ಸಾರಾಂಶ
ಸೋಮವಾರ ಬೆಳಗ್ಗೆ 5ಕ್ಕೆ ಸಲ್ಲಿಸಿದ ಶುಭ ಲಗ್ನ ಕನ್ಯಾದಲ್ಲಿ ವಿವಿಧ ಪೂಜಾ ಪುರಸ್ಕಾರದ ಬಳಿಕ ಶ್ರೀ ಮಲೆ ಮಹದೇಶ್ವರ ದೇವರ ಪ್ರತಿಷ್ಠಾಪನೆಯನ್ನು ಮಾಡಿದ ನಂತರ ರುದ್ರ ಜೋಡು ಮತ್ತು ಪೂರ್ಣಾಹುತಿ ಕಾರ್ಯಕ್ರಮನ್ನು ನಡೆಸಿ ನೂತನ ದೇವಾಲಯದ ಗೋಪುರ ಪ್ರತಿಷ್ಠಾಪನೆ ಮಾಡಲಾಯಿತು
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ಮಲೆಮಹದೇಶ್ವರ ದೇವಾಲಯ ಸೋಮವಾರ ಧಾರ್ಮಿಕ ಪೂಜಾ ಕಾರ್ಯದೊಂದಿಗೆ ಲೋಕಾರ್ಪಣೆಗೊಂಡಿತುಚಿಕ್ಕಕೊಪ್ಪಲು ಗ್ರಾಮದ ಸಿ.ಆರ್. ಮಂಜುನಾಥ್ ಮತ್ತು ಸಿ.ಆರ್. ಪಾರ್ಥ ನಿರ್ಮಿಸಿರುವ ದೇವಾಲಯದಲ್ಲಿ ದೇವರ ಪ್ರತಿಷ್ಠಾಪನೆ ಕಾರ್ಯ ಸಾವಿರಾರು ಮಂದಿಯ ಸಮ್ಮುಖದಲ್ಲಿ ನೆರವೇರಿತು.
ದೇವಾಲಯದ ಉದ್ಘಾಟನೆ ಹಿನ್ನೆಲೆ ಭಾನುವಾರ ರಾತ್ರಿ ಗ್ರಾಮದ ಕಂಬಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಹೊರವಲಯದಲ್ಲಿ ರುವ ಬೆಳವಲದಮ್ಮ ದೇವಾಲಯದ ಬಳಿಯ ಮಲ್ಲಮ್ಮನ ಕೊಳದಿಂದ ಕಳಸವನ್ನು ದೇವಾಯಲದ ಅವರಣಕ್ಕೆ ತಂದ ನಂತರ ಕಳಸ ಮಹಿಳೆಯರಿಗೆ ಮಮತಾ ಮಂಜುನಾಥ್, ಗಾಯತ್ರಿ ಪಾರ್ಥ ಮುತ್ತೈದೆ ಪೂಜೆ ನಡೆಸಿಕೊಟ್ಟರು.ಬಳಿಕ ರಾಮನಾಥಪುರದ ಸುಬ್ರಮಣ್ಯ ದೇವಾಲಯದ ಅಧ್ಯಕ್ಷರಾಗಿದ್ದ ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ವಿವಿಧ ವೇದ ಘೋಷಘೋಷದ ಪೂಜೆಯೊಂದಿಗೆ ಗಣಪತಿ ಪೂಜೆ, ವಾಸ್ತು ಹೋಮ, ಗಣಹೋಮ ನಂತರ ಗೋವನ್ನು ದೇವಾಲಯಕ್ಕೆ ಪ್ರವೇಶ ಮಾಡಿಸಿ ಕಳಸ ಸ್ಥಾಪನೆ ಮಾಡಿ ದೇವಾಲಯವನ್ನು ಪ್ರವೇಶ ಮಾಡಲಾಯಿತು.
ಸೋಮವಾರ ಬೆಳಗ್ಗೆ 5ಕ್ಕೆ ಸಲ್ಲಿಸಿದ ಶುಭ ಲಗ್ನ ಕನ್ಯಾದಲ್ಲಿ ವಿವಿಧ ಪೂಜಾ ಪುರಸ್ಕಾರದ ಬಳಿಕ ಶ್ರೀ ಮಲೆ ಮಹದೇಶ್ವರ ದೇವರ ಪ್ರತಿಷ್ಠಾಪನೆಯನ್ನು ಮಾಡಿದ ನಂತರ ರುದ್ರ ಜೋಡು ಮತ್ತು ಪೂರ್ಣಾಹುತಿ ಕಾರ್ಯಕ್ರಮನ್ನು ನಡೆಸಿ ನೂತನ ದೇವಾಲಯದ ಗೋಪುರ ಪ್ರತಿಷ್ಠಾಪನೆ ಮಾಡಲಾಯಿತು.ಬಳಿಕ ದೇವಾಲಯದಲ್ಲಿ ಮಹಾ ಮಂಗಳಾರತಿ ಕಾರ್ಯಕ್ರಮವನ್ನು ಮಾಡಿದ ಹಾಜರಿದ್ದ ಭಕ್ತಾದಿಗಳು ದೇವರಿಗೆ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥವನ್ನು ಈಡೇರಿಸುವಂತೆ ಪ್ರಾರ್ಥಿಸಿದರು. ಆನಂತರ ಭಕ್ತಾದಿಗಳು ಮತ್ತು ಗ್ರಾಮಸ್ಥರಿಗೆ ಅನ್ನ ಸಂತಪರ್ಣೆ ಏರ್ಪಡಿಸಿತ್ತು.
ರಾಮೇಗೌಡ, ಮಹದೇವ್, ಪರುಶುರಾಮೇಗೌಡ, ಸಿ.ಕೆ. ಸ್ವಾಮೀಗೌಡ, ಕೃಷ್ಣೇಗೌಡ, ಸಿ.ಟಿ. ಸ್ವಾಮಿ, ತೊಟ್ಟಲೇಗೌಡ, ನಿವೃತ್ತ ಶಿಕ್ಷಕ ಸಿ.ಟಿ. ಧರ್ಮಪಾಲ್, ಮುಖಂಡರಾದ ಸಿ.ಬಿ. ಲೋಕೇಶ್. ಡಿ. ಪುನೀತ್, ಸಿ.ಕೆ.ಆರ್ಮನು, ಪೂಜಾರಿ ರಾಮೇಗೌಡ, ಕೊಲಕಾರ ಮಹದೇವ್, ರಾಮಚಂದ್ರ, ಸಿದ್ದರಾಜು, ಸಾಗರ್, ಸಿ.ಪಿ. ಮಧು, ಸಿ.ಪಿ. ಗಿರೀಶ್, ಸಚಿನ್ , ಕುಮಾರ್, ಕುಡುಕುರು ಶನಿದೇವರ ಅರ್ಚಕ ಸಿದ್ದಯ್ಯ , ಮುತ್ತುತ್ತಾಳಮ್ಮ ದೇವಾಲಯದ ಅರ್ಚಕ ಸಿ.ಎಂ. ಮಂಜು, ಕಂಬಮ್ಮ ದೇವಾಲಯದ ಅರ್ಚಕ ಚಿರಂತ್, ಶೆಟ್ಟಹಳ್ಳಿ ಮಲ್ಲೇಶ್, ಕರ್ನಾಟಕ ಸಚಿವಾಲಯದ ಹಿರಿಯ ಸಹಾಯಕ ಸಿ.ಟಿ. ಮಂಜುನಾಥ್, ಕುಪ್ಪೆ ಸಹಕಾರ ಸಂಘದ ಸಹಾಯಕ ಸಿ.ಜಿ. ಜಗನ್ನಾಥ್, ಶಿಕ್ಷಕ ಪುಟ್ಟಸ್ವಾಮಿ, ನಿವೃತ್ತ ಶಿಕ್ಷಕ ಕಾಳೇಗೌಡ ಇದ್ದರು.