ಧರ್ಮ ಎಂದರೆ ಮತ್ತೊಬ್ಬರನ್ನು ಪ್ರೀತಿಯಿಂದ ಕಾಣುವುದು-ಬೂದೀಶ್ವರ ಸ್ವಾಮೀಜಿ

| Published : May 04 2025, 01:33 AM IST

ಧರ್ಮ ಎಂದರೆ ಮತ್ತೊಬ್ಬರನ್ನು ಪ್ರೀತಿಯಿಂದ ಕಾಣುವುದು-ಬೂದೀಶ್ವರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮ ಎಂದರೆ ಮತ್ತೊಬ್ಬರನ್ನು ಪ್ರೀತಿಯಿಂದ ಕಾಣುವುದು ಎಂದು ಹೊಸಹಳ್ಳಿ ಬೂದೀಶ್ವರ ಸಂಸ್ಥಾನಮಠದ ಅಭಿನವ ಬೂದೀಶ್ವರ ಸ್ವಾಮೀಜಿ ಹೇಳಿದರು.

ಗದಗ:ಧರ್ಮ ಎಂದರೆ ಮತ್ತೊಬ್ಬರನ್ನು ಪ್ರೀತಿಯಿಂದ ಕಾಣುವುದು ಎಂದು ಹೊಸಹಳ್ಳಿ ಬೂದೀಶ್ವರ ಸಂಸ್ಥಾನಮಠದ ಅಭಿನವ ಬೂದೀಶ್ವರ ಸ್ವಾಮೀಜಿ ಹೇಳಿದರು.

ಅವರು ಗದಗ ನಗರದ ಸ್ಥಳೀಯ ಗಂಜೀ ಬಸವೇಶ್ವರ ದೇವಸ್ಥಾನದ 63ನೇ ವರ್ಷ ಜಾತ್ರೋತ್ಸವದ 2ನೇ ದಿನದ ಉಪನ್ಯಾಸ ಹಾಗೂ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳ ಸಾನಿಧ್ಯ ವಹಿಸಿ ಮಾತನಾಡಿದರು.

ಆದರೆ ಧರ್ಮದ ಬಗ್ಗೆ ಇವತ್ತಿನ ಸ್ಥಿತಿ ಏನಾಗಿದೆ ಎಂದರೆ, ಬೇವಿನ ಬೀಜವನ್ನು ಬಿತ್ತಿ, ಬೆಲ್ಲವನ್ನು ಬೇಡಿದಂತೆ ಆಗಿದೆ. ಒಬ್ಬರ ಮನವ ನೋಯಿಸಿ ಬದುಕುವುದು ಅದೊಂದು ಬದುಕೇ, ಹಾಗಾಗಿ ಭಕ್ತರು ನಿಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕೊಡಿ, ಮತ್ತೊಬ್ಬರನ್ನು ತನ್ನಂತೆ ಪ್ರೀತಿಯಿಂದ ನೋಡಲು ಕಲಿಸಿರಿ ಎಂದರು.

ರೈತರೇ ಹೆಚ್ಚಾಗಿರುವ ಈ ಓಣಿಯಲ್ಲಿ ಕೃಷಿಯನ್ನು ಮತ್ತು ಅದರ ನವೀನ ಕೌಶಲ್ಯಗಳನ್ನು ಅಳವಡಿಸಿಕೊಳ್ಳಿರಿ, ಎತ್ತುಗಳು ಮತ್ತು ಹೈನುಗಾರಿಕೆ ಮಾಯವಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಅದನ್ನು ನಿಮ್ಮ ಓಣಿಯಲ್ಲಿ ಕಣ್ತುಂಬ ನೋಡುವಂತೆ ಇದ್ದಿರುವಿರಿ, ಈ ದಿಶೆಯಲ್ಲಿ ನಗರದಲ್ಲಿ ನಿಮ್ಮ ಓಣಿ ಕೃಷಿಗೆ ಮತ್ತು ಇಂತಹ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೀಗೆಯೇ ಎಲ್ಲರಿಗೂ ಮುಂದೆಯೂ ಮಾದರಿಯಾಗಿ ಸಾಗಲಿ ಎಂದರು.

ನಿಂಗಪ್ಪ ಕೊಟ್ರಪ್ಪ ಪಡಗದ ಅಧ್ಯಕ್ಷತೆ ವಹಿಸಿದರು. ಅತಿಥಿಗಳಾಗಿ ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ ರಾಜು ಕುರುಡಗಿ, ಜಿಲ್ಲಾ ಮಾಜಿ ಅಧ್ಯಕ್ಷ ಎಂ.ಎಸ್. ಕರಿಗೌಡರ, ಜಾತ್ರಾ ಮಹೋತ್ಸವದ ಅಧ್ಯಕ್ಷ ಪ್ರಶಾಂತ ಶಾಬಾದಿಮಠ, ಈರಣ್ಣ ಕರಬಿಷ್ಟಿ, ಗುರುಶಾಂತಗೌಡ ಮರಿಗೌಡ್ರು, ಬಸವರಾಜ ಗುಡಿಮನಿ, ಸುರೇಶ ಮರಳಪ್ಪನವರ, ರಮೇಶ ಸಂಕಣ್ಣವರ, ಸೋಮಣ್ಣ ಪುರದ, ರಮೇಶ ಕುರ್ತಕೋಟಿ, ಶಂಕರ ಕರಬಿಷ್ಟಿ, ಮಂಜು ಲಕ್ಕುಂಡಿ ಮುಂತಾದವರು ಉಪಸ್ಥಿತರಿದ್ದರು.