ಚಿಕ್ಕಮಗಳೂರುಮಾನವ ಸಂಕುಲವು ಬಾಳಿನಲ್ಲಿ ಆತ್ಮ ನೆಮ್ಮದಿ ಹಾಗೂ ಸಂತೋಷದಿಂದ ಜೀವಿಸಲು ಮೊದಲು ಭಗವಂತನ ಸ್ಮರಣೆ ಹಾಗೂ ಗುರುಗಳ ಮಾರ್ಗದರ್ಶವಿರಬೇಕು ಎಂದು ಬಸವತತ್ವ ಪೀಠಾಧ್ಯಕ್ಷ ಶ್ರೀ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ದೊಡ್ಡಕುರುಬರಹಳ್ಳಿ ಬಸವ ಮಂದಿರದಲ್ಲಿ ಶಿವಾನುಭವ ಗೋಷ್ಠಿಯಲ್ಲಿ ಆಶೀರ್ವಚನ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮಾನವ ಸಂಕುಲವು ಬಾಳಿನಲ್ಲಿ ಆತ್ಮ ನೆಮ್ಮದಿ ಹಾಗೂ ಸಂತೋಷದಿಂದ ಜೀವಿಸಲು ಮೊದಲು ಭಗವಂತನ ಸ್ಮರಣೆ ಹಾಗೂ ಗುರುಗಳ ಮಾರ್ಗದರ್ಶವಿರಬೇಕು ಎಂದು ಬಸವತತ್ವ ಪೀಠಾಧ್ಯಕ್ಷ ಶ್ರೀ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ನಗರದ ದೊಡ್ಡಕುರುಬರಹಳ್ಳಿಯ ಬಸವ ಮಂದಿರದಲ್ಲಿ ಶ್ರೀ ಬಸವತತ್ವ ಪೀಠದಿಂದ ಆಯೋ ಜಿಸಿದ್ಧ ಶಿವಾನುಭವ ಗೋಷ್ಠಿ- 54ರಲ್ಲಿ ಆಶೀರ್ವಚನ ನೀಡಿ ಜಗತ್ತಿನಲ್ಲಿ ಭಗವಂತನಂಥ ಕರುಣಾಮಯಿ ಶಕ್ತಿ ಬೇರೊಂದಿಲ್ಲ. ಮನುಷ್ಯ ಹಾಗೂ ಸಕಲ ಜೀವ ರಾಶಿಗಳಿಗೆ ದೇವರು ಪಂಚಭೂತಗಳ ಶಕ್ತಿ ನೀಡಿದೆ. ಈ ಶಕ್ತಿ ಸಮರ್ಪಕವಾಗಿ ಬಳಸಿಕೊಂಡು ಮಾನವರು ಜೀವನ ಸಾಗಿಸು ವುದೇ ಕಷ್ಟಕರವಾಗುವುದು ಬೇಸರದ ಸಂಗತಿ. ಪ್ರಾಣಿ-ಪಕ್ಷಿಗಳ ಜೀವನಶೈಲಿ ಮನುಷ್ಯ ಅಳವಡಿಸಿಕೊಂಡು ಬಾಳಬಂಡಿಯಲ್ಲಿ ಮುನ್ನಡೆಯಬೇಕು ಎಂದರು.

ಮನೆತನ ಉದ್ಧಾರವಾಗಲು ಮೊದಲು ಭವಬಂಧದಿಂದ ಮುಕ್ತರಾಗಿ, ದೇವರು ಮತ್ತು ಗುರುಗಳಲ್ಲಿ ಶರಣಾಗತಿಯಾಗಬೇಕು. ತನ್ನದಲ್ಲದ ಯಾವುದೇ ವಸ್ತು ಅಥವಾ ಒಂದು ರು. ಹಣ ಮುಟ್ಟದಂತೆ ಬದುಕಿ ಬಾಳಿದವರು ಶರಣರು. ಆದರೆ, ಆಧುನಿಕ ಕಾಲದಲ್ಲಿ ಮನುಷ್ಯ ಬಹಳಷ್ಟು ಸವಲತ್ತಿದ್ದರೂ ಬೇಡುವುದನ್ನು ಬಿಡುತ್ತಿಲ್ಲ ಎಂದು ಹೇಳಿದರು.

ಭಗವಂತನ ಹುಡುಕಾಟದಲ್ಲಿ ಮಾನವರು ಎಲ್ಲೆಂದರಲ್ಲಿ ದೇವರು ಶೋಧಿಸುತ್ತಿದ್ದರು. ದೇವರು ಸಹ ಹಿಮಾಲಯ ಪರ್ವತ ಸೇರಿ ದಂತೆ ಹಲವೆಡೆ ಅಡಗಿಕೊಂಡರು ಮನುಷ್ಯರು ಬಿಡಲಿಲ್ಲ. ಕೊನೆ ಗಳಿಗೆಯಲ್ಲಿ ಮಾನವರ ಹೃದಯದಲ್ಲೇ ನೆಲೆ ಯೂರಿದರು. ತನ್ನ ಎದೆಯಾಳದಲ್ಲಿ ದೇವರನ್ನು ಕಾಣದ ಹುಳು ಮಾನವ ಬಿಕ್ಷಕರಾದರೆ, ತನ್ನೊಳಗೆ ದೇವರನ್ನು ಕಂಡವರು ದಾರ್ಶನಿಕರಾದರು ಎಂದರು.

ಭಕ್ತಿಯಿದ್ದಲ್ಲಿ ಭಗವಂತನ ದಯೆ ಒಲಿದು ಬರಲಿದೆ. ನಾನು, ನನ್ನದು, ನನ್ನಿಂದಲೇ ಎಂಬ ಅಹಂನಲ್ಲಿ ಬದುಕಿದವರು, ಇಂದಿಗೂ ಬೇಡುವುದನ್ನು ಬಿಡುತ್ತಿಲ್ಲ. ಇದು ಭಗವಂತನ ಪ್ರೀತಿಗೆ ಪಾತ್ರವಾಗಲು ಸಾಧ್ಯವಾಗದು. ಕರ್ಪೂರ ಬೆಳಕು ನೀಡಿ ಕರಗಿದಂತೆ, ಮನುಷ್ಯನು ಸಮಾಜದ ಬೆಳಕಾಗಿ, ಕೊನೆಗೆ ಪರಮಾತ್ಮನ ಪಾದಚರಣದಲ್ಲಿ ಐಕ್ಯರಾಗಬೇಕು ಎಂದು ಹೇಳಿದರು.

ಪುನರಾವರ್ತಿತ ಅಂತಾರಾಷ್ಟ್ರೀಯ ಪ್ರಕಾಶಕ ನಂಜೇಶ್ ಬೆಣ್ಣೂರು ಅಭಿನಂದನೆ ಸ್ವೀಕರಿಸಿದ ಮಾತನಾಡಿ, ಐದು ವರ್ಷ ಗಳಲ್ಲಿ ಮೂರು ಸಾವಿರ ಕೃತಿಗಳನ್ನು ಪ್ರಕಟಿಸುವ ಹಿಂದೆ ಬಹಳಷ್ಟು ಶ್ರಮವಿದೆ. 7-8 ವರ್ಷಗಳಿಂದ ಆರಂಭಿಸಿ ಪ್ರಕಾಶನ ಉದ್ಯಮ ಸಾಗುತ್ತಾ ಓರ್ವ ಸಾಹಿತ್ಯಲೋಕದ ಬರಹಗಾರರಾಗಿ ಮಾರ್ಪಡಿಸಿತು ಎಂದು ತಿಳಿಸಿದರು.

ಪುಸ್ತಕ ಅಥವಾ ವಿಷಯ ಬರವಣಿಗೆಗೆ ತುಂಬಾನೇ ಶ್ರಮಪಡಬೇಕು. ತಾವು ರಚಿಸಿದ ಅನೇಕ ಪುಸ್ತಕ ಗಳು ದೇಶದ ಅನೇಕ ಯುನಿರ್ವಸಿಟಿಗಳಲ್ಲಿ ಪಠ್ಯದ ಒಂದು ಭಾಗವಾಗಿ ನೇಮಿಸಿರುವುದು ಖುಷಿ ತಂದಿದೆ. ಅದರಂತೆ ಸ್ವಾಮೀಜಿ ಅಪ್ಪಣೆ ಮೇರೆಗೆ ಮಠದಲ್ಲಿ ಪದವಿಧರರಿಗೆ ಉದ್ಯೋಗಕ್ಕೆ ಅನುಕೂಲವಾಗಲು ಸ್ಪರ್ಧಾತ್ಮಕ ಪರೀಕ್ಷೆ ತಯಾರಿ, ತರಬೇತಿ ಶಿಬಿರ ನಡೆಸುವ ಆಲೋಚನೆಯಿದೆ ಎಂದರು.

ವಾಗ್ಮಿ ಜಿ.ಎಸ್.ನಟೇಶ್ ಮಾತನಾಡಿ ಆಧುನಿಕ ಜಗತ್ತಿನಲ್ಲಿ ಮಕ್ಕಳು, ಯುವಜನತೆಗೆ ಸಂಸ್ಕಾರದ ಅರಿವು, ಗುರು-ಹಿರಿಯರ ಗೌರವಿಸುವ ಸಂಸ್ಕೃತಿಯಿಲ್ಲ. ಅಲ್ಲದೇ ಯುವಕರು ಹೆಚ್ಚು ಹಣ, ಅಧಿಕಾರದ ಹಿಂದೆಬಿದು ಅಜ್ಞಾನದಲ್ಲಿ ಮುಳುಗುತ್ತಿರುವುದು ಸರಿಯಲ್ಲ. ಬಾಲ್ಯದಿಂದಲೇ ಗುರುಗಳ ದರ್ಶನ ಮಾಡಿದರೆ ಸರಿದಾರಿಯಲ್ಲಿ ಮುಂದುವರೆಯಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಬೆಳವಾವಿ ಶ್ರೀ ಅಡವಿಸಿದ್ದೇಶ್ವರ ಮಠದ ಶ್ರೀ ಅಡವೀಶ್ವರ ದೇವರು, ಮೈಸೂರಿನ ಶ್ರೀ ನಿರಂಜನ ದೇವರು, ದಾಸೋಹ ಸೇವಾಕರ್ತ ಯಕ್ಕಶೆಟ್ಟಿಹಳ್ಳಿ ನಾಗರತ್ನಮ್ಮ ಮಲ್ಲೇಗೌಡ, ಲಕ್ಷ್ಮೀಪುರದ ಎಲ್.ಎಸ್.ಶಶಿಕುಮಾರ್, ಮಠದ ಟ್ರಸ್ಟಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.ಫೋಟೋ:

ಬಸವ ಮಂದಿರದಲ್ಲಿ ಶ್ರೀ ಬಸವತತ್ವ ಪೀಠದಿಂದ ಆಯೋ ಜಿಸಿದ್ಧ ಶಿವಾನುಭವ ಗೋಷ್ಠಿ-54ಯಲ್ಲಿ ಪುನರಾವರ್ತಿತ ಅಂತಾರಾಷ್ಟೀಯ ಪ್ರಕಾಶಕ ನಂಜೇಶ್ ಬೆಣ್ಣೂರು ಸನ್ಮಾನಿಸಲಾಯಿತು. ಬಸವತತ್ವ ಪೀಠಾಧ್ಯಕ್ಷ ಶ್ರೀ ಡಾ.ಬಸವ ಮರುಳಸಿದ್ಧ ಸ್ವಾಮೀಜಿ, ವಾಗ್ಮಿ ಜಿ.ಎಸ್.ನಟೇಶ್, ಶ್ರೀ ಅಡವೀಶ್ವರ ದೇವರು, ಮೈಸೂರಿನ ಶ್ರೀ ನಿರಂಜನ ದೇವರು ಮೊದಲಾದವರಿದ್ದರು.