ಸಾರಾಂಶ
ಯಲ್ಲಾಪುರ: ಧ್ಯಾನ ಮತ್ತು ಯೋಗದಿಂದ ಮಾನಸಿಕ ಒತ್ತಡ ಸೇರಿ ಹಲವು ರೀತಿಯ ಕಾಯಿಲೆ, ಸಮಸ್ಯೆಗಳಿಗೆ ಪರಿಹಾರ ಕಂಡಕೊಳ್ಳಬಹುದು. ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಯೋಗ, ಧ್ಯಾನ ಅಳವಡಿಸಿಕೊಳ್ಳಬೇಕು. ಅಂದಾಗ ನೆಮ್ಮದಿಯ ಬದುಕು ಸಾಧ್ಯ ಎಂದು ಯೋಗ ಶಿಕ್ಷಕ ನಾರಾಯಣ ಸಭಾಹಿತ ತಿಳಿಸಿದರು.
ಶನಿವಾರ ಪಟ್ಟಣದ ಅಡಕೆ ಭವನದಲ್ಲಿ ವಿಶ್ವ ಧ್ಯಾನ ದಿನದ ಅಂಗವಾಗಿ ಹಮ್ಮಿಕೊಂಡ ವಿಶೇಷ ಧ್ಯಾನ ಕಾರ್ಯಕ್ರಮದಲ್ಲಿ ವಕ್ತಾರರಾಗಿ ಮಾತನಾಡಿದರು.ನಮಗೆ ಸದಾ ಉದ್ಯೋಗ, ವ್ಯವಹಾರ, ಬದುಕಿನ ಜಂಜಾಟದಲ್ಲಿ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಅತಿಯಾದ ಒತ್ತಡ, ಭಾವೋದ್ವೇಗದಿಂದಾಗಿ ನೆಮ್ಮದಿ, ಶಾಂತಿ ಅಸಾಧ್ಯವಾಗುತ್ತಿದೆ. ಇವುಗಳ ಪರಿಹಾರಕ್ಕಾಗಿ ಕನಿಷ್ಠ ೧೦ ನಿಮಿಷ ಪ್ರಸನ್ನ ಚಿತ್ತದಿಂದ ಧ್ಯಾನ ಮಾಡಿದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಜತೆಗೆ ನಮ್ಮ ಸ್ನೇಹಿತರ, ನೆರೆಹೊರೆಯ ಬಂಧುಗಳಿಗೆ ಈ ಕುರಿತು ಜಾಗೃತಿ ಮೂಡಿಸುವ ಜತೆಗೆ ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ನಾವೆಲ್ಲರೂ ಶ್ರಮ ವಹಿಸೋಣ ಎಂದರು.
ಹಿರಿಯ ಯೋಗ ಸಾಧಕ ಶಂಕರ ಭಟ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪತಂಜಲಿ ಯೋಗ ಸಮಿತಿ ಅಧ್ಯಕ್ಷ, ಅಡಕೆ ವ್ಯವಹಾರಸ್ತರ ಸಂಘದ ಅಧ್ಯಕ್ಷ ಆರ್.ವಿ. ಹೆಗಡೆ, ಯಲ್ಲಾಪುರ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ, ಯೋಗ ಶಿಕ್ಷಕ ಕನಕಪ್ಪ, ಮಹಿಳಾ ಪ್ರಭಾರಿ ಶೈಲಶ್ರೀ ಭಟ್ಟ ಉಪಸ್ಥಿತರಿದ್ದರು. ಯೋಗ ಶಿಕ್ಷಕ ಸುಬ್ರಾಯ ಭಟ್ಟ ಆನೇಜಡ್ಡಿ ನಿರ್ವಹಿಸಿದರು. ನ್ಯಾಯವಾದಿ ಜಿ.ಎಸ್. ಭಟ್ಟ ಹಳವಳ್ಳಿ ವಂದಿಸಿದರು. ಚವಡಳ್ಳಿ ಗ್ರಾಪಂ ಅಧ್ಯಕ್ಷರಾಗಿ ಬಶಿರಾಬಿ ಆಯ್ಕೆಮುಂಡಗೋಡ: ತಾಲೂಕಿನ ಚವಡಳ್ಳಿ ಗ್ರಾಪಂ ಅಧ್ಯಕ್ಷರಾಗಿ ಬಶಿರಾಬಿ ಮೌಲಾಸಾಬ ನದಾಫ್ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.ಈ ಹಿಂದೆ ಕೂಡ ಅಧ್ಯಕ್ಷರಾಗಿದ್ದ ಬಶಿರಾಬಿ ಅವರು ಇತ್ತೀಚೆಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಹಿನ್ನೆಲೆ ಅಧ್ಯಕ್ಷ ಸ್ಥಾನ ಆಯ್ಕೆ ಚುನಾವಣೆಗೆ ಶುಕ್ರವಾರ ದಿನಾಂಕ ನಿಗದಿಪಡಿಸಲಾಗಿತ್ತು.
ಅಧ್ಯಕ್ಷರ ಆಯ್ಕೆ ಬಹುತೇಕ ಅವಿರೋಧವಾಗಲಿದೆ ಎಂದು ಭಾವಿಸಲಾಗಿತ್ತು. ಇದೇ ನಿರೀಕ್ಷೆಯಲ್ಲಿ ಬಾಗುಬಾಯಿ ಗಾವಡೆ ಎಂಬವರು ನಾಮಪತ್ರ ಸಲ್ಲಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಅಚ್ಚರಿಯಂತೆ ಬಶಿರಾಬಿ ಮೌಲಾಸಾಬ ನದಾಫ್ ಅವರು ಕೂಡ ಮತ್ತೆ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಬಶಿರಾಬಿ ಅವರು ೮ ಮತ ಪಡೆದು ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಯಾದರೆ, ಎದುರಾಳಿ ಬಾಗುಬಾಯಿ ೫ ಮತಗಳನ್ನು ಪಡೆದು ಸೋತರು.ವಿಜಯೋತ್ಸವ:ಬಶಿರಾಬಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಅವರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಯಾಕೂಬಸಾಬ ಯಲಿವಾಳ, ನಾರಾಯಣ ಮಾನಪ್ಪನವರ, ಅರ್ಜುನ ಜೋತೆಪ್ಪನವರ, ನಿಂಗಜ್ಜ ಕೋಣನಕೇರಿ, ಪೀರಣ್ಣ ನ್ಯಾಸರ್ಗಿ, ದಾವಲಸಾಬ ಅಗಡಿ, ಮಂಜಣ್ಣ ಚಿಕ್ಕಣಗಿ, ಲೋಕಪ್ಪ ಕೋಣನಕೇರಿ, ಮುದಕಪ್ಪ ಮಾನೆ, ಫಕ್ಕೀರಪ್ಪ ಕೋಣನಕೇರಿ, ನಿಂಗಪ್ಪ ಭದ್ರಾಪುರ, ನಾರಾಯಣ ಕಮ್ಮಾರ ಮುಂತಾದವರು ಉಪಸ್ಥಿತರಿದ್ದರು.