ಶೃಂಗೇರಿಸನಾತನ ಧರ್ಮ, ಸಂಸ್ಕೃತಿ, ಪರಂಪರೆಗಳು ಉತ್ಕೃಷ್ಟವಾದುದು.ಇದು ಕೇವಲ ಯಾರೊಬ್ಬರ ಕಲ್ಪನೆಯಲ್ಲ. ಪಾರಂಪರಿಕವಾಗಿ ಬಂದಂತಹ ಅನನ್ಯ ಮೌಲ್ಯಗಳಾಗಿವೆ ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಹೇಳಿದರು.
- .ಬೆಳಂದೂರು ಮಹಾಗಣಪತಿ ದೇಗುಲ ಕುಂಬಾಭಿಷೇಕದಲ್ಲಿ ಜಗದ್ಗುರು ವಿಧುಶೇಖರ ಭಾರತೀ ಶ್ರೀ
ಕನ್ನಡಪ್ರಭ ವಾರ್ತೆ ಶೃಂಗೇರಿಸನಾತನ ಧರ್ಮ, ಸಂಸ್ಕೃತಿ, ಪರಂಪರೆಗಳು ಉತ್ಕೃಷ್ಟವಾದುದು.ಇದು ಕೇವಲ ಯಾರೊಬ್ಬರ ಕಲ್ಪನೆಯಲ್ಲ. ಪಾರಂಪರಿಕವಾಗಿ ಬಂದಂತಹ ಅನನ್ಯ ಮೌಲ್ಯಗಳಾಗಿವೆ ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಹೇಳಿದರು.
ಅಡ್ಡಗದ್ದೆ ಪಂಚಾಯಿತಿ ನೇತ್ರವಳ್ಳಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠೆ ಹಾಗೂ ಕುಂಬಾಭಿ ಷೇಕೋತ್ಸವದಲ್ಲಿ ಆಶೀರ್ವಚನ ನೀಡಿದರು. ಯಾವ ರೂಪದಲ್ಲಾದರೂ ಪರಮಾತ್ಮನ ಆರಾಧಿಸಿದರೆ ಸಿಗುವ ಫಲ ಒಂದೇ ಆಗಿದೆ. ಬಂಗಾರದ ಅಥವಾ ಕಬ್ಬಿಣದ ಸರಪಳಿಗಳಿಂದ ಕಟ್ಟಿ ಹಾಕಿದರೂ ಬಂಧನವೇ ಆಗುತ್ತದೆ. ಆಧುನಿಕ ವ್ಯವಸ್ಥೆ ಇದ್ದರೂ ದುಖ ಕಡಿಮೆ ಯಾಗುವುದಿಲ್ಲ. ಧರ್ಮ ಎಂಬುದು ಕಲ್ಪನೆಯಲ್ಲ. ವಾಸ್ತವಿಕ ವಿಚಾರ. ಅದು ಎಂದಿಗೂ ಬದಲಾಗುವುದಿಲ್ಲ ಎಂದರು.ಧರ್ಮಾಚರಣೆ ಪ್ರತಿಯೊಬ್ಬರ ಶ್ರೇಯಸ್ಸಿಗೂ ಕಾರಣ. ಹಾಗೆಯೇ ಸನಾತನ ಧರ್ಮ ವಾಸ್ತವಿಕ ವಿಚಾರ. ಪ್ರಪಂಚಕ್ಕೆ ಆಧಾರವಾಗಿರುವುದು ನಮ್ಮ ಶ್ರೇಷ್ಠ ಧರ್ಮ. ಸನಾತನ ಧರ್ಮದಿಂದ ನಮಗೆ ಶ್ರೇಯಸ್ಸು ಸಿಗುತ್ತದೆ. ಲೋಕದಲ್ಲಿ ಜೀವನಕ್ಕೆ ಉದ್ಯೋಗ. ಮಕ್ಕಳಿಗೆ ಪಾಲಕರು, ಪಾಲಕರಿಗೆ ಮಕ್ಕಳು ಆಧಾರ. ಎಲ್ಲರಿಗೂ ಬೇಕಾಗಿರುವುದು ಶ್ರೇಯಸ್ಸು. ಅದು ಧರ್ಮ ದಿಂದ ಮಾತ್ರ ಸಿಗುತ್ತದೆ ಎಂದು ಹೇಳಿದರು.
ಲೋಕದಲ್ಲಿ ಹಲವಾರು ಮತ, ಪಂಥಗಳಿವೆ. ಧರ್ಮಕ್ಕೂ,ಮತಕ್ಕೂ ವ್ಯತ್ಯಾಸವಿದೆ. ಯಾರು ಬೇಕಾದರೂ ಹೊಸ ಮತ ಹುಟ್ಟುಹಾಕಬಹುದು. ಆದರೆ ಧರ್ಮ ಎಂಬುದು ವಸ್ತುನಿಷ್ಠ ಮೌಲ್ಯ. ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ಮುನ್ನಡೆದರೆ ಮಾತ್ರ ಜೀವನದಲ್ಲಿ ಸಂತೃಪ್ತಿ, ಉನ್ನತಿ ಸಿಗುತ್ತದೆ ಎಂದರು.ಇದಕ್ಕೂ ಮೊದಲು ಬೆಳಿಗ್ಗೆಯಿಂದ ವಿಶೇಷ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಚಂಡಿಕಾ ಹೋಮದ ಪೂರ್ಣಾಹುತಿಯಲ್ಲಿ ಜಗದ್ಗುರು ಪಾಲ್ಗೊಂಡರು. ಶ್ರೀಮಠದ ಆಡಳಿತಾಧಿಕಾರಿ ಪಿ.ಎ.ಮುರುಳಿ, ದೇವಸ್ಥಾನ ಸಮಿತಿ ಪದಾಧಿ ಕಾರಿಗಳು, ಆರ್ಚಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
9 ಶ್ರೀ ಚಿತ್ರ 1-ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಬೆಳಂದೂರು ಶ್ರೀ ಮಹಾಗಣಪತಿ ದೇವಸ್ಥಾನ ಪುನರ್ ಪ್ರತಿಷ್ಠೆ, ಕುಂಬಾಭಿಷೇಕೋತ್ಸವ ನೆರವೇರಿಸಿದರು.