ಧಾರ್ಮಿಕ ಕಾರ್ಯಕ್ರಮ ಜಾಗೃತಿ ಬೆಳೆಸಲು ಸಹಾಯಕ: ಮಳೆ ಮಲ್ಲಿಕಾರ್ಜುನ ಸ್ವಾಮಿಗಳು

| Published : Oct 04 2024, 01:04 AM IST

ಧಾರ್ಮಿಕ ಕಾರ್ಯಕ್ರಮ ಜಾಗೃತಿ ಬೆಳೆಸಲು ಸಹಾಯಕ: ಮಳೆ ಮಲ್ಲಿಕಾರ್ಜುನ ಸ್ವಾಮಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಲಕ್ಷ್ಮೇಶ್ವರ ಪಟ್ಟಣದ ದೊಡ್ಡದ್ಯಾಮವ್ವ ದೇವಸ್ಥಾನದಲ್ಲಿ ದಸರಾ ಉತ್ಸವ ಸಮಿತಿಯಿಂದ ನವರಾತ್ರಿಯ 9 ದಿನಕಾಲ ನಡೆಯುವ ದಸರಾ ಉತ್ಸವಕ್ಕೆ ಕರೇವಡಿಮಠದ ಮಳೆ ಮಲ್ಲಿಕಾರ್ಜುನ ಸ್ವಾಮಿಗಳು ಚಾಲನೆ ನೀಡಿದರು.

ಲಕ್ಷ್ಮೇಶ್ವರ: ದುರ್ಗಾದೌಡ್‌ನಂತಹ ಧಾರ್ಮಿಕ ಕಾರ್ಯಕ್ರಮ ಹಿಂದೂಗಳಲ್ಲಿ ಧರ್ಮ ಜಾಗೃತಿ ಬೆಳೆಸಲು ಸಹಾಯಕವಾಗಲಿದೆ ಎಂದು ಲಕ್ಷ್ಮೇಶ್ವರ ಕರೇವಡಿಮಠದ ಮಳೆ ಮಲ್ಲಿಕಾರ್ಜುನ ಸ್ವಾಮಿಗಳು ಹೇಳಿದರು.

ಅವರು ಪಟ್ಟಣದ ದೊಡ್ಡದ್ಯಾಮವ್ವ ದೇವಸ್ಥಾನದಲ್ಲಿ ದಸರಾ ಉತ್ಸವ ಸಮಿತಿಯಿಂದ ನವರಾತ್ರಿಯ 9 ದಿನಕಾಲ ನಡೆಯುವ ದಸರಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಧರ್ಮದ ಉಳಿವಿಗಾಗಿ ಇಂತಹ ಕಾರ್ಯಕ್ರಮಗಳು ನಡೆಯಬೇಕಾಗಿದೆ ಎಂದರು.

ದಸರಾ ಉತ್ಸವ ಸಮಿತಿ ರೂವಾರಿ ಗುರುನಾಥ ದಾನಪ್ಪನವರ ಹಾಗೂ ಯುವ ಮುಖಂಡ ರಾಜು ಅರಳಿ ಮಾತನಾಡಿ, ಧರ್ಮದ ಜಾಗೃತಿ ಮೂಡಿಸುವುದು ದುರ್ಗಾದೌಡ್‌ ಕಾರ್ಯಕ್ರಮದ ಉದ್ದೇಶ. 9 ದಿನಗಳಲ್ಲಿ 100ಕ್ಕಿಂತ ಹೆಚ್ಚು ದೇವಸ್ಥಾನಗಳನ್ನು ತಲುಪುವವರಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದರು.

ಉತ್ಸವ ದೊಡ್ಡದ್ಯಾಮವ್ವ ದೇವಸ್ಥಾನದಿಂದ ಬಿಸಿರೊಟ್ಟಿ ಈರಣ್ಣ, ಲಕ್ಷ್ಮಿಲಿಂಗನಗುಡಿ ದೇವರ ಬಾವಿ, ದಾನಿಕೇರಿ ಆಂಜನೇಯ ದೇವಸ್ಥಾನ ಹಳ್ಳದಯಲ್ಲಮ್ಮ, ದುರ್ಗಾದೇವಿ ಕೊಡಿಯಲ್ಲಮ್ಮ ಸಾಗಿ ಸಣ್ಣ ದ್ಯಾಮವ್ವ ದೇವಸ್ಥಾನಕ್ಕೆ ಬಂದು ಮೊದಲ ದಿನದ ಮುಕ್ತಾಯವಾಯಿತು.

ಈ ವೇಳೆ ದೊಡ್ಡದ್ಯಾಮವ್ವ ದೇವಸ್ಥಾನ ಅಧ್ಯಕ್ಷ ಮಹೇಶ ಲಿಂಬಯ್ಯಸ್ವಾಮಿಮಠ, ದುರ್ಗಾದೌಡ ಸಮಿತಿ ಅಧ್ಯಕ್ಷ ದೇವಪ್ಪ ಗಡೆದ, ಕಾರ್ಯದರ್ಶಿ ಮಲ್ಲನಗೌಡ ಪಾಟೀಲ, ರವಿ ಲಿಂಗಶೆಟ್ಟಿ, ತಿಪ್ಪಣ್ಣ ಸಂಶಿ, ಬಾಬಣ್ಣ ಅಳವಂಡಿ, ನೀಲಪ್ಪ ಕರ್ಜಕಣ್ಣನವರ, ವೆಂಕಟೇಶ ಕೊಂಡಿಕೊಪ್ಪ, ಪ್ರಶಾಂತ ಪೋತದಾರ, ಯಲ್ಲಪ್ಪ ಕೋರದಾಳ, ನಾಗರತ್ನಾ ನಾಗಲೋಟಿ, ದೇವಪ್ಪ ಬನ್ನಂಜಿ, ರಾಜು ಗುಡಗೇರಿ, ಶಿವನಗೌಡ ಪಾಟೀಲ ಇದ್ದರು.