ಪರವಾನಗಿ ಇಲ್ಲದೆ ಸುಮಾರು 18 ಕಾರುಗಳಿಂದ ಬಾಡಿಗೆ ಮಾಡುತ್ತಿದ್ದ ಪ್ರಕರಣವನ್ನು ಇಲ್ಲಿನ ಮಲ್ಪೆ ಠಾಣೆಯ ತೆಂಕನಿಡಿಯೂರು ಗ್ರಾಮದ ಬೆಳ್ಕಲೆ ಎಂಬಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ.

ಮಲ್ಪೆ: ಪರವಾನಗಿ ಇಲ್ಲದೆ ಸುಮಾರು 18 ಕಾರುಗಳಿಂದ ಬಾಡಿಗೆ ಮಾಡುತ್ತಿದ್ದ ಪ್ರಕರಣವನ್ನು ಇಲ್ಲಿನ ಮಲ್ಪೆ ಠಾಣೆಯ ತೆಂಕನಿಡಿಯೂರು ಗ್ರಾಮದ ಬೆಳ್ಕಲೆ ಎಂಬಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ.ಬುಧವಾರ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್‌ ಆ್ಯಂಡ್ ಮ್ಯಾಕ್ಸಿಕ್ಯಾಬ್‌ ಅಸೋಸಿಯೇಶನ್‌ ಇದರ ಮಲ್ಪೆ ಘಟಕದವರು ಮಲ್ಪೆ ಠಾಣೆಗೆ, ಕಳೆದ ಕೆಲವು ದಿನಗಳಿಂದ ಮಲ್ಪೆ ಮತ್ತು ಉಡುಪಿ ಪರಿಸರದಲ್ಲಿ ಅಧಿಕೃತ ಪರವಾನಗಿ ಇಲ್ಲದೆ ವೈಟ್‌ ಬೋರ್ಡ್‌ ಕಾರುಗಳನ್ನು ಬಾಡಿಗೆಗೆ ನೀಡುತ್ತಿದ್ದು, ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು.ಅದರಂತೆ ಮಲ್ಪೆ ಠಾಣೆಯ ಎಸೈ ಅನೀಲ್‌ ಕುಮಾರ್‌ ಮತ್ತು ಸಿಬ್ಬಂದಿ ಬೆಳ್ಕಲೆ ಹಿರಣ್ಯಧಾಮ ಲೇಔಟ್‌ ಎಂಬಲ್ಲಿ ಆರ್‌.ರಶೀದ್‌ ಎಂಬವರ ಮನೆಯಲ್ಲಿ ನಿಲ್ಲಿಸಿರುವ ಕಾರುಗಳ ಪರಿಶೀಲನೆ ನಡೆಸಿದರು. ಆಗ ಅಲ್ಲಿ 18 ವೈಟ್‌ ಬೋರ್ಡ್‌ ಕಾರುಗಳು ಪತ್ತೆಯಾಗಿದ್ದು, ಅವುಗಳನ್ನು ಬಾಡಿಗೆಗೆ ನೀಡುತ್ತಿರುವುದಾಗಿ ರಶೀದ್ ಒಪ್ಪಿಕೊಂಡಿದ್ದಾರೆ.

ಅವರಲ್ಲಿ ಈ ಕಾರುಗಳನ್ನು ಬಾಡಿಗೆಗೆ ನೀಡಲು ಸಾರಿಗೆ ಪ್ರಾಧಿಕಾರದಿಂದ ಪರವಾನಗಿ ಇರಲಿಲ್ಲ, ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಮಲ್ಪೆ ಠಾಣೆ ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.