ಸಾರಾಂಶ
ಬೇಲೂರು: ತಾಲೂಕು ಅರೇಹಳ್ಳಿಯ ಮಲ್ನಾಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜನೆ ಮಾಡಲಾಗಿದ್ದ 2024-25ನೇ ಸಾಲಿನ ಕಲೋತ್ಸವ ಸ್ಪರ್ಧೆಯಲ್ಲಿ ಅರೇಹಳ್ಳಿಯ ಅಂಬೇಡ್ಕರ್ ನಗರದಲ್ಲಿರುವ ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ನಾನಾ ಸ್ಥಾನಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದು, ಜಾನಪದ ನೃತ್ಯ 6 , ಕ್ವಿಜ್ 2, ಕವ್ವಾಲಿ 6 ವಿದ್ಯಾರ್ಥಿಗಳು ಸೇರಿದಂತೆ ವೈಯಕ್ತಿಕ ಹಾಗೂ ಗುಂಪು ವಿಭಾಗಗಳಲ್ಲಿ ಭಾಗವಹಿಸಿ ಒಟ್ಟು 27 ಪದಕಗಳನ್ನು ವಿದ್ಯಾರ್ಥಿಗಳು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಈ ವಿದ್ಯಾರ್ಥಿಗಳನ್ನು ಶಾಲಾ ವ್ಯವಸ್ಥಾಪಕ ಫಾ.ಕಿರಣ್ ಮೆಲ್ವಿನ್, ಮುಖ್ಯ ಶಿಕ್ಷಕ ರಂಜಿತ್ ಕುಮಾರ್ ಕೆ.ಎಸ್, ಶಿಕ್ಷಕರಾದ ಸುಮಿತ ಕೀರ್ತಿ, ನಿರ್ಮಲ, ಚಂದ್ರು, ಜ್ಯೋತಿ, ಗ್ರೇಷಿಯನ್ ಮೆನೆಜಸ್ ಸಂಗೀತ ಶಿಕ್ಷಕಿ ಗೌರಿ ಹೆಗಡೆ ಅಭಿನಂದಿಸಿದರು.ವಿಜೇತರ ವಿವರ:1. ಚೈತನ್ಯ ಎಸ್ .ಆರ್ . ಮತ್ತು ತಂಡ -ಜಾನಪದ ನೃತ್ಯ (ಪ್ರ) 2.ಪ್ಲೆವಿನ್ -ಮಿಮಿಕ್ರಿ (ಪ್ರ) 3. ಪೆಲ್ಸ್ ಟನ್ - ಆಶು ಭಾಷಣ (ಪ್ರ) 4.ಮೊಹಮ್ಮದ್ ಬಿಲಾಲ್- ಅರೇಬಿಕ್ ಧಾರ್ಮಿಕ ಪಠಣ (ಪ್ರ) , ದುಂಬಿನಿ -ಭಗವದ್ಗೀತೆ ಧಾರ್ಮಿಕ ಪಠಣ(ದ್ವಿ), ಅಫ್ಸಾನಾ ಬಾನು-ಕನ್ನಡ ಪ್ರಬಂಧ (ದ್ವಿ),ಆಯೇಷಾ ಸಿದ್ಧಿಕಾ-ಹಿಂದಿ ಭಾಷಣ (ದ್ವಿ), ಯಶಸ್ವಿನಿ ಹಾಗೂ ಪೆಲ್ಸ್ ಟನ್ -ಕ್ವಿಜ್ (ದ್ವಿ), ಆದಿತ್ಯ-ಚಿತ್ರಕಲೆ (ದ್ವಿ), ಪೆಲ್ಸ್ ಟನ್ - ಚರ್ಚಾ ಸ್ಪರ್ಧೆ(ದ್ವಿ), ಜಾಯ್ಸಟನ್- ಜನಪದ ಗೀತೆ(ದ್ವಿ), ಫಿದಾ ಮತ್ತು ತಂಡ- ಕವ್ವಾಲಿ (ತೃ), ಭವ್ಯ- ಭಾವಗೀತೆ(ತೃ), ಜ್ಞಾನೇಶ್-ಕವನ ವಾಚನ (ತೃ), ಯಶಸ್ವಿನಿ-ಭರತನಾಟ್ಯ(ತೃ), ಸಿಯಾನ್ ಜೈಸನ್ ಡಿ ಕುನ್ಹಾ- ಇಂಗ್ಲೀಷ್ ಭಾಷಣ(ತೃ).