ಶೀಘ್ರ ಜುಗೂಳ, ಮಂಗಾವತಿ, ಶಹಾಪುರ ಸ್ಥಳಾಂತರ

| Published : Jul 13 2025, 01:18 AM IST

ಸಾರಾಂಶ

ಕಾಗವಾಡ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಜುಗೂಳ, ಮಂಗಾವತಿ ಹಾಗೂ ಶಹಾಪುರ ಗ್ರಾಮಗಳನ್ನು ಶೀಘ್ರದಲ್ಲಿಯೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು ಎಂದು ಶಾಸಕ ರಾಜು ಕಾಗೆ ಹೇಳಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಕಾಗವಾಡ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಜುಗೂಳ, ಮಂಗಾವತಿ ಹಾಗೂ ಶಹಾಪುರ ಗ್ರಾಮಗಳನ್ನು ಶೀಘ್ರದಲ್ಲಿಯೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು ಎಂದು ಶಾಸಕ ರಾಜು ಕಾಗೆ ಹೇಳಿದರು.

ಕಾಗವಾಡ ಮತಕ್ಷೇತ್ರದಲ್ಲಿ ವಿವಿಧ ಗ್ರಾಮಗಳಲ್ಲಿ ಮಂಜೂರಾದ ಸಮುದಾಯ ಭವನಗಳಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಈ ಸಂಬಂಧ ನಾನು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರೊಂದಿಗೆ ಚರ್ಚಿಸಿದ್ದು, ಕೆಲವೇ ತಿಂಗಳಲ್ಲಿಯೇ ಸ್ಥಳಾಂತರ ಕಾರ್ಯ ಪ್ರಾರಂಭಿಸುವುದಾಗಿ ಹೇಳಿದರು. ಮಳೆಗಾಲ ಅವಧಿಯಲ್ಲಿ ಈ ಮೂರೂ ಗ್ರಾಮಗಳಲ್ಲಿ ಕೃಷ್ಣಾ ನದಿಯ ನೀರು ತಿಂಗಳುಗಟ್ಟಲೇ ನಿಲ್ಲುತ್ತದೆ. ಇದರಿಂದ ಈ ಗ್ರಾಮಗಳ ಗ್ರಾಮಸ್ಥರು ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆಯುತ್ತಾರೆ. ಹೀಗಾಗಿಯೇ ಅತೀ ಶೀಘ್ರದಲ್ಲಿಯೇ ಈ ಗ್ರಾಮಗಳ ಸ್ಥಳಾಂತರಕ್ಕೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.ಮಂಗಾವತಿ ಕಾಗವಾಡ ಮಧ್ಯದ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಪೂರ್ಣಗೊಂಡು ಶಂಕುಸ್ಥಾಪನೆ ನೆರವೇರಿಸುವೆ ಎಂದ ಅವರು, ಮತಕ್ಷೇತ್ರದ 60 ಗ್ರಾಮಗಳಲ್ಲಿ 72 ಸಮುದಾಯ ಭವನ ನಿರ್ಮಾಣಕ್ಕೆ ₹13 ಕೋಟಿ ಅನುದಾನ ಮಂಜೂರಾಗಿದೆ. ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮುಂದಿನ ಕೆಲವೇ ತಿಂಗಳಲ್ಲಿಯೇ ಪೂರ್ಣಗೊಳ್ಳುತ್ತವೆ ಎಂದರು.ಬಹುದಿನಗಳಿಂದ ಹಲವಾರು ಸಮಾಜದದವರು ಸಮುದಾಯ ಭವನಗಳು ಬೇಕೆಂದು ನನ್ನ ಬಳಿ ಮನವಿ ಮಾಡಿದ್ದರು. ಅದಕ್ಕಾಗಿಯೇ ಮುಖ್ಯಮಂತ್ರಿಗಳಿಂದ ₹25 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿಸಿಕೊಂಡು ಬಂದಿದ್ದೇನೆ. ಅದರಲ್ಲಿ ₹13 ಕೋಟಿ ಸಮುದಾಯ ಭವನಗಳಿಗೆ ₹12 ಕೋಟಿ ರಸ್ತೆ ಕಾಮಗಾರಿಗೆ ಉಪಯೋಗಿಸಲಾಗುತ್ತಿದೆ. ಸಮುದಾಯ ಭವನಗಳು ಗ್ರಾಮದ ಮಧ್ಯದಲ್ಲಿ ಇರುವುದರಿಂದ ಸಮಾಜದವರು ಗುತ್ತಿಗೆದಾರರಿಗೆ ಸಹಕಾರ ನೀಡಬೇಕೆಂದು ಕೋರಿದರು.ಈ ಸಂದರ್ಭದಲ್ಲಿ ಕ್ರೀಯಾಶೀಲ ಜಿಪಂ ಅಧಿಕಾರಿ ವೀರಣ್ಣಾ ವಾಲಿ, ಕಿರಿಯ ಅಭಿಯಂತರ ಮಡಿವಾಳ ಪಾಟೀಲ, ಧುರೀಣರಾದ ಅನೀಲಕುಮಾರ ಸತ್ತಿ, ಅನೀಲ ಸಿಂಧೆ, ಹರ್ಷ ಮಗದುಮ್, ಸುನೀಲ ಅವಟಿ, ಸುನೀಲ ತೇಲಿ, ಸುನೀಲ ಪಾಟೀಲ, ಶ್ರೀಮಂತ ಸಲಗರೆ, ಬಾಲಾಜಿ ಪಾಟೀಲ, ಅನೀಲಕುಮಾರ ಪಾಟೀಲ, ಈಶ್ವರ ಕೋಳಿ, ವಸಂತ ಗಾಡಿವಡ್ಡರ, ಅಣ್ಣಾಸಾಹೇಬ ಪಾಟೀಲ, ಕಾಕಾ ಪಾಟೀಲ, ಬಿ.ಐ.ಪಾಟೀಲ, ಸುರೇಶ ಪಾಟೀಲ, ರಾಜಗೌಡ ಪಾಟೀಲ, ರವೀಂದ್ರ ವ್ಹಾಟೆ, ರಾಜು ಕಡೋಲಿ, ಅನೀಲ ಕಡೋಲಿ, ಉಮೇಶ ಪಾಟೀಲ, ಅವಿನಾಶ ಪಾಟೀಲ, ತಾತ್ಯಾಸಾಹೇಬ ಪಾಟೀಲ, ವಸಂತ ಖೋತ, ರಾಹುಲ ಶಹಾ, ವಿಫುಲ ಪಾಟೀಲ, ರವೀಂದ್ರ ಪೂಜಾರಿ, ಮುಕುಂದ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಎಲ್ಲೆಲ್ಲಿ ಭವನಗಳಿಗೆ ಭೂಮಿ ಪೂಜೆ?:

ಮಂಗಾವತಿ ಗ್ರಾಮದಲ್ಲಿ ಮಹಾದೇವ ದೇವರ ಗುಡಿಯ ಹತ್ತಿರ ಸಮುದಾಯ ಭವನಕ್ಕೆ, ಭೂಮಿಪೂಜೆ, ಜುಗೂಳ ಗ್ರಾಮದಲ್ಲಿ ಶ್ರೀ ಯಲ್ಲಮ್ಮದೇವಿ ಗುಡಿಯ ಹತ್ತಿರ ಸಮುದಾಯ ಭವನಕ್ಕೆ, ಶಹಾಪೂರ ಗ್ರಾಮದಲ್ಲಿ ಶ್ರೀ ಭರಮಪ್ಪ ಗುಡಿಯ ಹತ್ತಿರ ಸಮುದಾಯ ಭವನಕ್ಕೆ, ಮೊಳವಾಡ ಗ್ರಾಮದಲ್ಲಿ ಶ್ರೀ ಮಾರುತಿ ಗುಡಿಯ ಹತ್ತಿರ ಸಮುದಾಯ ಭವನಕ್ಕೆ, ಕುಸನಾಳ ಗ್ರಾಮದಲ್ಲಿ ಭಗವಾನ 108 ಶಾಂತಿನಾಥ ಜೈನ ಬಸದಿ ಹತ್ತಿರ ಸಮುದಾಯ ಭವನಕ್ಕೆ, ಉಗಾರ-ಬುದ್ರುಕ ಪೀರ ಮಮ್ಮುಲಾಲಬಾಬಾ ದರ್ಗಾ ಜೀರ್ಣೋದ್ಧಾರ ಕಾಮಗಾರಿಗೆ, ಶ್ರೀ ಭರಮಪ್ಪ ದೇವಸ್ಥಾನದ ಹತ್ತಿರ ಸಮುದಾಯ ಭವನಕ್ಕೆ, ಶ್ರೀ ಮರಗುಬಾಯಿ ದೇವರ ಗುಡಿಯ ಹತ್ತಿರ ಸಮುದಾಯ ಭವನಕ್ಕೆ, ಫರೀದಖಾನವಾಡಿ ಶ್ರೀ ಲಕ್ಷ್ಮೀ ದೇವಸ್ಥಾನದ ಹತ್ತಿರ ಸಮುದಾಯ ಭವನಕ್ಕೆ, ಮಂಗಸೂಳಿ ವೀರಶೈವ ಪಂಚಮಸಾಲಿ ಸಮಾಜ ಸೇವಾ ಸಂಘದ ಸಮುದಾಯ ಭವನಕ್ಕೆ, ಶ್ರೀ ಬಿರೋಬಾ ದೇವರ ಪಾಲಕಿ ಗೃಹದ ಹತ್ತಿರ ಸಮುದಾಯ ಭವನಕ್ಕೆ, ಶ್ರೀ ಮಸೋಬಾ ದೇವಸ್ಥಾನದ ಹತ್ತಿರ ಸಮುದಾಯ ಭವನಕ್ಕೆ ಶಾಸಕ ಕಾಗೆ ಭೂಮಿ ಪೂಜೆ ನೆರವೇರಿಸಿದರು.