ದಶಕಗಳ ಹೋರಾಟದ ಫಲವಾಗಿ ಸಿಕ್ಕ ವಿಶೇಷ ಸ್ಥಾನಮಾನದ ಮೇಲೆ ಮತ್ತೆ ಬೇರೆಯವರ ಕಣ್ಣು ಬಿದಿದ್ದು, ಸಂವಿಧಾನದ 371 (ಜೆ) ಕಲಂನ್ನು ವಿಸ್ತರಿಸಬೇಕು ಎನ್ನುವ ಅವೈಜ್ಞಾನಿಕ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಕನ್ನಡಪ್ರಭ ವಾರ್ತೆ ರಾಯಚೂರು
ದಶಕಗಳ ಹೋರಾಟದ ಫಲವಾಗಿ ಸಿಕ್ಕ ವಿಶೇಷ ಸ್ಥಾನಮಾನದ ಮೇಲೆ ಮತ್ತೆ ಬೇರೆಯವರ ಕಣ್ಣು ಬಿದಿದ್ದು, ಸಂವಿಧಾನದ 371 (ಜೆ) ಕಲಂನ್ನು ವಿಸ್ತರಿಸಬೇಕು ಎನ್ನುವ ಅವೈಜ್ಞಾನಿಕ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.ಸಂವಿಧಾನದ 371(ಜೆ) ವಿಧಿಯಡಿ ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ತಮ್ಮ ಜಿಲ್ಲೆಗೂ ವಿಸ್ತರಿಸುವಂತೆ ವಿಜಯಪುರ ಜಿಲ್ಲೆಯ ವಿವಿಧ ಸಂಘಟನೆಗಳು ಮತ್ತೆ ಕ್ಯಾತೆ ತೆಗೆದಿದೆ.ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ಇದೇ ನ.30ರಂದು ಸಿಂದಗಿ ಬಂದ್ಗೆ ಕರೆ ನೀಡಲಾಗಿದ್ದು, ಈ ಬೆಳವಣಿಗೆಯು ಕಲ್ಯಾಣ ಕರ್ನಾಟಕ ಭಾಗದ ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಹೋರಾಟದ ಫಲ: ರಾಜ್ಯದ ಪ್ರಾದೇಶಿಕ ಅಸಮಾನತೆ ನಿವಾರಣೆ ಹಾಗೂ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಉದ್ದೇಶದಿಂದ ಡಾ. ಡಿ.ಎಂ. ನಂಜುಂಡಪ್ಪ ವರದಿಯ ಅನ್ವಯ ಹಾಗೂ ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾ ನಿರಂತರ ಹೋರಾಟದ ಫಲವಾಗಿ ಸಂವಿಧಾನದ 98ನೇ ತಿದ್ದುಪಡಿ ಮೂಲಕ 371(ಜೆ) ವಿಧಿ ಜಾರಿಗೆ ಬಂದು, 2013ರಿಂದ ವಿಶೇಷ ಸೌಲಭ್ಯಗಳು ಅನುಷ್ಠಾನಗೊಂಡಿದೆ.ಇದರಿಂದಾಗಿ ಈ ಭಾಗದ ಕಲಬುರಗಿ, ರಾಯಚೂರು, ಬೀದರ್, ಯಾದಗಿರಿ, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ (7) ಜಿಲ್ಲೆಗಳಿಗೆ 371(ಜೆ) ವಿಶೇಷ ಸ್ಥಾನಮಾನ ನೀಡಿ ಅಷ್ಟೇ ಅಲ್ಲದೇ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಸಮಾನ ಅನುದಾನ ಹಂಚಿಕೆಯಾಗುತ್ತಿದ್ದು, ಇದೀಗ ಅನ್ಯ ಜಿಲ್ಲೆಗಳವರು ಕಲ್ಯಾನ ಕರ್ನಾಟಕದ ಜನರ ಅವಕಾಶವನ್ನು ಕಸಿದುಕೊಳ್ಳುವ ಹುನ್ನಾರಕ್ಕೆ ಜನಾಕ್ರೋಶವು ವ್ಯಕ್ತವಾಗುತ್ತಿದೆ.ಹಿಂದೆಯೂ ನಡೆದಿತ್ತು ವಿವಾದ: ವಿಜಯಪುರ ಜಿಲ್ಲೆಯನ್ನು 371(ಜೆ) ವ್ಯಾಪ್ತಿಗೆ ಸೇರಿಸಬೇಕೆಂಬ ಕೂಗು ಇದೇ ಮೊದಲೇನಲ್ಲ; ಹಿಂದೆಯೂ ಈ ವಿಚಾರವಾಗಿ ಹೋರಾಟಗಳು ನಡೆದಿದ್ದವು. 2018ರಲ್ಲಿ ಬಳ್ಳಾರಿ ಜಿಲ್ಲೆಯಿಂದ ಬೇರ್ಪಟ್ಟಿದ್ದ ಹರಪನಹಳ್ಳಿಯನ್ನು 371(ಜೆ) ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿತ್ತು. ಅದೇ ವರ್ಷ, ಅಂದಿನ ಸಚಿವ ಸಂಪುಟದ ಉಪಸಮಿತಿ ಸಭೆಯ ಅಧ್ಯಕ್ಷರಾಗಿದ್ದ ಸಚಿವ ಬಿ. ಶ್ರೀರಾಮುಲು ಅವರು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕನ್ನೂ 371(ಜೆ)ಗೆ ಸೇರಿಸುವುದಾಗಿ ಘೋಷಿಸಿ ತೀವ್ರ ಮುಜುಗರಕ್ಕೆ ಒಳಗಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದೀಗ ವಿಜಯಪುರ ಜಿಲ್ಲೆಯ ಸಿಂದಗಿ ಭಾಗದಲ್ಲಿ ಮತ್ತೆ ವಿಶೇಷ ಸ್ಥಾನಮಾನದ ಕೂಗು ಎದ್ದಿರುವುದು ಹಾಗೂ ನ. 30ರಂದು ಬಂದ್ಗೆ ಕರೆ ನೀಡಿರುವುದು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಜನರನ್ನು ಕೆರಳಿಸಿದೆ. ತಮ್ಮ ಪಾಲಿನ ಮೀಸಲಾತಿ ಮತ್ತು ಅನುದಾನಕ್ಕೆ ಕತ್ತರಿ ಬೀಳಬಹುದು ಎಂಬ ಆತಂಕದಿಂದ ಕಲ್ಯಾಣ ಕರ್ನಾಟಕ ಭಾಗದ ಹೋರಾಟಗಾರರು ಹಾಗೂ ಸಾರ್ವಜನಿಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.---
ಬಾಕ್ಸ್:ಕೆಲವರ ಹೋರಾಟ ಹಾಸ್ಯಾಸ್ಪದ
ಐತಿಹಾಸಿಕ ಕಾರಣಕ್ಕಾಗಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂವಿಧಾನ 371(ಜೆ ) ನೀಡಲಾಗಿದೆ. ದಶಕಗಳ ಅನ್ಯಾಯವನ್ನು ಸಹಿಸಿಕೊಂಡು ಹೋರಾಟ ಮಾಡಿಪಡೆದಿರುವ ಸೌಲಭ್ಯಕ್ಕೆ ರಾಜ್ಯದ ಇತರೆ ಪ್ರದೇಶದ ಜನ ಸೇರುವ ಪ್ರಯತ್ನ ಮಾಡುತ್ತಿರುವುದು ದುರಾದೃಷ್ಟಕರ, ಕಲ್ಯಾಣ ರ್ನಾಕಟಕದ ಜನತೆ ಯಾವುದೇ ಕಾರಣಕ್ಕೂಇಂತಹ ಪ್ರಯತ್ನಕ್ಕೆ ಅವಕಾಶ ನೀಡಬಾರದು, ಇತ್ತೀಚಿಗೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲ 371 (ಜೆ )ವ್ಯಾಪ್ತಿಗೆ ಸೇರಿಸುವಂತೆ ಹೋರಾಡುತ್ತಿ ರುವದು ಹಾಸ್ಯಾಸ್ಪದವಾಗಿದೆ. ಹೈದ್ರಾಬಾದ್ ಸಂಸ್ಥಾನವನ್ನು ಭಾರತ ಒಕ್ಕೂಟಕ್ಕೆ ಸೇರಿಸುವಂತೆ ರಮಾನಂದ ತೀರ್ಥರ ನೇತೃತ್ವದಲ್ಲಿ ಹೋರಾಟ ನಡೆದಿದೆ, ಅದಕ್ಕೆ ಕಾರಣ ಅವರು ಹೈದರಾಬಾದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿರುವದಕ್ಕೆ, ಅವರು ಸಿಂದಗಿಯವರು ಎಂದು ಸಿಂದಗಿ ನಮ್ಮ ಪ್ರದೇಶ ವ್ಯಾಪ್ತಿಗೆ ಸೇರಿಸಲು ಸಾಧ್ಯವಿಲ್ಲ, ನಾವು ಅದಕ್ಕೆ ಅವಕಾಶ ನೀಡುವುದಿಲ್ಲ, ಅವರ ಪ್ರಯತ್ನ ಹೀಗೆ ಮುಂದುವರೆದರೆ ವಿರೋಧದ ಹೋರಾಟ ತೀವ್ರ ಗೊಳಿಸ ಬೇಕಾಗುತ್ತದೆ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ಡಾ.ರಜಾಕ ಉಸ್ತಾದ ಹೇಳಿದರು.---
