ಸಾರಾಂಶ
ವಿದ್ಯುತ್ ಕಂಬವೊಂದು ಶಿಥಿಲಗೊಂಡು ಅಪಾಯದ ಸ್ಥಿತಿಯಲ್ಲಿ ನಿಂತಿದೆ. ಜೋರು ಗಾಳಿ ಮಳೆ ಬೀಸಿದರೆ ಕಂಬಗಳು ಅಲುಗಾಡುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಶಿಥಿಲಗೊಂಡಿದ್ದರೂ ಇದರ ದುರಸ್ತಿಗೆ ಮೆಸ್ಕಾಂ ಅಧಿಕಾರಿಗಳು ಕ್ರಮವಹಿಸುತ್ತಿಲ್ಲ. ಈ ವಿದ್ಯುತ್ ಕಂಬವನ್ನು ತೆರವುಗೊಳಿಸಿ ಹೊಸ ಕಂಬವನ್ನು ಅಳವಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶಿವಮೊಗ್ಗ: ವಿದ್ಯುತ್ ಕಂಬವೊಂದು ಶಿಥಿಲಗೊಂಡು ಅಪಾಯದ ಸ್ಥಿತಿಯಲ್ಲಿ ನಿಂತಿದೆ. ಜೋರು ಗಾಳಿ ಮಳೆ ಬೀಸಿದರೆ ಕಂಬಗಳು ಅಲುಗಾಡುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಶಿಥಿಲಗೊಂಡಿದ್ದರೂ ಇದರ ದುರಸ್ತಿಗೆ ಮೆಸ್ಕಾಂ ಅಧಿಕಾರಿಗಳು ಕ್ರಮವಹಿಸುತ್ತಿಲ್ಲ. ಈ ವಿದ್ಯುತ್ ಕಂಬವನ್ನು ತೆರವುಗೊಳಿಸಿ ಹೊಸ ಕಂಬವನ್ನು ಅಳವಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶಿವಮೊಗ್ಗದ ದುರ್ಗಿಗುಡಿ ಎರಡನೇ ತಿರುವು ಸೀತಾರಾಮ ಕಲ್ಯಾಣ ಮಂದಿರ ರಸ್ತೆಯಲ್ಲಿರುವ ವಿದ್ಯುತ್ ಕಂಬದ ಕೆಳಭಾಗದಲ್ಲಿ ಮುಕ್ಕಾಲ ಭಾಗ ಕಟ್ಟಾಗಿದ್ದು, ಬೀಳುವ ಹಂತದಲ್ಲಿದೆ. ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ನಗರದ ನಿವಾಸಿಗಳ ಆರೋಪವಾಗಿದೆ.ಯಾವಾಗಬೇಕಾದರೂ ನೆಲಕ್ಕೆ ಬೀಳುವ ಹಂತದಲ್ಲಿರುವ ವಿದ್ಯುತ್ ಕಂಬದಿಂದ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪ್ರಸಂಗ ಉದ್ಭವಿಸಿದೆ. ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯುತ್ ಕಂಬ ದೊಡ್ಡ ಅನಾಹುತವೇ ಆಗುವಷ್ಟು ಅಪಾಯದ ಮಟ್ಟದಲ್ಲಿದೆ, ಸುತ್ತಮುತ್ತ ಮನೆಗಳಿದ್ದು, ಮಕ್ಕಳು ಅಲ್ಲೆ ಆಟವಾಡುತ್ತಾರೆ ಅಂತಹ ಸಂದರ್ಭದಲ್ಲಿ ಏನಾದರೂ ವಿದ್ಯುತ್ ಕಂಬ ನೆಲಕ್ಕೆ ಬಿದ್ದರೆ ಇದಕ್ಕೆ ಹೊಣೆ ಯಾರು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.