ಪುಣ್ಯ ಕ್ಷೇತ್ರಗಳು ಸಮಾಜ ಸೇವಾ ಕಾರ್ಯ ಅಳವಡಿಸಿಕೊಳ್ಳಬೇಕು: ನಯನಾ ಮೋಟಮ್ಮ

| Published : Jul 29 2025, 01:00 AM IST

ಪುಣ್ಯ ಕ್ಷೇತ್ರಗಳು ಸಮಾಜ ಸೇವಾ ಕಾರ್ಯ ಅಳವಡಿಸಿಕೊಳ್ಳಬೇಕು: ನಯನಾ ಮೋಟಮ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಕಳಸಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀ ಕ್ಷೇತ್ರ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಾಲಯ ಖಾಸಗಿ ದೇವಾಲಯವಾಗಿದ್ದರೂ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಕೊಂಡಿರುವುದು ಹೆಮ್ಮೆಯ ಸಂಗತಿ. ಶ್ರೀಕ್ಷೇತ್ರ ಹೊರನಾಡಿನ ಧರ್ಮ ಕರ್ತರು 1992 ರಿಂದಲೂ ಜಾರಿಗೆ ತಂದಿರುವ ವಿವಿಧ ಯೋಜನೆಗಳು ದಿನದಿಂದ ದಿನಕ್ಕೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು. ಇಂತಹ ಧಾರ್ಮಿಕ ಕಾರ್ಯವನ್ನು ಇತರೆ ಪುಣ್ಯ ಕ್ಷೇತ್ರಗಳು ಅಳವಡಿಸಿಕೊಂಡಲ್ಲಿ ಸರ್ಕಾರದ ಹೊರೆ ಇಳಿಸಿದಂತಾಗುತ್ತದೆ ಎಂದು ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಹೇಳಿದರು.

ಕಳಸದ ಶ್ರೀಕ್ಷೇತ್ರ ಹೊರನಾಡು ಅನ್ನಪೂರ್ಣೆಶ್ವರಿ ದೇವಾಲಯದಲ್ಲಿ ಹಣ್ಣಿನ ಗಿಡಗಳ ವಿತರಣೆ

ಕನ್ನಡಪ್ರಭ ವಾರ್ತೆ, ಕಳಸ

ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀ ಕ್ಷೇತ್ರ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಾಲಯ ಖಾಸಗಿ ದೇವಾಲಯವಾಗಿದ್ದರೂ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಕೊಂಡಿರುವುದು ಹೆಮ್ಮೆಯ ಸಂಗತಿ. ಶ್ರೀಕ್ಷೇತ್ರ ಹೊರನಾಡಿನ ಧರ್ಮ ಕರ್ತರು 1992 ರಿಂದಲೂ ಜಾರಿಗೆ ತಂದಿರುವ ವಿವಿಧ ಯೋಜನೆಗಳು ದಿನದಿಂದ ದಿನಕ್ಕೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು. ಇಂತಹ ಧಾರ್ಮಿಕ ಕಾರ್ಯವನ್ನು ಇತರೆ ಪುಣ್ಯ ಕ್ಷೇತ್ರಗಳು ಅಳವಡಿಸಿಕೊಂಡಲ್ಲಿ ಸರ್ಕಾರದ ಹೊರೆ ಇಳಿಸಿದಂತಾಗುತ್ತದೆ ಎಂದು ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಹೇಳಿದರು.ಕಳಸ ತಾಲೂಕಿನ ಶ್ರೀಕ್ಷೇತ್ರ ಹೊರನಾಡು ಆಧಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೆಶ್ವರಿ ದೇವಾಲಯದ ಲಲಿತಕಲಾ ಮಂಟಪದಲ್ಲಿ ಶ್ರೀ ಕ್ಷೇತ್ರದ ಗ್ರಾಮೀಣಾಭಿವೃದ್ಧಿ ಯೋಜನೆಗಳಡಿ ಪರಿಕರ ಮತ್ತು ಹಣ್ಣಿನ ಗಿಡಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಹಲವಾರು ವರ್ಷಗಳಿಂದ ಜನೋಪಯೋಗಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಮಾಜಮುಖಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇಗುಲದ ಧರ್ಮದರ್ಶಿ ಡಾ. ಜಿ.ಭೀಮೇಶ್ವರ ಜೋಷಿ ಮಾತನಾಡಿ. ಕರ್ನಾಟಕದಲ್ಲಿ ಪ್ರಪ್ರಥಮ ಶಾಲಾ ಮಕ್ಕಳಿಗೆ ಬಿಸಿ ಊಟ ಯೋಜನೆ 1958ರಿಂದಲೇ ಶ್ರೀ ಕ್ಷೇತ್ರ ಪ್ರಾರಂಭಿಸಿದ್ದು ಅನ್ನಪೂರ್ಣೇಶ್ವರಿ ಆಶೀರ್ವಾದ ಎಂದರೆ ತಪ್ಪಾಗಲಾರದು ಅಂದಿನಿಂದ ಇಂದಿನವರೆಗೂ ನಡೆಯಿತ್ತಿರುವ ಈ ಯೋಜನೆಯನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದು ಹೇಳಿದರು.

ಬಿಸಿ ಊಟಕ್ಕೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಠಿಯಿಂದ ತಟ್ಟೆ ಲೋಟ ವಿತರಿಸುತ್ತಿದ್ದು. ತಮ್ಮ ಕ್ಷೇತ್ರದಲ್ಲಿ 1992 ರಿಂದ 2025 ರವರೆಗೆ ಧಾರ್ಮೀಕ ಯೋಜನೆ, ಧನ್ವಂತರಿ ಯೋಜನೆ, ಶೈಕ್ಷಣಿಕ ಯೋಜನೆ, ಸಾಮಾಜಿಕ ಯೋಜನೆ, ಸಾಂಸ್ಕೃತಿಕ ಯೋಜನೆ, ಸಾಮೂಹಿಕ ಉಪನಯನ, ಸಪ್ತಪದಿ ಯೋಜನೆ, ಗೃಹಲಕ್ಷ್ಮೀ ಯೋಜನೆ, ಆನಂದ ಜ್ಯೋತಿ ಯೋಜನೆ, ಅನ್ನದಾಸೋಹ ಯೋಜನೆಗಳಡಿಯಲ್ಲಿ ಕ್ಷೇತ್ರದಿಂದ ₹20 ಕೋಟಿ ಗಳನ್ನು ವ್ಯಯಿಸಲಾಗಿದೆ. ಇನ್ನು ಮುಂದೆಯು ನಡೆಸಲಾಗುವುದು ತಿಳಿಸಿದರು.ಈ ಬಾರಿ ಅನ್ನದಾಸೋಹ ಯೋಜನೆಯಡಿ ಸರ್ಕಾರಿ ಹಿರಿಯ ಮತ್ತು ಕಿರಿಯ 101 ಶಾಲೆಗಳಿಗೆ ಹಾಗೂ 17 ದೇವಸ್ಥಾನಗಳಿಗೆ 15 ಸಾವಿರ ತಟ್ಟೆಗಳು ಹಾಗೂ ಲೋಟಗಳು, ಶೈಕ್ಷಣಿಕ ಅಭಿವೃದ್ದಿ ಯೋಜನೆಯಡಿ 37 ಸರ್ಕಾರಿ ಶಾಲೆಗಳಿಗೆ 12 ಸಾವಿರ ನೋಟ್ ಪುಸ್ತಕಗಳು, ಶೈಕ್ಷಣಿಕ ಅಭಿವೃದ್ಧಿ ಯೋಜನೆಯಡಿ ಕಳಸ ತಾಲೂಕಿನ ಪ್ರೌಢಶಾಲೆಗಳು, ಪದವಿ ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜುಗಳಲ್ಲಿ 2024-25 ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳಿಸಿದ 15 ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ಎಂದರು.

ಕೃಷಿ ಸಮೃದ್ಧಿ ಯೋಜನೆಯಡಿ 50 ಫಲಾನುಭವಿ ರೈತರಿಗೆ ಕಲ್ಪವೃಕ್ಷ ಸಸಿಗಳನ್ನು ವಿತರಿಸುವುದರೊಂದಿಗೆ ಹೊರನಾಡು ಸರ್ಕಾರಿ ಹಿರಿಯ, ಪ್ರೌಢಶಾಲೆ ವಿಧ್ಯಾರ್ಥಿಗಳ ವಾರ್ಷಿಕ ಶಾಲಾ ಶುಲ್ಕ, ಧ್ವನಿವರ್ಧಕ ಮತ್ತು ಪ್ರೊಜೆಕ್ಟರ್ ವಿತರಿಸಲಾಗಿದೆ ಅರಣ್ಯ ಮತ್ತು ಪ್ರಕೃತಿ ಸಂರಕ್ಷಣಾ ಯೋಜನೆಯಡಿ 10 ಸಾವಿರ ಗಿಡಗಳನ್ನು ವಿತರಿಸಲಾಗಿದೆ ಎಂದರು. ಹೊರನಾಡು ಗ್ರಾಪಂ ಅಧ್ಯಕ್ಷ ಮಧುಪ್ರಸಾದ್ ಜೈನ್ ಮಾತನಾಡಿದರು. ವೇದಿಕೆಯಲ್ಲಿ ರಾಮನಾರಾಯಣ ಜೋಷಿ, ರಾಜ ಗೋಪಾಲ್ ಜೋಷಿ, ಗಿರಿಜಾಶಂಕರ್ ಜೋಷಿ ಉಪಸ್ಥಿತರಿದ್ದರು.

28 ಕೆಸಿಕೆಎಂ 1ಕಳಸ ತಾಲ್ಲೂಕಿನ ಶ್ರೀ ಕ್ಷೇತ್ರ ಹೊರನಾಡು ಆಧಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೆಶ್ವರಿ ದೇವಾಲಯದ ಲಲಿತಕಲಾ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮಶ್ರೀ ಕ್ಷೇತ್ರದ ಗ್ರಾಮೀಣಾಭಿವೃದ್ಧಿ ಯೋಜನೆಗಳಡಿ ಪರಿಕರ ಮತ್ತು ಹಣ್ಣಿನ ಗಿಡಗಳನ್ನು ವಿತರಿಸಿದರು. ಡಾ. ಜಿ.ಭೀಮೇಶ್ವರ ಜೋಷಿ, ಮಧುಪ್ರಸಾದ್‌ ಜೈನ್‌ ಇದ್ದರು.