಾಟೀಲ, ರಾಘವೇಂದ್ರ ಗುಜಮಾಗಡಿ, ಸುಭಾಸ ಗಿರಿಯಣ್ಣವರ, ಹನಮಂತ ಸರನಾಯ್ಕರ, ಯಲ್ಲಪ್ಪ ಚಲವಣ್ಣವರ, ಫಕೀರಪ್ಪ ಅಣ್ಣಿಗೇರಿ, ಶಿವಪ್ಪ ಸಾತಣ್ಣವರ, ಅರ್ಜುನ ಮಾನೆ, ಚನ್ನಬಸಪ್ಪ ಆಯಿಟ್ಟಿ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ, ವಾಸು ಚವಾಣ, ವಿಜಯಕುಮಾರ ಹೂಗಾರ ಇದ್ದರು.