ಧಾರ್ಮಿಕ ಆಚರಣೆಯಿಂದ ಧರ್ಮ ಸಹಿಷ್ಣುತೆ ಮೋಕ್ಷ ಪ್ರಾಪ್ತಿ

| Published : May 21 2024, 12:30 AM IST / Updated: May 21 2024, 12:31 AM IST

ಧಾರ್ಮಿಕ ಆಚರಣೆಯಿಂದ ಧರ್ಮ ಸಹಿಷ್ಣುತೆ ಮೋಕ್ಷ ಪ್ರಾಪ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಕೆರೆ ಒತ್ತುವರಿ ನಡೆಯುತ್ತಿರುವ ಇಂದಿನ ದಿನಮಾನಗಳಲ್ಲಿ ಅಮೂಲ್ಯ ಭೂಮಿಯನ್ನು ದೇವಸ್ಥಾನಕ್ಕೆ ಮೀಸಲಿಟ್ಟು ಗ್ರಾಮಸ್ಥರು ಮಾದರಿಯಾಗಿದ್ದಾರೆ.

ಹರಪನಹಳ್ಳಿ: ಧಾರ್ಮಿಕ ಆಚರಣೆಗಳಿಂದ ಉತ್ತಮ ಸಂಸ್ಕಾರ, ಧರ್ಮ ಸಹಿಷ್ಣುತೆ, ಶಾಂತಿ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಅವರು ತಾಲೂಕಿನ ಕಂಚಿಕೆರೆ ಗ್ರಾಮದಲ್ಲಿ ವೀರಭದ್ರೇಶ್ವರ ದೇವಸ್ಥಾನವನ್ನು ಉದ್ಘಾಟನೆ ಮಾಡಿ ಮೂರ್ತಿಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಧಾರ್ಮಿಕ ಆಚರಣೆಗಳಲ್ಲಿ ರಾಜಕೀಯ ಸಲ್ಲದು, ಗ್ರಾಮದ ಸಮುದಾಯಗಳ ಸಹಭಾಗಿತ್ವದಲ್ಲಿ ಹಬ್ಬ, ಉತ್ಸವ ನಡೆದರೆ ಮೆರಗು ಹೆಚ್ಚಾಗಲಿದೆ ಎಂದರು.

ಕೆರೆ ಒತ್ತುವರಿ ನಡೆಯುತ್ತಿರುವ ಇಂದಿನ ದಿನಮಾನಗಳಲ್ಲಿ ಅಮೂಲ್ಯ ಭೂಮಿಯನ್ನು ದೇವಸ್ಥಾನಕ್ಕೆ ಮೀಸಲಿಟ್ಟು ಗ್ರಾಮಸ್ಥರು ಮಾದರಿಯಾಗಿದ್ದಾರೆ. ದೇವಸ್ಥಾನ ಪವಿತ್ರ ಕ್ಷೇತ್ರವಾಗಲು ಪರಸ್ಪರ ಸಹಕಾರ ನೀಡಬೇಕು ಎಂದರು.

ಮುಖಂಡ ಬಿದ್ರಿ ಕೊಟ್ರೇಶ್ ಮಾತನಾಡಿ, ಸಮಾಜದ ಏಳಿಗೆಗೆ ಗುರುಗಳ ಕೃಪಾಶೀರ್ವಾದ ಮುಖ್ಯ. ಈ ದಿಸೆಯಲ್ಲಿ ಸಾಗಿದ ದೇವಸ್ಥಾನ ಅಭಿವೃದ್ಧಿ ಕಾಮಗಾರಿ ಯಶಸ್ಸು ಪಡೆದುಕೊಂಡಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಜಿ ಎಂ ತಿಪ್ಪೇಸ್ವಾಮಿ, ಜಿಎಂ ಸಿದ್ದಲಿಂಗಯ್ಯ ಸ್ವಾಮಿ, ಕೆಂಚನಗೌಡ್ರು, ಶಾನುಭೋಗರ ಕೆಂಚಪ್ಪ, ಕೆ.ಎಸ್. ಜಾತಪ್ಪ, ಕಲ್ಲಳ್ಳಿ ಸಿದ್ದವೀರಪ್ಪ, ಮೋತಿ ಸಿದ್ದಪ್ಪ, ಕೆ.ಪಿ. ಬಸಣ್ಣ, ಗುಂಡಗತ್ತಿ ಬಸಣ್ಣ, ಕಲ್ಲಳ್ಳಿ ಕೊಟ್ರೇಶ್, ಬಾರಿಕರ್ ಮಂಜಪ್ಪ, ಅಣಜಿ ಸಂಗಜ್ಜ, ಸುನಿಲಕುಮಾರ್ ಬಿದರಿ, ಮೋತಿ ಅರುಣ್, ದಾನಮ್ಮನವರ ಕೊಟ್ರೇಶ್, ಕೆ.ಲಿಂಗರಾಜ್, ಮೋತಿ ವೀರಣ್ಣ, ತೇಜಶ್ವರ್ ತಿಮ್ಮಾಳ ದೇವೇಂದ್ರ, ಕೊಂಡಪ್ಪರ್ ಹನುಮಂತ, ಜೋಗಪರ ಬಸಣ್ಣ, ಕೋಲ್ಕಾರ್ ಗೋಣೆಪ್ಪ, ಭೀಮಪ್ಪಳ ಅಂಜನಿ, ಮರಿಯಾಪ್ಳ ನಾಗರಾಜ, ಹಾಲಾಳ ಹನುಮಂತ ಇದ್ದರು.