ಶ್ರಮಿಕ ಛಾಯಾಗ್ರಾಹಕರ ಸಂಘದ ಕ್ಯಾಲೆಂಡರ್‌ ಬಿಡುಗಡೆ

| Published : Jan 26 2024, 01:49 AM IST

ಸಾರಾಂಶ

ತಾಲೂಕು ಶ್ರಮಿಕ ಛಾಯಾಗ್ರಾಹಕರ ಸಂಘಕ್ಕೆ ಪುರಸಭೆ ಮಾಜಿ ಸದಸ್ಯ ದಿ.ಬಿ.ವೈ. ಬಾಬು ಸ್ಮರಣಾರ್ಥ ಪುರಸಭೆ ನೂತನ ಸದಸ್ಯೆ ಜ್ಯೋತಿಲಕ್ಷ್ಮಿ ಬಾಬು ಕೊಡುಗೆಯಾಗಿ ‌ನೀಡಿರುವ ಕ್ಯಾಲೆಂಡರ್ ಹಾಗೂ ಡೈರಿಯನ್ನು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕು ಶ್ರಮಿಕ ಛಾಯಾಗ್ರಾಹಕರ ಸಂಘಕ್ಕೆ ಪುರಸಭೆ ಮಾಜಿ ಸದಸ್ಯ ದಿ.ಬಿ.ವೈ. ಬಾಬು ಸ್ಮರಣಾರ್ಥ ಪುರಸಭೆ ನೂತನ ಸದಸ್ಯೆ ಜ್ಯೋತಿಲಕ್ಷ್ಮಿ ಬಾಬು ಕೊಡುಗೆಯಾಗಿ ‌ನೀಡಿರುವ ಕ್ಯಾಲೆಂಡರ್ ಹಾಗೂ ಡೈರಿಯನ್ನು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಬಿಡುಗಡೆಗೊಳಿಸಿದರು.

ಪಟ್ಟಣದ ನಿವಾಸದಲ್ಲಿ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಅವರನ್ನು ಪಾಂಡವಪುರ ತಾಲೂಕು ಶ್ರಮಿಕ ಛಾಯಾಗ್ರಾಹಕರ ಸಂಘದ ಗೌರವ ಅಧ್ಯಕ್ಷ ನರೇಂದ್ರಬಾಬು, ಅಧ್ಯಕ್ಷ ರಾಘವ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಅಭಿನಂದಿಸಿದರು.

ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಮಾತನಾಡಿ, ಶ್ರಮಿಕ ಛಾಯಾಗ್ರಾಹಕರ ಸಂಘದ ಛಾಯಾಗ್ರಾಹಕರು ತಮ್ಮ ವೃತ್ತಿಯ ಜೊತೆಗೆ ಸಮಾಜಮುಖಿ ಕೆಲಸ ಮಾಡುವ ಮೂಲಕ ಮಾದರಿ ಸಂಘವಾಗಿದೆ. ಇತ್ತೀಚೆಗೆ ನಿಧನರಾದ ಜೆಡಿಎಸ್ ಪಕ್ಷದ ದಿ.ಬಿ.ವೈ. ಬಾಬು ಸ್ನರಣಾರ್ಥ ವೈರಮುಡಿಗೌಡ ಕುಟುಂಬ ವರ್ಗದವರು ಶ್ರಮಿಕ ಛಾಯಾಗ್ರಾಹಕರ ಸಂಘಕ್ಕೆ ಡೈರಿ ಹಾಗೂ ಕ್ಯಾಲೆಂಡರ್ ಮಾಡಿಸಿಕೊಡುವ ಮೂಲಕ ಸಂಘದ ಚಟುವಟಿಕೆಗೆ ಉತ್ತೇಜನ ನೀಡಿದ್ದಾರೆ ಎಂದರು.

ಈ ವೇಳೆ ಪಾಂಡವಪುರ ತಾಲೂಕು ಛಾಯಾಗ್ರಾಹಕರ ಸಂಘದ ಗೌ. ಅಧ್ಯಕ್ಷ ನರೇಂದ್ರಬಾಬು, ಅಧ್ಯಕ್ಷ ಟಿ.ಪಿ. ರಾಘವ, ಉಪಾಧ್ಯಕ್ಷ ಆನಂದ, ಕಾರ್ಯದರ್ಶಿಯಾದ ರೋಹಿತ್, ಕೃಷ್ಣ, ಖಜಾಂಚಿ ಬೀರಶೆಟ್ಟಹಳ್ಳಿ ಮಧು, ಸಂಘಟನಾ ಕಾರ್ಯದರ್ಶಿ ಮಹೇಶ್, ಪದಾಧಿಕಾರಿಯಾದ ವಿಷಕಂಠ, ಅನಿಲ್, ಅಭಿಲಾಶ್, ಗಿರೀಶ, ಶಂಕರ, ಮಂಜುನಾಥ, ಸುಬ್ರಮಣ್ಯ, ರಾಜೇಶ್, ಶಂಭು, ಚಂದ್ರ, ನುಗ್ಗಹಳ್ಳಿ ಅಶೋಕ್, ನಾಗೇಶ್, ಯೋಗ, ರವೀಂದ್ರ ಸೇರಿದಂತೆ ಸಂಘದ ಛಾಯಾಗ್ರಾಹಕರಿದ್ದರು.