ಧಾರ್ಮಿಕ ಕಾಳಜಿ ಶೋಭಾಯಾತ್ರೆಗೆ ಸೀಮಿತವಾಗದಿರಲಿ: ಶ್ರೀಕಾಂತ್‌ ಶೆಟ್ಟಿ

| Published : Dec 26 2023, 01:30 AM IST / Updated: Dec 26 2023, 12:50 PM IST

ಧಾರ್ಮಿಕ ಕಾಳಜಿ ಶೋಭಾಯಾತ್ರೆಗೆ ಸೀಮಿತವಾಗದಿರಲಿ: ಶ್ರೀಕಾಂತ್‌ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಹೊಣೆ ಎಂದು ಅಂಕಣಕಾರ ಹಾಗೂ ವಾಗ್ಮಿ ಶ್ರೀಕಾಂತ್‌ ಶೆಟ್ಟಿ ಹೇಳಿದರು

ಶೃಂಗೇರಿ: ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಹೊಣೆ. ಧಾರ್ಮಿಕ ಕಾಳಜಿ ಕೇವಲ ಶೋಭಾಯಾತ್ರೆಗಳಿಗೆ ಮಾತ್ರ ಸೀಮಿತವಾಗದಿರಲಿ ಎಂದು ಅಂಕಣಕಾರ ಹಾಗೂ ವಾಗ್ಮಿ ಶ್ರೀಕಾಂತ್‌ ಶೆಟ್ಟಿ ಹೇಳಿದರು.

ಪಟ್ಟಣದ ಸಂತೇಮಾರುಕಟ್ಟೆ ಬಳಿ ದತ್ತಜಯಂತಿ ಅಂಗವಾಗಿ ವಿಶ್ವ ಹಿಂದೂ ಪರಿಷತ್‌ ಬಜರಂಗದಳ ಆಯೋಜಿಸಿದ್ದ ಶೋಭಾಯಾತ್ರೆ ಹಾಗೂ ಧಾರ್ಮಿಕ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಪ್ರತಿಯೊಬ್ಬ ರಲ್ಲಿ ರಾಷ್ಟ್ರಪ್ರಜ್ಞೆ ಮತ್ತು ರಾಷ್ಟ್ರೀಯತೆ ಭಾವನೆ ಬೆಳೆಯಬೇಕು. ಜಾತಿ, ಮತ, ಪಂಥ ಮೀರಿ ಒಗ್ಗೂಡಿದಾಗ ಮಾತ್ರ ರಾಷ್ಟ್ರೀಯತೆ ಬೆಳೆಯಲು ಸಾಧ್ಯ.

ಈ ದೇಶಕ್ಕೆ ಸ್ವಾತಂತ್ರ ಬಂದ ನಂತರ 25 ವರ್ಷಗಳ ಕಾಲ ಬ್ರಿಟೀಷ್‌ ಮಾರ್ಗಸೂಚಿಯಂತೆ ಒಂದೇ ಕುಟುಂಬ ಆಳ್ವಿಕೆ ನಡೆಸಿತು. 25 ವರ್ಷಗಳ ಕಾಲ ಜನತಾ ಪರಿವಾರ ಆಳ್ವಿಕೆ ಮಾಡಿತು. ಪ್ರಸ್ತುತ ಈಗ ಭಾರತೀಯ ಆಳ್ವಿಕೆಯ ಪುನರ್‌ ಸ್ಫಾಪನೆಯಾಗಿದೆ. ನಾನು, ನನ್ನದು, ಮನೆ, ಮಠ ಎಂದು ಹಿಂದೂಗಳು ಮನೆಯಲ್ಲಿ ಕುಳಿತು ಕೊಂಡರೆ ಧರ್ಮ, ಸಂಸ್ಕೃತಿ ಉಳಿಸಲು ಸಾದ್ಯವಿಲ್ಲ. ಶಿವಾಜಿ, ಕೆಳದಿ ಚೆನ್ನಮ್ಮ, ಅಮೋಘ ವರ್ಷ ನೃಪತುಂಗ ರಂತಹ ಕ್ಷಾತ್ರ ತೇಜಸ್ಸು ಹಿಂದೂಗಳಲ್ಲಿ ಬರಬೇಕು ಎಂದರು.

ಹಿಂದೂ ಸಂಘಟನೆಯ ದಿವೀರ್‌ ಮಲ್ನಾಡ್‌, ಕೆ.ಪಿ.ಸುರೇಶ್‌ ಕುಮಾರ್‌, ಶಿಲ್ಪಮಂಜುನಾಥ್, ನಾಗೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಆದಿಚುಂಚನಗಿರಿ ಮಹಾದ್ವಾರದಿಂದ ಬಸ್‌ ನಿಲ್ದಾಣದವರೆಗೂ ಬೃಹತ್‌ ಶೋಭಾಯಾತ್ರೆ ನಡೆಯಿತು.25 ಶ್ರೀ ಚಿತ್ರ 4-

ಶೃಂಗೇರಿ ಪಟ್ಟಣದಲ್ಲಿ ದತ್ತಜಯಂತಿ ಅಂಗವಾಗಿ ವಿಹಿಂಪ,ಬಜರಂಗದಳ ಸಂಘಟನೆ ವತಿಯಿಂದ ಬೃಹತ್‌ ಶೋಭಾಯಾತ್ರೆ ನಡೆಯಿತು.