ಕಲಬುರಗಿ ಜಿಲ್ಲೆಯ ಜೇವರ್ಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೈತರ ಬೆಳೆ ರಕ್ಷಣೆ, ಜನರ ಕುಡಿಯುವ ನೀರು ಹಾಗೂ ಜಾನುವಾರುಗಳ ನೀರಿನ ಅಗತ್ಯ ಗಮನದಲ್ಲಿಟ್ಟುಕೊಂಡು ಜೇವರ್ಗಿ ಶಾಖಾ ಕಾಲುವೆ, ಇಂಡಿ ಹಾಗೂ ಮುಡಬೂಳ ಶಾಖಾ ಕಾಲುವೆಗಳಿಗೆ ಬೇಸಿಗೆ ಅಂತ್ಯದ ವರೆಗೂ 2 ಟಿಎಂಸಿಯಷ್ಟು ನೀರು ಹರಿಸುವಂತೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಕಲಬುರಗಿ ಕಲಬುರಗಿ ಜಿಲ್ಲೆಯ ಜೇವರ್ಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೈತರ ಬೆಳೆ ರಕ್ಷಣೆ, ಜನರ ಕುಡಿಯುವ ನೀರು ಹಾಗೂ ಜಾನುವಾರುಗಳ ನೀರಿನ ಅಗತ್ಯ ಗಮನದಲ್ಲಿಟ್ಟುಕೊಂಡು ಜೇವರ್ಗಿ ಶಾಖಾ ಕಾಲುವೆ, ಇಂಡಿ ಹಾಗೂ ಮುಡಬೂಳ ಶಾಖಾ ಕಾಲುವೆಗಳಿಗೆ ಬೇಸಿಗೆ ಅಂತ್ಯದ ವರೆಗೂ 2 ಟಿಎಂಸಿಯಷ್ಟು ನೀರು ಹರಿಸುವಂತೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದರು.ಗುರುವಾರ ಸಿಎಂ ಶಿವಕುಮಾರ್ ಅವರನ್ನು ಕಂಡು ಮನವಿ ಸಲ್ಲಿಸಿರುವ ಡಾ.ಅಜಯ್ ಧರ್ಮಸಿಂಗ್, ಜೇವರ್ಗಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಜೆಬಿಸಿ ಕಾಲುವೆಯ ಡಿಸ್ಟ್ರಿಬ್ಯೂಟರ್ ನಂ ಡಿ.9 ದಿಂದ ಡಿ. 18 ವರೆಗೆ ವಡಗೇರಾದಿಂದ ಸುಂಬಡದವರೆಗೆ 600 ಕ್ಯೂಸೆಕ್ ನೀರು ಬಿಡುತ್ತಿದ್ದು, ಟೇಲ್ಎಂಡ್ವರೆಗೆ ನೀರು ತಲುಪುತ್ತಿಲ್ಲವಾದ್ದರಿಂದ ಜೆಬಿಸಿಯ ವಡಗೇರಾದಿಂದ ಸುಂಬಡದವರೆಗೆ 880 ಕ್ಯೂಸೆಕ್ ನೀರು ಹರಿಸಿ ಟೇಲ್ಎಂಡ್ ರೈತರಿಗೂ ನೀರು ತಲುಪಿಸುವ ಅಗತ್ಯವನ್ನು ಒತ್ತಿ ಹೇಳಿದರು.ಡಿಸ್ಟ್ರಿಬ್ಯೂಟರ್ 18 ರಿಂದ 26ರ ವರೆಗೆ ಜೇವರ್ಗಿ ವ್ಯಾಪ್ತಿ ಬರುವ ಎಂ.ಬಿ.ಸಿ ಕಾಲುವೆಗೆ 450 ಕ್ಯೂಸೆಕ್ ಒಳ ಹರಿವು ಇರಬೇಕಾದ ಜಾಗದಲ್ಲಿ ಕೇವಲ 200 ಕ್ಯೂಸೆಕ್ ಒಳ ಹರಿವು ಇರುವುದರಿಂದ ಇಲ್ಲಿಯೂ ಟೇಲ್ಎಂಡ್ ನಲ್ಲಿರುವ ಮದರಿ, ಕಟ್ಟಿಸಂಗಾವಿ, ಗುಡೂರ್ ಎಸ್.ಎ., ರಾಜವಾಳ, ಬಿರಾಳ ಸೇರಿದಂತೆ ಇತರ ಗ್ರಾಮಗಳಿಗೆ ನೀರು ಬರುತ್ತಿಲ್ಲವೆಂದು ರೈತರ, ಜನ, ಜನುವಾರು ಬವಣೆ ಬಗ್ಗೆ ವಿವರಿಸಿ ಸಿಎಂ ಅವರ ಗಮನ ಸೆಳೆದಿದರು.ಅದೇ ರೀತಿಯಲ್ಲಿ ಇಂಡಿ ಶಾಖಾ ಕಾಲುವೆಯ ಸಂಪರ್ಕಿತ ಭೀಮಾ ನದಿಗೆ 34ನೇ ಮತ್ತು 50ನೇ ಕಿ.ಮೀ. ನೀರು ಬಿಟ್ಟರೆ ಬಳ್ಳುಂಡಗಿ ನಾಲಾದಿಂದ ಕಲ್ಲೂರು ಬ್ಯಾರೇಜಿಗೆ ನೀರು ಬಂದು ಸೇರುತ್ತದೆ. ಡಿಸ್ಟ್ರಿಬ್ಯೂಟರ್ 5 ದಿಂದ ಡಿಸ್ಟ್ರಿಬ್ಯೂಟರ್ 11 ರ ವರೆಗೆ ಜೇವರ್ಗಿ ಸರಹದ್ದು ಬರುತ್ತಿದ್ದು, ಟೇಲ್ಎಂಡ್ನಲ್ಲಿ ಬರುವ ಕಲ್ಲೂರು ಬಿ, ಕಲ್ಲೂರು ಕೆ, ಮಂದೆವಾಲ, ಬಳ್ಳುಂಡಗಿ, ನೆಲೋಗಿ ಸೇರಿದಂತೆ ಇತರೇ ಗ್ರಾಮಗಳಿಗೆ ನೀರು ತಲುಪ್ಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಮುಂಗಾರು ಬೆಳೆಗಳಾದ ತೊಗರಿ, ಹತ್ತಿ, ಮೆಣಸಿನ ಕಾಯಿ ಸೇರಿದಂತೆ ಇತರೇ ಬೆಳೆಗಾಗಿ ನ.30 ರವರೆಗೆ ನೀರು ಹರಿಸುವುದು ಹಾಗೂ ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕಿನ ಜನ-ಜಾನುವಾರು, ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರು ಅತ್ಯವಶ್ಯಕವಾಗಿರುವ ಹಿನ್ನೆಲೆಯಲ್ಲಿ ಬರುವ ಬೇಸಿಗೆ (ಮೇ-ಅಂತ್ಯದವರೆಗೆ) ಐಬಿಸಿ, ಜೆಬಿಸಿ ಹಾಗೂ ಎಂಬಿಸಿ ಕಾಲುವೆಗಳಿಗೆ 2 ಟಿಎಂಸಿ ನೀರು ಅವಶ್ಯಕತೆ ಇದೆ ಎಂದು ಸಚಿವ ಡಾ.ಅಜಯ್ ಸಿಂಗ್ ಹೇಳಿದರು, ಅರಳಗುಂಡಗಿ ಎಸ್ಕೇಪ್ ಮತ್ತು ಘತ್ತರಗಿ ಎಸ್ಕೇಪ್ ಕಿ.ಮೀ. ನಂ. 34ನೇ ಮತ್ತು 50ನೇ ಕಿ.ಮೀ. ನೀರು ಬಿಟ್ಟರೆ, ನಾಗರಿಕರಿಗೆ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಅತಿ ಅವಶ್ಯಕತೆ ಇರುವುದರಿಂದ ರೈತರಿಗೆ ಮತ್ತು ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಮತ್ತು ಜಾನುವಾರುಗಳಿಗೆ ನ.30ರ ವರೆಗೆ ನೀರು ಬಿಡುಗಡೆ ಮಾಡಿ ಅನುಕೂಲ ಮಾಡಿಕೊಡಬೇಕು. ಈ ಸಂಬಂಧ ಅಗತ್ಯ ತಾಂತ್ರಿಕ ಪರಿಶೀಲನೆ ನಡೆಸಿ, ಜೇವರ್ಗಿ ಭಾಗದ ರೈತರು ಹಾಗೂ ಸಾರ್ವಜನಿಕರಿಗೆ ತಕ್ಷಣ ಅನುಕೂಲವಾಗುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಸಚಿವ ಡಾ.ಅಜಯ್ ಧರ್ಮಸಿಂಗ್ ಮುಖ್ಯಂತ್ರಿ ಬಳಿ ಒತ್ತಾಯಿಸಿದರು.ಶಹಾಪುರ ಶಾಸಕರಾದ ಶರಣಬಸಪ್ಪ ದರ್ಶನಾಪುರ ಹಾಗೂ ಸುರಪುರದ ಶಾಸಕ ವೇಣುಗೋಪಾಲ್ ಅವರು ಉಪಸ್ಥಿತರಿದ್ದರು.ಟೇಲ್ ಎಂಡ್ ರೈತರಿಗೆ ನೀರು ತಲುಪದಿದ್ದರೆ ಕಾಲುವೆಯಲ್ಲಿ ನೀರು ಹರಿಸಿದ ಉದ್ದೇಶವೇ ಈಡೇರುವುದಿಲ್ಲ. ಈಗ ಬೆಳೆ ರಕ್ಷಣೆ ಮಾತ್ರವಲ್ಲ, ಜನರು ಮತ್ತು ಜಾನುವಾರುಗಳ ಕುಡಿಯುವ ನೀರಿನ ಅಗತ್ಯವೂ ಅತ್ಯಂತ ಮುಖ್ಯ. ಆದ್ದರಿಂದ ಅಗತ್ಯ ಪ್ರಮಾಣದಲ್ಲಿ ನೀರು ಹರಿಸಿ, ನ.30ರವರೆಗೆ ರೈತರಿಗೆ ಅನುಕೂಲ ಕಲ್ಪಿಸಬೇಕು. ಮೇ ಅಂತ್ಯದವರೆಗೂ ಕಾಲುವೆಗಳಲ್ಲಿ 2 ಟಿಎಂಸಿ ನೀರು ಹರಿಯುವಂತೆ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಸಚಿವ ಡಾ.ಅಜಯ್ ಸಿಂಗ್ ಹೇಳಿದರು.