ಧಾರ್ಮಿಕ ಕಾರ್ಯಗಳಿಗೆ ಭಕ್ತರ ಬೆಂಬಲ ಅಗತ್ಯ: ಕರಿವೃಷಭ ಮಹಾಸ್ವಾಮಿ

| Published : Jul 29 2025, 01:04 AM IST

ಧಾರ್ಮಿಕ ಕಾರ್ಯಗಳಿಗೆ ಭಕ್ತರ ಬೆಂಬಲ ಅಗತ್ಯ: ಕರಿವೃಷಭ ಮಹಾಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಲಕ್ಷ್ಮೇಶ್ವರ ಪಟ್ಟಣದ ಎಪಿಎಂಸಿ ವರ್ತಕರ ಸಂಘದ ಆಶ್ರಯದಲ್ಲಿ ನಡೆದ ನೂತನ ಗಣಪತಿ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮ ನೋಣವಿನಕೇರಿಯ ಕಾಡಸಿದ್ದೇಶ್ವರ ಮಠದ ಕರಿವೃಷಭ ಮಹಾಸ್ವಾಮಿಗಳ ನೇತೃತ್ವದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿತು.

ಲಕ್ಷ್ಮೇಶ್ವರ: ಪಟ್ಟಣದ ಎಪಿಎಂಸಿ ವರ್ತಕರ ಸಂಘದ ಆಶ್ರಯದಲ್ಲಿ ನಡೆದ ನೂತನ ಗಣಪತಿ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದ ನೇತೃತ್ವವನ್ನು ನೊಣವಿನಕೇರಿಯ ಕಾಡಸಿದ್ದೇಶ್ವರ ಮಠದ ಕರಿವೃಷಭ ಮಹಾಸ್ವಾಮಿಗಳು ವಹಿಸಿಕೊಂಡು, ಯಶಸ್ವಿಯಾಗಿ ನೆರವೇರಿಸಿದರು.

ಮೂರು ದಿನಗಳ ಹಿಂದೆ ಗಣಪತಿಯ ಸೇರಿದಂತೆ ವಿವಿಧ ಮೂರ್ತಿಗಳ ಮೆರವಣಿಗೆ, ಭಾನುವಾರ ಹೋಮ ಹವನ ಪೂಜಾ ವಿಧಿ ವಿಧಾನಗಳು ನೆರವೇರಿದವು. ಸೋಮವಾರ ಕೊನೆಯ ದಿನ ಬೆಳಗ್ಗೆ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ, ಯಜ್ಣಾಧಿಗಳಿಗೆ ಪೂರ್ಣಾಹುತಿ ನೀಡುವ ಕಾರ್ಯ ನಡೆಯಿತು.

ಆನಂತರ ನಡೆದ ಧರ್ಮಸಭೆಯಲ್ಲಿ ನೊಣವಿನಕೇರಿ ಮಠದ ಕರಿವೃಷಭ ದೇಶಿಕೇಂದ್ರ ಸ್ವಾಮಿಗಳು ಮಾತನಾಡಿ, ಧರ್ಮ ಕಾರ್ಯಗಳಿಗೆ ಭಕ್ತರು ಸಹಾಯ ಸಹಕಾರ ಬೆಂಬಲ ಅಗತ್ಯವಾಗಿದೆ. ನೂತನ ಗಣಪತಿಯ ಸುಂದರ ದೇವಸ್ಥಾನವನ್ನು ಪಟ್ಟಣದ ಎಪಿಎಂಸಿ ವರ್ತಕರ ಸಂಘ ನೆರವೇರಿಸಿದ್ದು ಸ್ಮರಣೀಯ. ಧರ್ಮ ಹಾಗೂ ದೇವತಾ ಕಾರ್ಯಗಳಿಗೆ ಸಮಾಜದ ಪ್ರತಿಯೊಬ್ಬರೂ ಸ್ಪಂದಿಸಬೇಕು. ಮಠ-ಮಾನ್ಯಗಳು ಧರ್ಮ ಬೋಧನೆಯನ್ನು ತಮ್ಮ ಉಸಿರಾಗಿಸಿಕೊಳ್ಳಬೇಕು ಎಂದು ಹೇಳಿದರು.

ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಗದಗ ಜಿಲ್ಲೆಯ ಲಕ್ಷ್ಮೇಶ್ವರ ಎಪಿಎಂಸಿಯು ಹೆಚ್ಚು ಪ್ರಸಿದ್ಧಿ ಪಡೆದಿದೆ. ಕೋವಿಡ್ ಸಮಯದಲ್ಲಿ ಲಕ್ಷ್ಮೇಶ್ವರ ಎಪಿಎಂಸಿ ವರ್ತಕರ ಸಂಘವು ಹೆಚ್ಚು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುವ ಕಾರ್ಯ ಮಾಡಿದೆ ಎಂದು ಹೇಳಿದರು. ಸಭೆಯಲ್ಲಿ ಮುಕ್ತಿ ಮಂದಿರದ ವಿಮಲ ರೇಣುಕ ವೀರ ಮುಕ್ತಿ ಮುನಿ ಸ್ವಾಮಿಗಳು ಮಾತನಾಡಿದರು. ಪಟ್ಟಣದ ಎಪಿಎಂಸಿ ಅಧ್ಯಕ್ಷ ಓಂ ಪ್ರಕಾಶ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ, ಎಪಿಎಂಸಿ ಬೆಳೆದು ಬಂದ ದಾರಿ ಹಾಗೂ ಸಂಘದ ಕಾರ್ಯ ವೈಖರಿ ಹಾಗೂ ನೂತನ ಗಣಪತಿ ದೇವಸ್ಥಾನದ ನಿರ್ಮಾಣ ಕುರಿತು ಮಾತನಾಡಿದರು. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅವರು ಮಾತನಾಡಿದರು.

ಧರ್ಮಸಭೆಯಲ್ಲಿ ಗಂಜಿಗಟ್ಟಿಯ ವೈಜನಾಥ ಮಹಾಸ್ವಾಮಿಗಳು, ಹೂವಿನ ಶಿಗ್ಲಿಯ ವಿರಕ್ತ ಮಠದ ಚನ್ನವೀರ ಮಹಾಸ್ವಾಮಿಗಳು, ಬನ್ನಿಕೊಪ್ಪದ ಡಾ. ಸುಜ್ಞಾನದೇವ ಮಹಾಸ್ವಾಮಿಗಳು, ಪಟ್ಟಣದ ಕರೇವಾಡಿ ಮಠದ ಮಳೆ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಓಂ ಪ್ರಕಾಶ ಜೈನ್ ಇದ್ದರು.

ಬಸವೇಶ ಮಹಾಂತಶೆಟ್ಟರ, ಪರಮೇಶ್ವರಪ್ಪ ಬಟಗುರ್ಕಿ, ಈರಣ್ಣ ಅಕ್ಕೂರ, ವಿ.ಎಲ್. ಪೂಜಾರ, ಚಂಬಣ್ಣ ಬಾಳಿಕಾಯಿ, ಪೂರ್ಣಾಜಿ ಕರಾಟೆ, ಸುನೀಲ ಮಹಾಂತಶೆಟ್ಟರ, ಬಸಣ್ಣ ಕೊಟಗಿ, ನೀಲಪ್ಪ ಬಟಗುರ್ಕಿ, ಸಿದ್ದನಗೌಡ ಬಳ್ಳೊಳ್ಳಿ, ರಾಜು ಅಂಗಡಿ, ಬಸಣ್ಣ ಕೊಟಗಿ, ಗೌತಮ್ ಮುಥಾ, ವಿಜಯ ಬೂದಿಹಾಳ, ಭರತ ಬಾಕಳೆ, ಕುಬೇರಪ್ಪ ಮಹಾಂತಶೆಟ್ಟರ, ಎಸ್.ಕೆ. ಕಾಳಪ್ಪನವರ, ಮಹಾದೇವಪ್ಪ ರಗಟಿ, ಪ್ರಭುಗೌಡ ದೊಡ್ಡಗೌಡರ, ಬಸಣ್ಣ ಹೊಳಲಾಪುರ, ಚಂದ್ರಣ್ಣ ಓದನವರು, ಸುಭಾಷ ಬಟಗುರ್ಕಿ, ರಾಜಣ್ಣ ಮಾನ್ವಿ. ಶಿವಯೋಗಿ ಗಡ್ಡದೇವರಮಠ, ಸಂತೋಷ ಬಾಳಿಕಾಯಿ, ರಾಜು ಮಲ್ಜಿ, ಮಂಜು ಸದಾವರ್ತಿ, ಸಿ.ಆರ್. ಲಕ್ಕುಂಡಿಮಠ, ಸೋಮಣ್ಣ ಕಿನ್ನಾಳ, ಶಿವು ಯಲವಿಗಿ, ಬಸಣ್ಣ ಗಾಂಜಿ, ಲೆಂಕೆಪ್ಪ ಶೆರಸೂರಿ, ಗಣೇಶ ಬೇವಿನಮರದ, ನಿಂಗಪ್ಪ ಬನ್ನಿ ಇದ್ದರು.

ನೂತನ ಗಣಪತಿ ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ದುಡಿದ ಶಿಲ್ಪಿಗಳು ಹಾಗೂ ಸಹಾಯಕರನ್ನು ಸನ್ಮಾನಿಸಲಾಯಿತು.

ಈ ವೇಳೆ ಸಂಗಪ್ಪ ಹನುಮಸಾಗರ ಸ್ವಾಗತಿಸಿದರು. ಈಶ್ವರ ಮೆಡ್ಲೇರಿ ಕಾರ್ಯಕ್ರಮ ನಿರೂಪಿಸಿದರು. ಓಂ ಪ್ರಕಾಶ ಜೈನ್ ವಂದಿಸಿದರು.